ತುಳಸಿ ಗಿಡವನ್ನು ಇಡುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ! ಇದು ಖಂಡಿತ ಅಶುಭ?!

Sat, 04 Jan 2025-1:22 pm,

Tulsi Vastu: ವಾಸ್ತುವಿನ ಪ್ರಕಾರ ಅನೇಕರು ತುಳಸಿ ಗಿಡವನ್ನು ಎಲ್ಲಂದರಲ್ಲಿ, ಹೇಗಂದರೇಗೆ ನೆಡುತ್ತಾರೆ, ಆದರೆ ಈ ರೀತಿ ಮಾಡುವುದರಿಂದ ನಿಮಗೆ ಅಶುಭ ಉಂಟಾಗುತ್ತದೆ. ತುಳಸಿ ಗಿಡವನ್ನು ನೆಡುವಾಗ ಕೆಲಸು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅವುಗಳನ್ನು ಸರಿಯಾದ ದಿಕ್ಕಿನಲ್ಲಿ, ಸರಿಯಾದ ರೀತಿಯಲ್ಲಿ ಇಡಬೇಕು.  

ಅನೇಕರು ಸಾಮಾನ್ಯವಾಗಿ ತುಳಸಿ ಗಿಡವನ್ನು ತಮ್ಮ ಕಛೇರಿಯ ಡೆಸ್ಕ್‌ ಮೇಲೆ ಇಟ್ಟುಕೊಳ್ಳುತ್ತಾರೆ. ಕಲೆವು ಗಿಡಗಳನ್ನು ನಿಮ್ಮ ಮೇಜಿನ ಮೇಲೆ ಇಟ್ಟುಕೊಳ್ಳುವುದನ್ನು ಅಶುಭ ಎಂದು ಹೇಳಲಾಗುತ್ತದೆ.   

ವಾಸ್ತು ಶಾಸ್ತ್ರ ಮತ್ತು ಹಿಂದೂ ಧರ್ಮದಲ್ಲಿ, ತುಳಸಿ ಸಸ್ಯವನ್ನು ಅತ್ಯಂತ ಪವಿತ್ರ ಮತ್ತು ಧನಾತ್ಮಕ ಶಕ್ತಿಯ ಮೂಲವೆಂದು ಪರಿಗಣಿಸಲಾಗುತ್ತದೆ, ಆದರೆ ಅದನ್ನು ಎಲ್ಲಿ ಮತ್ತು ಹೇಗೆ ಇಡಬೇಕು ಎಂಬುದಕ್ಕೆ ಕೆಲವು ನಿಯಮಗಳಿವೆ.  

ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ದೇವರೆಂದು ಪೂಜಿಸಲಾಗುತ್ತದೆ. ಕಚೇರಿಯ ಮೇಜಿನ ಮೇಲೆ ಯಾರೂ ಕೂಡ ಪೂಜೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಇದನ್ನು ತುಳಸಿಗೆ ಮಾಡಿದ ಅವಮಾನ ಎಂದು ಪರಿಗಣಿಸಲಾಗುತ್ತದೆ.  

ನೀವು ತುಳಸಿ ಗಿಡ ಅಲ್ಲದೆ ನಿಮ್ಮ ಡೆಸ್ಕ್‌ನ ಮೇಲೆ ಗಿಡಗಳನ್ನು ಇಡಲು ಭಯಸಿದರೆ ಅಂತಹ ಪರಿಸ್ಥಿಯಲ್ಲಿ ನೀವು ಮನಿ ಪ್ಲಾಂಟ್, ಸ್ನೇಕ್ ಪ್ಲಾಂಟ್ ಅಥವಾ ಸಣ್ಣ ಬಿದಿರು ಗಿಡಗಳನ್ನು ಇರಿಸಿ. ಈ ಸಸ್ಯಗಳು ಸಮೃದ್ಧಿ ಮತ್ತು ಪ್ರಗತಿಯ ಸಂಕೇತಗಳಾಗಿವೆ.  

ಹಾಗೆಯೂ ನಿಮಗೆ ತುಳಸಿ ಗಿಡವನ್ನೆ ಇಡಬೇಕು ಎನಿಸಿದರೆ, ಆಫೀಸ್ ಗಾರ್ಡನ್ ಅಥವಾ ಬಾಲ್ಕನಿಯಲ್ಲಿ ಇರಿಸಿ, ಕಚೇರಿಯಲ್ಲಿ ಪೂಜಾ ಸ್ಥಳವಿದ್ದರೆ, ನೀವು ತುಳಸಿಯನ್ನು ಇರಿಸಬಹುದು.  

ತುಳಸಿ ಗಿಡವು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ ಮತ್ತು ಇದು ರಾಹು, ಕೇತು ಮತ್ತು ಶನಿಯಂತಹ ಕ್ರೂರ ಗ್ರಹಗಳ ನಕಾರಾತ್ಮಕತೆಯನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಮನೆಯಲ್ಲಿ ಶಾಂತಿ ಮತ್ತು ಸಂತೋಷವನ್ನು ಕಾಪಾಡಿಕೊಳ್ಳಲಾಗುತ್ತದೆ.  

ಜಾತಕದಲ್ಲಿ ಶನಿ, ರಾಹು ಅಥವಾ ಕೇತುಗಳ ಸ್ಥಿತಿ ಇರುವವರು ತುಳಸಿಯನ್ನು ಪೂಜಿಸಿ ತುಳಸಿ ಎಲೆಗಳನ್ನು ಸೇವಿಸುವುದರಿಂದ ಲಾಭವಾಗುತ್ತದೆ. ತುಳಸಿ ಗಿಡವು ರಾಹುಕೇತುವಿನ ದೋಷಗಳನ್ನು ಶಮನಗೊಳಿಸುತ್ತದೆ ಮತ್ತು ಕಾಲ ಸರಪದೋಷದ ಪರಿಣಾಮವನ್ನು ಕಡಿಮೆ ಮಾಡುತ್ತದೆ, ಪ್ರತಿದಿನ ತುಳಸಿ ಗಿಡದ ಮುಂದೆ ದೀಪವನ್ನು ಹಚ್ಚುವುದು ಶನಿದೋಷ ಮತ್ತು ಪಿತೃದೋಷದಿಂದ ಪರಿಹಾರವನ್ನು ನೀಡುತ್ತದೆ.  

ತುಳಸಿ ಗಿಡವನ್ನು ನಿತ್ಯವೂ ಪೂಜಿಸುವುದರಿಂದ ಧನಲಾಭವಾಗುತ್ತದೆ ಮತ್ತು ಶುಕ್ರವಾರದಂದು ಮನೆಯಲ್ಲಿ ಮಹಾಲಕ್ಷ್ಮಿಯು ನೆಲೆಸುತ್ತಾಳೆ ತುಳಸಿ ಎಲೆಗಳನ್ನು ವಿಷ್ಣುವಿಗೆ ಅರ್ಪಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link