ನೀವೂ ಲ್ಯಾಪ್‌ಟಾಪ್‌ನಲ್ಲಿ ವಾಟ್ಸಾಪ್ ಆನ್ ಮಾಡಿ ಹಾಗೆ ಬಿಡ್ತೀರಾ? ಚಾಟ್‌ಗಳ ಡಾಟಾ ಸೋರಿಕೆ ತಪ್ಪಿಸಲು ಈಗಲೇ ಈ ಸೆಟ್ಟಿಂಗ್ಸ್ ಬದಲಿಸಿ!
ವಾಟ್ಸಾಪ್ ವೆಬ್ ಸಹಾಯದಿಂದ ನೀವು ಲ್ಯಾಪ್‌ಟಾಪ್/ಡೆಸ್ಕ್‌ಟಾಪ್‌ನಲ್ಲಿ ಸುಲಭವಾಗಿ ಲಾಗಿನ್ ಆಗಬಹುದು. ಆದರೆ, ನಿಮ್ಮ ವಾಟ್ಸಾಪ್ ಚಾಟ್‌ಗಳು ಸೋರಿಕೆಯಾಗದಂತೆ ತಡೆಯಲು ಕೆಲವು ವಿಚಾರಗಳ ಬಗ್ಗೆ ಜಾಗರೂಕರಾಗಿರುವುದು ಕೂಡ ಅಗತ್ಯ.
ವಾಸ್ತವವಾಗಿ, ಗೂಗಲ್ ಕ್ರೋಮ್ ಸೆಟ್ಟಿಂಗ್‌ಗಳ ಮೂಲಕ ನೀವು ಖಾಸಗಿ ವಾಟ್ಸಾಪ್ ಚಾಟ್‌ಗಳನ್ನು ಸುಲಭವಾಗಿ ಮರೆ ಮಾಡಬಹುದು. ವಾಟ್ಸಾಪ್ ವೆಬ್ ಗೌಪ್ಯತೆ ವಿಭಾಗದಲ್ಲಿ ಈ ಸೌಲಭ್ಯ ಲಭ್ಯವಿದೆ.
ಇದಕ್ಕಾಗಿ ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ವಿಶೇಷ ಎಕ್ಸ್ಟೆನ್ಷನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಸ್ಥಾಪಿಸುವುದು ಅವಶ್ಯಕ. ಈ ಎಕ್ಸ್ಟೆನ್ಷನ್ ವಿಂಡೋಸ್ ಮತ್ತು ಐಒಎಸ್ ಎರಡೂ ಸಾಧನಗಳಲ್ಲಿ ಉಚಿತವಾಗಿ ಲಭ್ಯವಿದೆ.
ಕ್ರೋಮ್ ಎಕ್ಸ್ಟೆನ್ಷನ್ ಡೌನ್‌ಲೋಡ್ ಮಾಡಿದ ನಂತರ, ಅದನ್ನು ಬ್ರೌಸರ್‌ಗೆ ಸೇರಿಸಿ. ಇದಕ್ಕಾಗಿ, ನೀವು ಬ್ರೌಸರ್‌ನ ಮೇಲಿನ ಬಲಭಾಗದಲ್ಲಿ ಟ್ಯಾಪ್ ಮಾಡಿ ಮತ್ತು "ಕ್ರೋಮ್ ಗೆ ಸೇರಿಸು" ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ಸಂಪೂರ್ಣ ಸೆಟಪ್ ಬಳಿಕ ನೀವು ಬಳಸುತ್ತಿರುವ ಬ್ರೌಸರ್ ಅನ್ನು ಒಮ್ಮೆ ಮುಚ್ಚಿ ಮತ್ತು ಮತ್ತೆ ತೆರೆಯಿರಿ. ಬಳಿಕ ಮತ್ತೊಮ್ಮೆ ವಾಟ್ಸಾಪ್ ವೆಬ್ ಅನ್ನು ಹುಡುಕಿ ಲಾಗ್ ಇನ್ ಮಾಡಿ. ಇದರಲ್ಲಿ ನೀವು "ಮರೆಮಾಡು ಚಾಟ್" ಆಯ್ಕೆಯನ್ನು ಕಾಣಬಹುದು.
ಈ ರೀತಿಯಾಗಿ ನೀವು ಗೂಗಲ್ ಕ್ರೋಮ್ ಸೆಟ್ಟಿಂಗ್‌ಗಳನ್ನು ಬಳಸಿಕೊಂಡು ನಿಮ್ಮ ವಾಟ್ಸಾಪ್ ಚಾಟ್‌ಗಳು ಸೋರಿಕೆಯಾಗದಂತೆ ತಡೆಯಬಹುದು.