ರಾತ್ರಿ ಮಲಗುವ ಮುನ್ನ ಇದನ್ನು ಸೇವಿಸಿ! ಬೆಳಗ್ಗೆ ಮೂತ್ರದ ಮೂಲಕವೇ ಹೊರಹೋಗುತ್ತದೆ ಯೂರಿಕ್ ಆಸಿಡ್ !
ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಬೇಕಾದರೆ, ನೈಸರ್ಗಿಕ ಪರಿಹಾರಗಳ ಸಹಾಯವನ್ನು ತೆಗೆದುಕೊಳ್ಳಬಹುದು.ನೈಸರ್ಗಿಕ ಆಹಾರಗಳ ಸಹಾಯದಿಂದ, ರಕ್ತದಲ್ಲಿನ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಬಹುದು.
ರಕ್ತದಲ್ಲಿನ ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಲು,ಮೆಂತ್ಯೆ ಮತ್ತು ಅರಿಶಿನದಿಂದ ಮಾಡಿದ ಚಹಾವನ್ನು ಸೇವಿಸುವುದು ಉತ್ತಮ ಆಯ್ಕೆ. ಈ ಎರಡೂ ಮಸಾಲೆಗಳು ಅನೇಕ ವಿಧದ ಆಯುರ್ವೇದ ಗುಣಗಳ ಆಗರವಾಗಿದ್ದು, ರಕ್ತದಲ್ಲಿನ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ಅರಿಶಿನವು ಕರ್ಕ್ಯುಮಿನ್ ಎಂಬ ಸಕ್ರಿಯ ಸಂಯುಕ್ತವನ್ನು ಹೊಂದಿರುತ್ತದೆ, ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ.ಹಾಗಾಗಿ ಯೂರಿಕ್ ಆಸಿಡ್ ಮಟ್ಟವನ್ನು ಕೂಡಾ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೆಂತ್ಯೆ ಶಕ್ತಿಶಾಲಿ ಔಷಧೀಯ ಗುಣಗಳನ್ನು ಹೊಂದಿದೆ. ಇದು ಸಪೋನಿನ್‌ಗಳು ಮತ್ತು ಫ್ಲೇವನಾಯ್ಡ್‌ಗಳಂತಹ ಸಂಯುಕ್ತಗಳನ್ನು ಹೊಂದಿರುತ್ತದೆ. ಮೆಂತ್ಯೆ ಬೀಜಗಳು ಅಥವಾ ಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ ಉರಿಯೂತ ಕಡಿಮೆಯಾಗಿ ಕೀಲು ನೋವನ್ನು ನಿವಾರಿಸುತ್ತದೆ.
ಅಗತ್ಯ ಪದಾರ್ಥಗಳು ಮೆಂತ್ಯೆ ಬೀಜಗಳು - ಅರ್ಧ ಟೀಚಮಚ ಅರಿಶಿನ - 1 ಚಿಟಿಕೆ ನೀರು - 1 ಕಪ್
ಮೊದಲನೆಯದಾಗಿ,ಮೆಂತ್ಯೆ ಬೀಜಗಳನ್ನು ಹಾಕಿ ನೀರನ್ನು ಚೆನ್ನಾಗಿ ಕುದಿಸಿ. ನಂತರ, ಆ ನೀರನ್ನು ಫಿಲ್ಟರ್ ಮಾಡಿ ಅದಕ್ಕೆ ಒಂದು ಚಿಟಿಕೆ ಅರಿಶಿನವನ್ನು ಸೇರಿಸಿ ಕುಡಿಯಿರಿ.ಇದು ನಿಮ್ಮ ಯೂರಿಕ್ ಆಸಿಡ್ ಮಟ್ಟವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರಾತ್ರಿ ಮಲಗುವ ಮುನ್ನ ಈ ಪಾನಿಯವನ್ನು ಸೇವಿಸಿದರೆ, ಬೆಳಿಗ್ಗೆ ಏಳುವಷ್ಟರಲ್ಲಿ ಯೂರಿಕ್ ಆಸಿಡ್ ಮಟ್ಟ ಕಡಿಮೆಯಾಗಿರುತ್ತದೆ. (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)