White Hair Remedy: ಸಾಸಿವೆ ಎಣ್ಣೆಯಲ್ಲಿ ಈ 3 ಪುಡಿ ಬೆರೆಸಿ ಕೂದಲಿಗೆ ಹಚ್ಚಿದರೆ ಬುಡದಿಂದ ಕಪ್ಪಾಗುತ್ತೆ ಬಿಳಿ ಕೂದಲು
ಕೂದಲು ಹೆಚ್ಚಾಗಿ ಉದುರುತ್ತಿದೆಯೇ? ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗಿದೆಯೇ? ಈ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ, ಬಹಳ ಸುಲಭವಾಗಿ ಲಭ್ಯವಿರುವ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಬಹುದು. ಇದಕ್ಕಾಗಿ ಬೇಕಾಗಿರುವ ಸಾಮಾಗ್ರಿಗಳು ಯಾವುವು? ಹೇರ್ ಡೈ ತಯಾರಿಸುವ ವಿಧಾನ ಹಾಗೂ ಅದನ್ನು ಬಳಸುವ ವಿಧಾನದ ಬಗ್ಗೆ ತಿಳಿಯೋಣ...
* ಒಂದು ಕಪ್ ಸಾಸಿವೆ ಎಣ್ಣೆ * ಒಂದು ಚಮಚ ಮೆಂತ್ಯ ಪುಡಿ * ಒಂದು ಚಮಚ ಆಮ್ಲಾ ಪುಡಿ * ಎರಡು ಚಮಚ ಮೆಹಂದಿ ಪುಡಿ
ಒಂದು ಕಬ್ಬಿಣದ ಬಾಣಲೆಯನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ ಇದರಲ್ಲಿ ಒಂದು ಕಪ್ ಸಾಸಿವೆ ಎಣ್ಣೆಯನ್ನು ಹಾಕಿ ಎಣ್ಣೆ ಬಿಸಿಯಾದ ಬಳಿದ ಮೆಂತ್ಯ ಪುಡಿ, ಆಮ್ಲಾ ಪುಡಿ, ಮೆಹಂದಿ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ ಸಣ್ಣ ಫ್ಲೇಮ್ ನಲ್ಲಿ ಗಟ್ಟಿಯಾಗಲು ಬಿಡಿ (ಮಧ್ಯೆ ಮಧ್ಯೆ ಕೈ ಆಡುತ್ತಿರಿ). ಅದು ಗಟ್ಟಿಯಾದ ನಂತರ ಸ್ಟೌವ್ ಆಫ್ ಮಾಡಿ. ರಾತ್ರಿಯಿಡೀ ಇದನ್ನು ತಣ್ಣಗಾಗಳು ಬಿಡಿ.
ನೀವು ರಾತ್ರಿ ತಯಾರಿಸಿಟ್ಟ ಹೇರ್ ಡೈ ಅನ್ನು ಕೂದಲಿನ ಬುಡದಿಂದಲೂ ಹಚ್ಚಿ 2 ಗಂಟೆಗಳ ಕಾಲ ಹಾಗೆ ಒಣಗಳು ಬಿಡಿ. ನಂತರ ಸೌಮ್ಯವಾದ ಶಾಂಪೂ ಬಳಸಿ ಬೆಚ್ಚಗಿನ ನೀರಿನಿಂದ ಹೇರ್ ವಾಶ್ ಮಾಡಿ.
ಮನೆಯಲ್ಲಿಯೇ ತಯಾರಿಸಿದ ಈ ಹೇರ್ ಡೈನ ಪ್ರಮುಖ ಪ್ರಯೋಜನವೆಂದರೆ ಇದು ಕೂದಲನ್ನು ಶಾಶ್ವತವಾಗಿ ಕಡು ಕಪ್ಪಾಗಿಸುತ್ತದೆ. ಮಾತ್ರವಲ್ಲ, ಕೂದಲುದುರುವ ಸಮಸ್ಯೆಯಿಂದಲೂ ಪರಿಹಾರ ನೀಡುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.