ತುಳಸಿ ಎಲೆ ಹೀಗೆ ಬಳಸಿದ್ರೆ ತಲೆಯಲ್ಲಿ ಒಂದೇ ಒಂದು ಬಿಳಿ ಕೂದಲು ಉಳಿಯುವುದಿಲ್ಲ !
ನಿಮ್ಮ ಕೂದಲನ್ನು ಕಪ್ಪಾಗಿಸಲು ತುಳಸಿ ಎಲೆ ಸಾಕು. ಇದು ಕೆವಲೇ ದಿನಗಳಲ್ಲಿ ನಿಮ್ಮ ಬಿಳಿ ಕೂದಲನ್ನು ಗಾಢ ಕಪ್ಪು ಬಣ್ಣಕ್ಕೆ ತಿರುಗಿಸುತ್ತದೆ.
ತುಳಸಿ ಎಲೆ ಪೇಸ್ಟ್ ಮಾಡಿ ಕೂದಲಿಗೆ ಬಳಸಿದರೆ ಕೂದಲು ಉದುರುವಿಕೆ, ಒಣ ನಿರ್ಜೀವ ಕೂದಲು, ತಲೆಹೊಟ್ಟು ಮುಂತಾದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ನಿಮ್ಮ ಕೂದಲು ತುಂಬಾ ಒರಟಾಗಿದ್ದರೆ, ಒಂದು ಚಮಚ ತುಳಸಿ ಎಲೆಯ ರಸವನ್ನು ಒಂದು ಚಮಚ ತೆಂಗಿನ ಎಣ್ಣೆಗೆ ಬೆರೆಸಿ ಮತ್ತು ಅದನ್ನು ನಿಮ್ಮ ಕೂದಲಿಗೆ ಹಚ್ಚಿ, ಹೀಗೆ ಮಾಡುವುದರಿಂದ ಕೂದಲು ಮೃದುವಾಗಿ, ಹೊಳೆಯುತ್ತದೆ.
ತಲೆಹೊಟ್ಟು ಮುಂತಾದ ಸಮಸ್ಯೆ ಕಡಿಮೆ ಮಾಡಲು ತುಳಸಿ ಸಹಾಯ ಮಾಡುತ್ತದೆ. 15 ರಿಂದ 20 ತುಳಸಿ ಎಲೆಗಳನ್ನು ಪುಡಿಮಾಡಿ ಮತ್ತು ಪೇಸ್ಟ್ ಮಾಡಿ. ಅದನ್ನು ನಿಮ್ಮ ನೆತ್ತಿಯ ಮೇಲೆ 30 ನಿಮಿಷಗಳ ಕಾಲ ಹಚ್ಚಿ, ಬಳಿಕ ತಲೆಸ್ನಾನ ಮಾಡಿ.
ಬಿಳಿ ಕೂದಲಿನ ಸಮಸ್ಯೆ ನಿಮ್ಮನ್ನು ಸಹ ಕಾಡುತ್ತಿದ್ದರೆ, ರಾಸಾಯನಿಕ ಬಣ್ಣವನ್ನು ಹಚ್ಚಬೇಡಿ. ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ತುಳಸಿ ಎಲೆಗಳನ್ನು ಬಳಸಿ. ತುಳಸಿ ಪೇಸ್ಟ್ ಅನ್ನು ವಾರಕ್ಕೆ ಎರಡು ಮೂರು ಬಾರಿ ತಲೆಗೆ ಹಚ್ಚಿ ಅರ್ಧ ಗಂಟೆ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ.