Tulsi Upay: ಪ್ರತಿನಿತ್ಯ ತುಳಸಿಗೆ ಇವುಗಳನ್ನು ಅರ್ಪಿಸಿದರೆ ಹರಸಿ ಬರುತ್ತೆ ಸಂಪತ್ತು
ಹಿಂದೂ ಧರ್ಮದಲ್ಲಿ ತುಳಸಿ ಸಸ್ಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ನಿತ್ಯ ಯಾವ ಮನೆಯಲ್ಲಿ ತುಳಸಿ ಪೂಜೆ ಮಾಡುತ್ತಾರೋ ಆ ಮನೆಯಲ್ಲಿ ಸದಾ ಭಗವಾನ್ ವಿಷ್ಣುವಿನ ಜೊತೆಗೆ ಲಕ್ಷ್ಮಿಯೂ ನೆಲೆಸಿರುತ್ತಾಳೆ ಎಂಬ ನಂಬಿಕೆಯಿದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ನಿತ್ಯ ತುಳಸಿ ಸಸ್ಯಕ್ಕೆ ಕೆಲವು ವಿಶೇಷ ವಸ್ತುಗಳನ್ನು ಅರ್ಪಿಸುವುದರಿಂದ ಅಂತಾ ಮನೆಯಲ್ಲಿ ಲಕ್ಷ್ಮಿಯ ಅಪಾರ ಆಶೀರ್ವಾದದೊಂದಿಗೆ ಸುಖ-ಸಂಪತ್ತು ಹುಡುಕಿ ಬರುತ್ತದೆ ಎನ್ನಲಾಗುತ್ತದೆ. ಅವುಗಳೆಂದರೆ...
ಅರಿಶಿನದ ನೀರು: ಪ್ರತಿ ದಿನ ತುಳಸಿ ಸಸ್ಯಕ್ಕೆ ತಾಮ್ರದ ಪಾತ್ರೆಯಲ್ಲಿ ಅರಿಶಿನ ಬೆರೆಸಿದ ನೀರನ್ನು ಅರ್ಪಿಸಬೇಕು.
ಹಸಿ ಹಾಲು: ಮಾತೆ ತುಳಸಿಯನ್ನು ಪೂಜಿಸುವಾಗ ಹಸಿ ಹಾಲನ್ನು ಅರ್ಪಿಸಿದರೆ ತುಂಬಾ ಶ್ರೇಷ್ಠ.
ಅರಿಶಿನ-ಕುಂಕುಮ: ಮುಂಜಾನೆ ತುಳಸಿ ಪೂಜೆ ವೇಳೆ ತುಳಸಿ ಸಸ್ಯಕ್ಕೆ ಅರಿಶಿನ-ಕುಂಕುಮ-ಗಂಧವನ್ನು ಅರ್ಪಿಸಬೇಕು.
ತುಪ್ಪದ ದೀಪ: ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವೇಳೆ ತುಳಸಿ ಪೂಜಿಸುವಾಗ ತುಪ್ಪದ ದೀಪವನ್ನು ಬೆಳಗಿಸಿದರೆ ಅಂತಹ ಮನೆಯಲ್ಲಿ ಎಂದಿಗೂ ಕೂಡ ಸುಖ-ಸಂಪತ್ತಿಗೆ ಕೊರತೆ ಆಗುವುದಿಲ್ಲ ಎಂಬ ನಂಬಿಕೆಯಿದೆ.
ಶುಕ್ರವಾರದ ವಿಶೇಷ ಉಪಾಯ: ಸತತ 21 ವಾರದವರೆಗೆ ಪ್ರತಿ ಶುಕ್ರವಾರ ತುಳಸಿ ಸಸ್ಯದ ಮುಂದೆ ಎರಡು ನಿಂಬೆಹಣ್ಣಿನ ದೀಪ ಬೆಳಗಿಸುವುದರಿಂದ ಮದುವೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಿ ಕಂಕಣ ಬಾಲ ಕೂಡಿ ಬರುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.