Tulsi plant Vastu: ತುಳಸಿ ಗಿಡ ನೆಡುವಾಗ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ!
ತುಳಸಿ ಗಿಡ ನೆಡುವಾಗ ಅಪ್ಪಿತಪ್ಪಿಯೂ ಕೆಲವು ತಪ್ಪುಗಳನ್ನು ಮಾಡಬಾರದು. ತುಳಸಿ ಗಿಡವನ್ನು ಎಲ್ಲೆಂದರಲ್ಲಿ ನೆಡುವಂತಿಲ್ಲ. ಮಣ್ಣಿನ ಪಾಟ್ ಅಥವಾ ಅದಕ್ಕೆಂದೇ ಪ್ರತ್ಯೇಕವಾಗಿ ನಿರ್ಮಿಸಲಾಗಿರುವ ಕಟ್ಟೆಯಲ್ಲಿ ತುಳಸಿ ಗಿಡವನ್ನು ನೆಡಬೇಕು. ತುಳಸಿ ಗಿಡವನ್ನೂ ಯಾವತ್ತೂ ಮನೆಯ ಪೂರ್ವ ದಿಕ್ಕಿನಲ್ಲಿಡಬೇಕು.
ತುಳಸಿ ಗಿಡ ನೆಡುವಾಗ ಅಥವಾ ಅದರ ದಳವನ್ನು ಕೊಯ್ಯುವಾಗ ಅಶುದ್ಧವಾಗಿರಬಾರದು. ಯಾಕೆಂದರೆ ತುಳಸಿ ಮಾತೆಗೆ ಇದರಿಂದ ಅಪಮಾನವಾದಂತಾಗುತ್ತದೆ. ಆದಷ್ಟು ಬೆಳಗಿನ ಹೊತ್ತು ತುಳಸಿ ದಳವನ್ನು ಕೊಯ್ಯಬೇಕು.
ತುಳಸಿ ಗಿಡವನ್ನು ಆದಷ್ಟು ಗುರುವಾರ ಅಥವಾ ಶುಕ್ರವಾರ ನೆಟ್ಟರೆ ಶುಭ. ಈ ದಿನಗಳಲ್ಲಿ ತುಳಸಿ ನೆಟ್ಟರೆ ಮನೆಯಲ್ಲಿ ಆರ್ಥಿಕ ಸಂಕಷ್ಟಗಳು ದೂರವಾಗಿ ತಾಯಿ ಲಕ್ಷ್ಮೀದೇವಿ ನೆಲೆಸುತ್ತಾಳೆಂಬ ನಂಬಿಕೆಯಿದೆ. ಪ್ರತಿನಿತ್ಯ ತುಳಸಿ ಮುಂದೆ ಒಂದು ದೀಪ ಹಚ್ಚಿ ಪೂಜಿಸಿದರೆ ನಿಮಗೆ ತಾಯಿ ಲಕ್ಷ್ಮೀದೇವಿಯ ಆಶೀರ್ವಾದ ದೊರೆಯುತ್ತದೆ.
ಭಕ್ತಿಯಿಂದ ಪ್ರತಿದಿನವೂ ತುಳಸಿ ಗಿಡವನ್ನು ಪೂಜಿಸಿದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಸಂತೋಷದ ವಾತಾವರಣವಿರುತ್ತದೆ. ಆರ್ಥಿಕ ಪ್ರಗತಿಯ ಜೊತೆಗೆ ಸುಖ-ಸಂತೋಷ ನಿಮ್ಮದಾಗುತ್ತದೆ. ಹೀಗಾಗಿ ತುಳಸಿ ಗಿಡದ ನಿಯಮಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ತುಂಬಾ ಮುಖ್ಯ.