White Hair: ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಮನೆಯಲ್ಲೇ ತಯಾರಿಸಿ ಈ ಹೇರ್ ಡೈ
ಈ ಬದಲಾದ ಜೀವನಶೈಲಿಯಲ್ಲಿ ಅಕಾಲಿಕ ಬಿಳಿ ಕೂದಲಿನ ಸಮಸ್ಯೆ ಬಹುತೇಕ ಜನರನ್ನು ಕಾಡುತ್ತಿದೆ. ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಹಲವು ಪ್ರಾಡಕ್ಟ್ ಗಳು ಲಭ್ಯವಿವೆ.
ನಮ್ಮಲ್ಲಿ ಕೆಲವರಿಗೆ ಮಾರುಕಟ್ಟೆಯಲ್ಲಿ ಸಿಗುವ ಹೇರ್ ಡೈ ಬಳಕೆಯಿಂದಾಗಿ ಚರ್ಮ ಮತ್ತು ಕೂದಲಿನ ಮೇಲೆ ಅಡ್ಡಪರಿಣಾಮಗಳು ಉಂಟಾಗಬಹುದು. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳಿಂದ ನಿಮ್ಮ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.
ಆಯುರ್ವೇದ ಪ್ರಕಾರ, ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ನಾಲ್ಕೇ ನಾಲ್ಕು ಪದಾರ್ಥಗಳನ್ನು ಬಳಸಿ ನಿಮ್ಮ ಅಕಾಲಿಕ ಬಿಳಿ ಕೂದಲಿಗೆ ಗುಡ್ ಬೈ ಹೇಳಬಹುದು.
ಬಿಳಿ ಕೂದಲನ್ನು ಕಪ್ಪಾಗಿಸಲು ಬೇಕಾಗುವ ಪದಾರ್ಥಗಳೆಂದರೆ:- * ತೆಂಗಿನಕಾಯಿಯ ಜುಂಗು * 5 ಬಾದಾಮಿ * 1 ಕರ್ಪೂರ * ಸ್ವಲ್ಪ ಕೊಬ್ಬರಿ ಎಣ್ಣೆ
ಮೊದಲಿಗೆ ತೆಂಗಿನಕಾಯಿ ಜುಂಗು ಒಂದು ಬಾಣಲೆಯಲ್ಲಿ ಇಟ್ಟು ಅದರೊಂದಿಗೆ 5 ಬಾದಾಮಿಯನ್ನು ಹಾಕಿ ಒಂದೇ ಒಂದು ಕರ್ಪೂರವನ್ನು ಹಚ್ಚಿ ಅದರ ಮೇಲಿಡಿ. ಈ ಮೂರು ಪದಾರ್ಥಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗುವವರೆಗೆ ಹಾಗೆಯೇ ಬಿಡಿ. ನಂತರ ಆ ಪೌಡರ್ ಅನ್ನು ಜರಡಿ ಆಡಿಕೊಂಡು ಅದರಲ್ಲಿ ಸ್ವಲ್ಪ ತೆಂಗಿನ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ.
ನೀವು ಈ ರೀತಿಯಾಗಿ ಮನೆಯಲ್ಲಿಯೇ ತಯಾರಿಸಿದ ಹೇರ್ ಡೈ ಅನ್ನು ಇತರ ಹೇರ್ ಡೈಗಳನ್ನು ಅಪ್ಪ್ಲೈ ಮಾಡುವ ರೀತಿಯಲ್ಲಿಯೇ ನಿಮ್ಮ ಕೂದಲಿನ ಬುಡದಿಂದಲೂ ಚೆನ್ನಾಗಿ ಹಚ್ಚಿ. ಬಳಿಕ 40 ನಿಮಿಷಗಳ ಬಳಿಕ ಹಾಗೆಯೇ ಬಿಡಿ.
ಈ ಹೇರ್ ಡೈ ಅನ್ನು ಹಚ್ಚಿ 40 ನಿಮಿಷಗಳ ಬಳಿಕ ಸೌಮ್ಯವಾದ ಶಾಂಪೂವಿನಿಂದ ಹೇರ್ ವಾಶ್ ಮಾಡಿ.
ನಿಯಮಿತವಾಗಿ ಈ ಮನೆಮದ್ದನ್ನು ಬಳಸುವುದರಿಂದ ನಿಮ್ಮ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.