Tulsi Manjari Remedies: ತುಳಸಿಯಲ್ಲಿ ತುಂಬಿರುವ ಮಂಜಿರಿಗಳನ್ನು ಹಾಳಾಗಲು ಬಿಡಬೇಡಿ, ಈ ಉಪಾಯ ಅನುಸರಿಸಿ
ತಾಯಿ ಲಕ್ಷ್ಮಿಗೆ ಅರ್ಪಿಸಿ: ನಿಯಮಿತವಾಗಿ ಶುಕ್ರವಾರದ ದಿನ ತಾಯಿ ಲಕ್ಷ್ಮಿಯ ಚರಣ ಕಮಲದಲ್ಲಿ ತುಳಸಿಯ ಮಂಜಿರಿಗಳನ್ನು ಅರ್ಪಿಸುವುದರಿಂದ ದೇವಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ ಮತ್ತು ನಿಮ್ಮೆಲ್ಲಾ ಮನೋಕಾಮನೆಗಳು ನೆರವೇರುತ್ತವೆ.
ಮೋಕ್ಷ ಪ್ರಾಪ್ತಿಗಾಗಿ ಈ ರೀತಿ ಬಳಸಿ: ಧಾರ್ಮಿಕ ನಂಬಿಕೆಗಳ ಪ್ರಕಾರ ತುಳಸಿಯ ಮಂಜಿರಿಗಳನ್ನು ಶ್ರೀವಿಷ್ಣು ಹಾಗೂ ಶಿವನಿಗೆ ಅರ್ಪಿಸುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ವ್ಯಕ್ತಿಗೆ ಜನ್ಮ-ಮರಣದ ಚಕ್ರದಿಂದ ಮುಕ್ತಿ ಪ್ರಾಪ್ತಿಯಾಗಿ ಈಶ್ವರನ ಚರಣಕಮಲಗಳಲ್ಲಿ ಸ್ಥಾನ ಸಿಗುತ್ತದೆ ಎನ್ನಲಾಗಿದೆ.
ಕೆಂಪು ವಸ್ತ್ರದಲ್ಲಿ ಕಟ್ಟಿಕೊಳ್ಳಿ: ಲಕ್ಷ್ಮಿಯ ಕೃಪೆಯನ್ನು ಪಡೆದುಕೊಳ್ಳಲು ಒಂದು ಕೆಂಪು ಬಣ್ಣದ ವಸ್ತ್ರದಲ್ಲಿ ತುಳಸಿಯ ಮಂಜಿರಿಗಳನ್ನು ಒಟ್ಟಿಗೆ ಇರಿಸಿ, ಅದನ್ನು ನೀವು ಹಣವಿಡುವ ಜಾಗದಲ್ಲಿ ಇಡಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ದೇವಿ ಲಕ್ಷ್ಮಿ ವಾಸವಾಗುತ್ತಾಳೆ ಹಾಗೂ ಮನೆಯಲ್ಲಿ ಹಣಕಾಸಿನ ಮುಗ್ಗಟ್ಟು ಎಂದಿಗೂ ಕೂಡ ಎದುರಾಗುವುದಿಲ್ಲ.
ಗಂಗಾಜಲದಲ್ಲಿ ಬೆರೆಸಿ: ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ತೊಲಗಿಸಲು ತುಳಸಿಯ ಮಂಜಿರಿಗಳನ್ನು ಬಳಸಲಾಗುತ್ತದೆ ಎನ್ನಲಾಗಿದೆ. ಇದಕ್ಕಾಗಿ ಶುಭ ಮುಹೂರ್ತದಲ್ಲಿ ಗಂಗಾಜಲದಲ್ಲಿ ಮಂಜಿರಿಗಳನ್ನು ಹಾಕಿ ಮನೆಯಲ್ಲಿರಿಸಬೇಕು ಮತ್ತು ವಾರದಲ್ಲಿ ಎರಡು ದಿನ ಈ ಗಂಗಾಜಲವನ್ನು ಮನೆತುಂಬ ಸಿಂಪಡಿಸುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ತೊಲಗುತ್ತದೆ ಎನ್ನಲಾಗುತ್ತದೆ.
ಶಿವನಿಗೆ ಮಂಜಿರಿಗಳನ್ನು ಅರ್ಪಿಸಿ: ಹಾಗೆ ನೋಡಿದರೆ ಶಿವನಿಗೆ ಹಾಗೂ ಶ್ರೀಗಣೇಶನಿಗೆ ಅಪ್ಪಿತಪ್ಪಿಯೂ ಕೂಡ ತುಳಸಿಯನ್ನು ಅರ್ಪಿಸಬಾರದು ಎಂದು ಹೇಳಲಾಗುತ್ತದೆ. ಆದರೆ, ನೀವು ತುಳಸಿಯ ಮಂಜಿರಿಗಳನ್ನು ಶಿವನಿಗೆ ಅರ್ಪಿಸಬಹುದು ಎನ್ನಲಾಗುತ್ತದೆ. ಶಿವನಿಗೆ ತುಳಸಿಯ ಮಂಜಿರಿಗಳನ್ನು ಅರ್ಪಿಸಿದರೆ, ಕೌಟುಂಬಿಕ ಸುಖ ಪ್ರಾಪ್ತಿಯಾಗುತ್ತದೆ. ಇದಲ್ಲದೆ, ಯಾವುದೇ ಓರ್ವ ವ್ಯಕ್ತಿಯ ಜೀವನದಲ್ಲಿ ಪ್ರೀತಿಯ ಕೊರತೆ ಇದ್ದರೆ ಅಥವಾ ವಿವಾಹದಲ್ಲಿ ಅಡಚಣೆಗಳಿದ್ದರೆ, ಹಾಲಿನಲ್ಲಿ ಮಂಜಿರಿಗಳನ್ನು ಹಾಕಿ ಅಭಿಷೇಕ ಮಾಡಿದರೆ ಲಾಭ ಸಿಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.