ನಿಂಬೆ ರಸಕ್ಕೆ ಈ ಎಲೆಯನ್ನು ಬೆರೆಸಿ ಸೇವಿಸಿದರೆ ಕೀಲುಗಳಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗಿ ನೀರಾಗುವುದು ! ಕಿಡ್ನಿ ಸ್ಟೋನ್ ಕೂಡಾ ಪುಡಿಯಾಗಿ ಹೊರ ಬರುವುದು
ಪ್ರತಿದಿನ ಎರಡು ತಾಜಾ ನಿಂಬೆಹಣ್ಣಿನ ರಸವನ್ನು 2 ಲೀಟರ್ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ರಕ್ತದಲ್ಲಿನ ಯೂರಿಕ್ ಆಸಿಡ್ ಕಡಿಮೆಯಾಗುತ್ತದೆ. ಇದು ಸಂಧಿವಾತದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಕೆಲವು ಅಧ್ಯಯನಗಳು ತೋರಿಸಿವೆ.
ನಿಂಬೆಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಕಂಡುಬರುತ್ತವೆ. ಇದು ದೇಹದಲ್ಲಿನ ಯೂರಿಕ್ ಆಸಿಡ್ ಅನ್ನು ತಟಸ್ಥಗೊಳಿಸುತ್ತದೆ.
ತುಳಸಿ ಎಲೆಗಳು - 5 ರಿಂದ 10, ನಿಂಬೆ ರಸ - 1 ಟೀಸ್ಪೂನ್ ನೀರು - 1 ಕಪ್
ಮೊದಲು 1 ಕಪ್ ನೀರಿಗೆ ತುಳಸಿ ಎಲೆಗಳನ್ನು ಹಾಕಿ ಸುಮಾರು 5 ರಿಂದ 10 ನಿಮಿಷಗಳ ಕಾಲ ಕುದಿಸಿ.ನಂತರ,ಅದನ್ನು ತಣ್ಣಗಾಗಲು ಬಿಡಿ. ಈಗ ಇದಕ್ಕೆ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಕುಡಿಯುವುದರಿಂದ, ದೇಹದಲ್ಲಿನ ಯೂರಿಕ್ ಆಸಿಡ್ ಕರಗಿ ಹೋಗುವುದು.
ಅಲ್ಲದೆ ಈ ನೀರು ಕಿಡ್ನಿ ಸ್ಟೋನ್ ಅನ್ನು ಪುಡಿ ಮಾಡಿ ಮೂತ್ರದ ಮೂಲಕವೇ ಹೊರ ಹಾಕುವ ಕೆಲಸ ಕೂಡಾ ಮಾಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.