White Hair Remedies: ಅರಿಶಿನದೊಂದಿಗೆ ಈ ಪದಾರ್ಥಗಳನ್ನು ಬೆರೆಸಿ ಹಚ್ಚಿದರೆ ಬುಡದಿಂದಲೂ ಕಪ್ಪಾಗುತ್ತೆ ಕೂದಲು!
ಬದಲಾದ ಜೀವನ ಶೈಲಿಯಲ್ಲಿ ಅತಿ ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುತ್ತದೆ. ಬಿಳಿ ಕೂದಲನ್ನು ಬುಡದಿಂದ ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರಾಡಕ್ಟ್ ಗಳ ಬಳಲಿಗೆ ನಿಮ್ಮ ಅಡುಗೆ ಮನೆಯಲ್ಲಿರುವ ಕೆಲವು ಪದಾರ್ಥಗಳು ತುಂಬಾ ಪ್ರಯೋಜನಕಾರಿ ಆಗಿವೆ.
ಆಯುರ್ವೇದದ ಪ್ರಕಾರ, ನಿಮ್ಮ ಮನೆಯಲ್ಲಿರುವ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿಕೊಂಡು ನೀವು ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಇದಕ್ಕೆ ಬೇಕಾಗುವ ಪದಾರ್ಥಗಳು, ಇದನ್ನು ತಯಾರಿಸುವ ವಿಧಾನಗಳ ಬಗ್ಗೆ ತಿಳಿಯಿರಿ.
ಈ ಹೇರ್ ಡೈ ತಯಾರಿಸಲು ಕೇವಲ 5 ಪದಾರ್ಥಗಳಷ್ಟೇ ಸಾಕು. ಅವುಗಳೆಂದರೆ... * 2 ಚಮಚ ಸಾಸಿವೆ ಎಣ್ಣೆ * 2 ಚಮಚ ಅರಿಶಿನ * 1 ಚಮಚ ಕಾಫಿ ಪುಡಿ * 1 ವಿಟಮಿನ್ ಇ ಕ್ಯಾಪ್ಸುಲ್ * 1 ಚಮಚ ನಿಂಬೆ ರಸ
ಈ ನೈಸರ್ಗಿಕ ಹೇರ್ ಡೈ ತಯಾರಿಸಲು ಮೊದಲಿಗೆ ಒಂದು ಬಾಣಲೆಯಲ್ಲಿ ಎರಡು ಚಮಚ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಸಣ್ಣ ಉರಿಯಲ್ಲಿ ಬಿಸಿ ಮಾಡಿ, ಬಳಿಕ ಇದರಲ್ಲಿ ಎರಡು ಚಮಚ ಅರಿಶಿನ, 1 ಚಮಚ ಕಾಫಿ ಪುಡಿಯನ್ನು ಹಾಕಿ ಕುದಿಸಿ. ಬಳಿಕ ಅದನ್ನು ತಣ್ಣಗಾಗಲು ಬಿಟ್ಟು ತಣ್ಣಗಾದ ನಂತರ ಬೇರೆ ಪಾತ್ರೆಗೆ ಹಾಕಿ. ಇದರಲ್ಲಿ ಒಂದು ವಿಟಮಿನ್ ಇ ಕ್ಯಾಪ್ಸುಲ್ ಮತ್ತು ಒಂದು ಚಮಚ ನಿಂಬೆ ರಸವನ್ನು ಹಾಕಿ ಮಿಶ್ರಣ ಮಾಡಿ.
ಈ ಮಿಶ್ರಣವನ್ನು ಬುಡದಿಂದಲೂ ಕೂದಲಿನ ತುದಿಯವರೆಗೆ ಹಚ್ಚಿ 20 ನಿಮಿಷಗಳ ಕಾಲ ಒಣಗಳು ಬಿಡಿ. ನಂತರ ಸೌಮ್ಯವಾದ ಶಾಂಪೂ ಬಳಸಿ ಹೇರ್ ವಾಶ್ ಮಾಡಿ.
ಈ ನೈಸರ್ಗಿಕ ಹೇರ್ ಡೈ ಅನ್ನು ತಿಂಗಳಲ್ಲಿ ಒಂದೆರಡು ಬಾರಿ ಈ ರೀತಿ ಬಳಸುವುದರಿಂದ ಕೂದಲು ಬುಡದಿಂದಲೂ ಕಪ್ಪಾಗುವುದರ ಜೊತೆಗೆ ಕಾಂತಿಯುತವಾಗಿಯೂ ಕಾಣುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.