ಕಿಡ್ನಿ ಸ್ಟೋನ್ ಇದ್ದರೆ ಮನೆಯಂಗಳದಲ್ಲೇ ಸಿಗುವ ಈ ಎಲೆಯ ರಸ ಕುಡಿಯಿರಿ: ಕಲ್ಲು ಸರಾಗವಾಗಿ ಹೊರಬರುತ್ತೆ! ನೋವು ಕೂಡ ಇರಲ್ಲ
ಕಿಡ್ನಿ ಸಮಸ್ಯೆ ಇದ್ದರೆ ಇಲ್ಲಿ ನೀಡಿರುವ ಕೆಲವು ಜ್ಯೂಸ್’ಗಳ ಸಹಾಯದಿಂದ ಪರಿಹಾರ ಪಡೆಯಬಹುದು. ಈ ಜ್ಯೂಸ್’ಗಳು ಯಾವುವು ಮತ್ತು ಅವುಗಳನ್ನು ಹೇಗೆ ತಯಾರಿಸುವುದು ಎಂದು ನೋಡೋಣ.
ಭಾರತದ ಖ್ಯಾತ ಮೂತ್ರಶಾಸ್ತ್ರಜ್ಞ ಡಾ.ಕುಲದೀಪ್ ಅಗರ್ವಾಲ್ ಅವರು ಮೂತ್ರಪಿಂಡದ ಕಲ್ಲುಗಳಿಂದ ನಿಮಗೆ ತೊಂದರೆಯಾಗಿದ್ದರೆ, ಈ 3 ವಿಧದ ಜ್ಯೂಸ್’ಗಳನ್ನು ಕುಡಿಯಲು ಸೂಚಿಸುತ್ತಾರೆ. ಇದರಿಂದ ನೀವು ನೋವು ಸೇರಿದಂತೆ ಅನೇಕ ಸಮಸ್ಯೆಗಳಿಂದ ಮುಕ್ತರಾಗಬಹುದು.
ನಿಂಬೆ ರಸ: ನಿಂಬೆ ಒಳಗೆ ಸಿಟ್ರಿಕ್ ಆಮ್ಲವಿದೆ. ಮೂತ್ರಪಿಂಡದ ಕಲ್ಲುಗಳಿಗೆ ನಿಂಬೆ ರಸವನ್ನು ಸೇವಿಸಿದರೆ, ಪರಿಹಾರ ಪಡೆಯಬಹುದು. ಒಂದು ಬಟ್ಟಲಿನಲ್ಲಿ ಮೊಸರು ತೆಗೆದುಕೊಂಡು ಅದಕ್ಕೆ ಒಂದು ಚಮಚ ನಿಂಬೆ ರಸವನ್ನು ಸೇರಿಸಿ, ಮಿಶ್ರಣ ಮಾಡಿ ಸೇವಿಸಿ.
ಟೊಮೆಟೊ ಜ್ಯೂಸ್: ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ಟೊಮೆಟೊ ಜ್ಯೂಸ್ ತುಂಬಾ ಉಪಯುಕ್ತ. ಎರಡು ಟೊಮೆಟೊಗಳನ್ನು ಚೆನ್ನಾಗಿ ತೊಳೆದು ಅವುಗಳನ್ನು ಮಿಕ್ಸಿಯಲ್ಲಿ ರುಬ್ಬಿ. ಇದಕ್ಕೆ ಉಪ್ಪು ಮತ್ತು ಕರಿಮೆಣಸಿನ ಪುಡಿಯನ್ನು ಬೆರೆಸಿ ಸೇವಿಸಿ, ಆ ಮಿಶ್ರಣವನ್ನು ಫ್ರಿಡ್ಜ್ ನಲ್ಲಿಟ್ಟು ನಂತರ ಜ್ಯೂಸ್ ರೂಪದಲ್ಲಿ ಸೇವಿಸಬಹುದು.
ತುಳಸಿ ಜ್ಯೂಸ್: ತುಳಸಿಯಿಂದ ತಯಾರಿಸಿದ ಜ್ಯೂಸ್ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಹೋಗಲಾಡಿಸಲು ಉಪಯುಕ್ತವಾಗಿದೆ. ತುಳಸಿ ಎಲೆಗಳ ರಸವನ್ನು ಹಿಂಡಿ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ. ಈ ಮಿಶ್ರಣವನ್ನು ಬೆಳಿಗ್ಗೆ ಮತ್ತು ಸಂಜೆ ಸೇವಿಸಿದರೆ ಕಿಡ್ನಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)