ತುಳಸಿ ಎಲೆ ಜೊತೆ ಇದನ್ನು ಬೆರಸಿ ಸೇವಿಸಿ ಸಾಕು.. ಯೂರಿಕ್ ಆಸಿಡ್ ಮಟ್ಟ ಕಡಿಮೆಯಾಗಿ ಕೀಲು, ಸಂಧಿ ನೋವು ಸಹ ಗುಣವಾಗುವುದು!
ಯೂರಿಕ್ ಆಸಿಡ್ ದೇಹದಲ್ಲಿ ಇರುವ ತ್ಯಾಜ್ಯವಾಗಿದ್ದು, ಇದು ಪ್ಯೂರಿನ್ ಎಂಬ ರಾಸಾಯನಿಕದ ವಿಭಜನೆಯಿಂದ ರೂಪುಗೊಳ್ಳುತ್ತದೆ. ಇದು ನಿರ್ದಿಷ್ಟ ಆಹಾರ ಮತ್ತು ಪಾನೀಯಗಳಲ್ಲಿ ಕಂಡುಬರುತ್ತದೆ. ದೇಹದಲ್ಲಿ ಹೆಚ್ಚಿನ ಮಟ್ಟದ ಯೂರಿಕ್ ಆಸಿಡ್‌ನಿಂದ ಹಲವಾರು ರೀತಿಯ ಸಮಸ್ಯೆಗಳು ಉಂಟಾಗಬಹುದು.
ಊತ, ನೋವು ಮತ್ತು ಕೆಂಪು ದದ್ದುಗಳಂತಹ ಸಮಸ್ಯೆಗಳು ಯೂರಿಕ್ ಆಸಿಡ್ ಹೆಚ್ಚಾದಾಗ ಉಂಟಾಗಬಹುದು. ಈ ಸಮಸ್ಯೆಯನ್ನು ಕಡಿಮೆ ಮಾಡಲು ತುಳಸಿ ಎಲೆಗಳನ್ನು ಸೇವಿಸಬಹುದು. ತುಳಸಿ ಎಲೆಗಳಲ್ಲಿರುವ ಗುಣಲಕ್ಷಣಗಳು ಹೆಚ್ಚಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ.
ತುಳಸಿ ರಕ್ತದಲ್ಲಿ ಸಂಗ್ರಹವಾಗಿರುವ ಯೂರಿಕ್ ಆಸಿಡ್ ಹರಳುಗಳನ್ನು ಒಡೆಯಲು ಮತ್ತು ಅವುಗಳನ್ನು ತೆಗೆದುಹಾಕಲು ಇದು ಪರಿಣಾಮಕಾರಿಯಾಗಿದೆ. ಆಯುರ್ವೇದದಲ್ಲಿ ತುಳಸಿ ಎಲೆಗಳಿಗೆ ವಿಶೇಷ ಮಹತ್ವವಿದೆ. ತುಳಸಿ ಎಲೆಗಳು ದೇಹದ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸುವ ಪ್ರಮುಖ ಸಂಯುಕ್ತಗಳನ್ನು ಹೊಂದಿರುತ್ತವೆ.
ತುಳಸಿಯು ನೈಸರ್ಗಿಕ ಮೂತ್ರವರ್ಧಕವನ್ನು ಹೊಂದಿದೆ. ಇದು ಮೂತ್ರದ ಮೂಲಕ ದೇಹದಲ್ಲಿ ಇರುವ ಹೆಚ್ಚುವರಿ ಯೂರಿಕ್ ಆಮ್ಲದ ಮಟ್ಟವನ್ನು ಹೊರಹಾಕುವಲ್ಲಿ ಪರಿಣಾಮಕಾರಿಯಾಗಿದೆ. ನಿಮ್ಮ ದೈನಂದಿನ ಜೀವನಶೈಲಿಯಲ್ಲಿ ತುಳಸಿ ಎಲೆಗಳನ್ನು ಸೇರಿಸಿಕೊಳ್ಳಬಹುದು, ಇದು ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ.
ಯೂರಿಕ್ ಆಸಿಡ್ ನಿಯಂತ್ರಿಸಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಅಗಿಯಬಹುದು. ಇದಕ್ಕಾಗಿ ಒಂದೆರಡು ತುಳಸಿ ಎಲೆಗಳನ್ನು ಕಿತ್ತು ಶುದ್ಧ ನೀರಿನಿಂದ ತೊಳೆಯಿರಿ. 4 -5 ತುಳಸಿ ಎಲೆಗಳನ್ನು ಪ್ರತಿದಿನ ಬರಿಬಾಯಲ್ಲಿ ಜಗಿದು ತಿನ್ನಬೇಕು.
ಯೂರಿಕ್ ಆಸಿಡ್ ತುಳಸಿಯಿಂದ ತಯಾರಿಸಿದ ಟೀ ಸೇವನೆಯಿಂದಲೂ ಯೂರಿಕ್ ಆಮ್ಲವನ್ನು ನಿಯಂತ್ರಿಸಬಹುದು. 8 - 10 ತುಳಸಿ ಎಲೆಗಳನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ. 10 ನಿಮಿಷ ಕುದಿಸಿದ ಬಳಿಕ ಸೋಸಿ ಆರಿಸಿ ಉಗುರು ಬೆಚ್ಚಗಿರುವಾಗ ಕುಡಿಯಿರಿ.
ತುಳಸಿ ಎಲೆಗಳ ರಸ ಹಿಂಡಿ ಅದಕ್ಕೆ ಶುಂಠಿ ರಸ ಬೆರೆಸಿ ಸೇವಿಸುವುದರಿಂದ ಯೂರಿಕ್ ಆಸಿಡ್ ಬಹುಬೇಗನೇ ಕರಗಿ ಹೊರ ಹೋಗುತ್ತದೆ. ತುಳಸಿ ಮತ್ತು ಶುಂಠಿ ಕಷಾಯವನ್ನು ಸಹ ತಯಾರಿಸಿ ಕುಡಿಯಬಹುದು. ಇದು ಸಂಧಿವಾತದ ನೋವನ್ನು ಕೂಡ ಗುಣ ಪಡಿಸುವುದು.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.