ಮಧುಮೇಹಕ್ಕೆ ʻಈʼ ಎಲೆ ಬೆಸ್ಟ್‌ ಮದ್ದು! ಪ್ರತಿನಿತ್ಯ ತುಳಸಿಯನ್ನು ಈ ರೀತಿ ಸೇವಿಸಿ ಸಕ್ಕರೆ ಮಟ್ಟ ತಟ್ಟನೇ ಇಳೆಕೆಯಾಗುತ್ತದೆ

Tue, 27 Aug 2024-1:18 pm,

ಸಾಮಾನ್ಯವಾಗಿ ಇತ್ತೀಚೆಗೆ ಎಲ್ಲರನ್ನೂ ಕಾಡುವ ದೊಡ್ಡ  ತಲೆನೋವು ಎಂದರೆ ಸಕ್ಕರೆ ಕಾಯಿಲೆ. ಆದರೆ, ಸಕ್ಕರೆ ಕಾಯಿಲೆಗೂ ನೈಸರ್ಗಿಕ ಮದ್ದುಗಳಿದೆ. ಅದರಲ್ಲಿ ತುಳಸಿ ಕೂಡ ಒಂದು. ತುಲಸಿ ಎಲೆಯನ್ನು ಈ ರೀತಿ ಸೇವಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಅದು ಹೇಗೆ? ಈ ಸ್ಟೋರಿ ಓದಿ...

ಔಷಧಿಗಳಿಲ್ಲದೆ ನೈಸರ್ಗಿಕವಾಗಿ ಮಧುಮೇಹವನ್ನು ಕಡಿಮೆ ಮಾಡಲು ಅನೇಕರು ಭಯಸುತ್ತಾರೆ, ಅಂತಹವರಿಗೆ ತುಳಸಿ ಒಂದು ಪವಾಡ ಔಷಧಿ. ತುಳಸಿ ಎಲೆಗಳು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ.  

ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಬಹಳ ಮಹತ್ವವಿದೆ. ಆಯುರ್ವೇದದ ಪ್ರಕಾರ ತುಳಸಿ ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದೆ.  

ತುಳಸಿ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. 5-7 ತುಳಸಿ ಎಲೆಗಳನ್ನು ನಿಯಮಿತವಾಗಿ ತಿನ್ನುವುದು ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ದೇಹವನ್ನು ರೋಗಗಳಿಂದ ಮುಕ್ತವಾಗಿಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.  

ತುಳಸಿ ಎಲೆಗಳು ಕೊಲೆಸ್ಟ್ರಾಲ್ ಮತ್ತು ಮಧುಮೇಹ ರೋಗಿಗಳಿಗೆ ರಾಮಬಾಣ. ತುಳಸಿ ಎಲೆಗಳ 5 ಅದ್ಭುತ ಪ್ರಯೋಜನಗಳು ಇಲ್ಲಿವೆ.   

ತುಳಸಿ ಎಲೆಗಳಲ್ಲಿ ಹಲವಾರು ಔಷಧೀಯ ಗುಣಗಳಿವೆ. ಈ ಎಲೆಗಳನ್ನು ಆಯುರ್ವೇದದಲ್ಲಿ ಹಲವಾರು ರೋಗಗಳಿಗೆ ರಾಮಬಾಣವೆಂದು ಪರಿಗಣಿಸಲಾಗಿದೆ. ತುಳಸಿ ಎಲೆಗಳು ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ.   

ತುಳಸಿ ಎಲೆಗಳನ್ನು ಸೇವನೆಯಿಂದ ಕ್ಯಾನ್ಸರ್‌ನಂತಹ ರೋಗಗಳನ್ನು ತೊಲಗಿಸಿ ಬಹುದು.   

ತುಳಸಿಯಲ್ಲಿ ಮಧುಮೇಹ ನಿವಾರಕ ಗುಣವಿದೆ. ತುಳಸಿ ಎಲೆಯ ಸಾರವು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ ಎಂದು ಅಧ್ಯಯನವು ತೋರಿಸಿದೆ.  

ತುಳಸಿಯು ಖಿನ್ನತೆ ಹಾಗೂ ಒತ್ತಡವನ್ನು ನಿವಾರಿಸುವಲ್ಲಿ ಮೂಕ್ಯ ಪಾತ್ರ ವಹಿಸುತ್ತದೆ.   

ತುಳಸಿಯನ್ನು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ತುಳಸಿಯಲ್ಲಿರುವ ಯುಜೆನಾಲ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.  

ತುಳಸಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ. ಇದು ಉಸಿರಾಟ, ಮೂತ್ರ, ಹೊಟ್ಟೆ ಮತ್ತು ಚರ್ಮ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ತುಳಸಿ ಎಲೆಗಳು ಚರ್ಮಕ್ಕೆ ತುಂಬಾ ಒಳ್ಳೆಯದು.  

ತುಳಸಿ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿವೆ. ಹೃದ್ರೋಗ, ಸಂಧಿವಾತ ಅಷೆ ಅಲ್ಲದೆ ಕ್ಯಾನ್ಸರ್‌ನಂತಹ ರೋಗಗಳನ್ನು ದೂರವಾಗುತ್ತದೆ.   

ತುಳಸಿ ಎಲೆಗಳನ್ನು ಸೇವಿಸುವುದರಿಂದ ಹೊಟ್ಟೆಗೂ ಒಳ್ಳೆಯದು. ಇದನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ. ಈ ತುಳಸಿ ಸರಾಸರಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 3 ರಿಂದ 4 ತುಳಸಿ ಎಲೆಗಳನ್ನು ತಿನ್ನಿ.  

5-6 ತುಳಸಿ ಎಲೆಗಳನ್ನು ತೆಗೆದುಕೊಳ್ಳಿ. ಅವುಗಳನ್ನು ಸ್ವಚ್ಛಗೊಳಿಸಿ ಮತ್ತು ಗಾಜಿನ ನೀರಿನಲ್ಲಿ ಕುದಿಸಿ. ನೀರು ಕುದಿಯಲು ಆರಂಭಿಸಿದಾಗ ಕರಿಮೆಣಸಿನ ಪುಡಿ ಹಾಕಿ ಚೆನ್ನಾಗಿ ಕುದಿಯಲು ಬಿಡಿ. ನಂತರ ಈ ಕಷಾಯಕ್ಕೆ ಒಂದು ಚಮಚ ಸಕ್ಕರೆ ಸೇರಿಸಿ ಬಿಸಿಯಾಗಿರುವಾಗಲೇ ಕುಡಿಯಿರಿ.  

ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link