ಯೂರಿಕ್ ಆಸಿಡ್ ಹೆಚ್ಚಾದಾಗ ತುಳಸಿ ಎಲೆಯನ್ನು ಇದರ ಜೊತೆ ಸೇವಿಸಿ ಸಾಕು.. ಕೀಲು, ಸಂಧಿ ನೋವಿಗೂ ಸಂಪೂರ್ಣ ಪರಿಹಾರ ಸಿಗುತ್ತದೆ !
ಅಧಿಕ ಯೂರಿಕ್ ಆಸಿಡ್ ಕೀಲು ನೋವಿಗೆ ಕಾರಣವಾಗುತ್ತದೆ. ನಿಯಂತ್ರಿತ ಮಟ್ಟಕ್ಕಿಂತ ಯೂರಿಕ್ ಆಸಿಡ್ ಹೆಚ್ಚಾದರೆ ಮೂತ್ರಪಿಂಡದ ಕಲ್ಲಿಗೂ ಕಾರಣವಾಗಬಹುದು.
ತುಳಸಿ ಎಲ್ಲರ ಮನೆ ಮುಂದೆ ಇರುವ ಗಿಡ. ತುಳಸಿ ಎಲೆಗಳು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿವೆ. ತುಳಸಿ ಎಲೆ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ತುಳಸಿ ಎಲೆಗಳನ್ನು ನಿಯಮಿತವಾಗಿ ಜಗಿಯುವುದರಿಂದ ಯೂರಿಕ್ ಆಸಿಡ್ ಹತೋಟಿಗೆ ಬರುತ್ತದೆ. ಅಲ್ಲದೇ ತುಳಸಿ ಎಲೆಗಳ ರಸ ಹಿಂಡಿ ಶುಂಠಿ ರಸದ ಜೊತೆ ಬೆರೆಸಿ ಸೇವಿಸುವುದರಿಂದ ಯೂರಿಕ್ ಆಸಿಡ್ ಕರಗಿ ಹೊರ ಹೋಗುತ್ತದೆ.
ಬೇವಿನ ಎಲೆಗಳು ರಕ್ತವನ್ನು ಶುದ್ಧೀಕರಿಸುತ್ತವೆ. ಇದು ಯೂರಿಕ್ ಆಮ್ಲವನ್ನು ಸಹ ತೆಗೆದುಹಾಕುತ್ತದೆ. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಇದು ಯೂರಿಕ್ ಆಮ್ಲದ ಮಟ್ಟವನ್ನು ನಿಯಂತ್ರಿಸುತ್ತದೆ.
ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಕೊತ್ತಂಬರಿ ಸೊಪ್ಪು ಉಪಯುಕ್ತವಾಗಿದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕೊತ್ತಂಬರಿ ಸೊಪ್ಪು ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿದೆ. ಜೀ ಕನ್ನೆ ನ್ಯೂಸ್ ಇದಕ್ಕೆ ಯಾವುದೇ ರೀತಿಯಲ್ಲೂ ಹೊಣೆಯಲ್ಲ.