TURMERIC HEALTH BENEFITS: ಅರಿಶಿಣದ ಈ 5 ಉಪಾಯಗಳು ನಿಮಗೆ ತಿಳಿದಿವೆಯೇ?
1. ಮುಖದ ತ್ವಚೆಗಾಗಿ ಅರಿಶಿಣ ಹೆಲ್ದಿಯಾಗಿದೆ (GOOD ON YOUR SKIN) - ಅರಿಶಿಣ ನಿಮ್ಮ ಚರ್ಮದ ಕೋಶಗಳಿಗೆ ಪೋಷಣೆ ಒದಗಿಸುತ್ತದೆ. ಇದರಿಂದ ಚರ್ಮವು ಹೆಚ್ಚು ಸುಂದರವಾಗುತ್ತದೆ ಮತ್ತು ಹೊಳಪು ಪಡೆಯುತ್ತದೆ. ನಿಮ್ಮ ಚರ್ಮವನ್ನು ನೀವು ಪ್ರೀತಿಸುತ್ತಿದ್ದರೆ, ನಿಮ್ಮ ದೈನಂದಿನ ದಿನಚರಿಯಲ್ಲಿ ಅರಿಶಿಣವನ್ನು ಖಂಡಿತವಾಗಿ ಸೇರಿಸಿ.
2, ವಿಷಕಾರಿ ಪದಾರ್ಥಗಳನ್ನು ದೇಹದಿಂದ ಹೊರಹಾಕುತ್ತದೆ (USHES OUT TOXINS) - ಜೇನುತುಪ್ಪ ಮತ್ತು ನಿಂಬೆ ರಸದೊಂದಿಗೆ ಅರಿಶಿಣ ಬೆರೆಸಿದ ನೀರು ದೇಹದಲ್ಲಿ ಅದ್ಭುತಗಳನ್ನು ಕೆಲಸ ಮಾಡುತ್ತದೆ. ಈ ಮಿಶ್ರಣವು ನಿಮ್ಮ ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕುತ್ತದೆ.
3. ತೂಕ ಇಳಿಕೆಗೆ ಸಹಕಾರಿ (WEIGHT REDUCTION) - ಜೀರ್ಣಕ್ರಿಯೆಗೆ ಅರಿಶಿಣ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಎಲ್ಲಾ ಆರೋಗ್ಯ ಸಂಬಂಧಿತ ಸಮಸ್ಯೆಗಳು ಹೊಟ್ಟೆಯಿಂದಲೇ ಪ್ರಾರಂಭವಾಗುತ್ತವೆ ಎಂಬುದನ್ನು ನೀವು ಕೇಳಿರಬಹುದು, ಹೀಗಾಗಿ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಿದರೆ ನೀವು ಸ್ವಯಂಚಾಲಿತವಾಗಿ ಫಿಟ್ ಆಗುವಿರಿ.
4. ನೋವಿನಿಂದ ಪರಿಹಾರ ಒದಗಿಸುತ್ತದೆ (PAIN RELIEFFL) - ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಿಂದ ಹಿಡಿದು ಯುವಕರಲ್ಲೂ ಕೂಡ ಕೀಲು ನೋವಿನ ಸಮಸ್ಯೆ ಕಂಡು ಬರುತ್ತಿದೆ. ಅರಿಶಿಣ ನೀರನ್ನು ಕುಡಿಯುವುದರಿಂದ, ನೀವು ಕೀಲುನೋವಿನಿಂದ ಪರಿಹಾರ ಪಡೆಯಬಹುದು.
5. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ (BOOST IMMUNITY) - ಅರಿಶಿಣದಲ್ಲಿ ಕರ್ಕ್ಯುಮಿನ್ ಹೆಸರಿನ ಪದಾರ್ಥ ಇರುತ್ತದೆ. ಇದು ನಿಮ್ಮ ದೇಹದ ವೈದ್ಯಕೀಯ ಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರ ಬ್ಯಾಕ್ಟೀರಿಯಾ ವಿರುಧಿ ಗುಣಲಕ್ಷಣಗಳು ನಿಮ್ಮನ್ನು ರೋಗದಿಂದ ದೂರವಿರಿಸಲು ಸಹಾಯ ಮಾಡುತ್ತದೆ. ಇದರ ದೈನಂದಿನ ಬಳಕೆಯು ನಿಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.