Tulsi Plant Vastu: ತುಳಸಿ ಸುತ್ತ ಇಂತಹ ವಸ್ತುಗಳನ್ನು ಇಡುವುದು ಬಡತನಕ್ಕೆ ಆಹ್ವಾನ ನೀಡಿದಂತೆ!
ಮುಳ್ಳಿನ ಗಿಡಗಳು: ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಗಿಡದ ಸುತ್ತಮುತ್ತ ಮುಳ್ಳಿನ ಗಿಡಗಳನ್ನು ಇಡುವ ತಪ್ಪನ್ನು ಅಪ್ಪಿತಪ್ಪಿಯೂ ಮಾಡಬಾರದು. ಇದರಿಂದ ಮನೆಯಲ್ಲಿ ನಕಾರಾತ್ಮಕತೆ ಹರಡುತ್ತದೆ.
ಪೊರಕೆ: ಪೊರಕೆಯನ್ನು ಲಕ್ಷ್ಮಿ ಸ್ವರೂಪ ಎಂದು ಭಾವಿಸಲಾಗಿದೆ. ಆದರೆ, ತುಳಸಿ ಗಿಡದ ಆಸುಪಾಸಿನಲ್ಲಿ ಪೊರಕೆ ಇಡುವುದರಿಂದ ಅಂತಹ ಮನೆಯಲ್ಲಿ ದಾರಿದ್ರ್ಯ ವಕ್ಕರಿಸುತ್ತದೆ ಎಂದು ಹೇಳಲಾಗುತ್ತದೆ.
ಶಿವ ಲಿಂಗ: ತುಳಸಿ ವಿಷ್ಣು ಪ್ರಿಯೆ. ಹಾಗಾಗಿಯೇ, ಶಿವನ ಆರಾಧನೆಯನ್ನು ಸ=ತುಳಸಿಯನ್ನು ಬಳಸಲಾಗುವುದಿಲ್ಲ. ಹೀಗಿರುವಾಗ ತುಳಸಿ ಸಸ್ಯದ ಬಳಿ ಶಿವಲಿಂಗ ಇಡುವುದರಿಂದ ಶಿವನ ಕೋಪಕ್ಕೆ ತುತ್ತಾಗಬಹುದು ಎನ್ನಲಾಗುತ್ತದೆ.
ಕಸ: ತುಳಸಿಯನ್ನು ಪವಿತ್ರ ಸಸ್ಯ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ, ಈ ಸಸ್ಯಕ್ಕೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ. ಆದರೆ, ಗೊತ್ತೋ ಅಥವಾ ಗೊತ್ತಿಲ್ಲದೆಯೋ ಈ ಸಸ್ಯದ ಬಳಿ ಕಸ ಹಾಕುವ ತಪ್ಪನ್ನು ಎಂದಿಗೂ ಮಾಡಬೇಡಿ. ಇದರಿಂದ ಮನೆಯಲ್ಲಿ ಬಡತನ ಬರುತ್ತದೆ ಎಂದು ಹೇಳಲಾಗುತ್ತದೆ.
ಶೂ ಅಥವಾ ಚಪ್ಪಲಿ: ತುಳಸಿ ಗಿಡ ಸಮೀಪದಲ್ಲಿ ಶೂ, ಚಪ್ಪಲಿ ಇನ್ನಾವುದೇ ಪಾದರಕ್ಷೆಗಳನ್ನು ಇಡಬಾರದು. ಇದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು. ಅಂತಹ ಮನೆಯಲ್ಲಿ ನಕಾರಾತ್ಮಕತೆ ತಾಂಡವವಾಡುತ್ತದೆ ಎನ್ನಲಾಗುವುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.