ಆ ಖ್ಯಾತ ನಟಿ ಜೊತೆ ಅಕ್ಷಯ್ ಕುಮಾರ್ ಡೇಟಿಂಗ್ ವದಂತಿ... ಮನೆಯನ್ನೇ ಬಿಡುವ ನಿರ್ಧಾರಕ್ಕೆ ಪತ್ನಿ ಟ್ವಿಂಕಲ್ ಖನ್ನಾ !!
Akshay Kumar Twinkle Khanna Breakup: ಅಕ್ಷಯ್ ಕುಮಾರ್ ಜೊತೆಗೆ ಪ್ರಿಯಾಂಕಾ ಚೋಪ್ರಾ ಡೇಟಿಂಗ್ ಗಾಸಿಪ್ ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
ಟ್ವಿಂಕಲ್ ಖನ್ನಾ ಜೊತೆಗಿನ ಅಕ್ಷಯ್ ಅವರ ಸಂಬಂಧದ ಮೇಲೆ ಈ ವದಂತಿಗಳು ಸಾಕಷ್ಟು ಪರಿಣಾಮ ಬೀರಿದ್ದವು.
ನಿರ್ದೇಶಕ ಸುನೀಲ್ ದರ್ಶನ್ ಅವರು ಟ್ವಿಂಕಲ್ ಖನ್ನಾ ಮತ್ತು ಅಕ್ಷಯ್ ಕುಮಾರ್ ಅವರ ದಾಂಪತ್ಯದ ಬಗ್ಗೆ ಶಾಕಿಂಗ್ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.
ನಟಿ ಪ್ರಿಯಾಂಕಾ ಮತ್ತು ಅಕ್ಷಯ್ ಕುಮಾರ್ ಸಂಬಂಧದ ಬಗ್ಗೆ ಹಬ್ಬಿದ ವದಂತಿಯಿಂದ ಟ್ವಿಂಕಲ್ ಖನ್ನಾ ಮನೆಬಿಟ್ಟು ಹೋಗಿದ್ದರಂತೆ ಎಂದು ನಿರ್ದೇಶಕ ಸುನೀಲ್ ದರ್ಶನ್ ಹೇಳಿದ್ದಾರೆ.
ಯೂಟ್ಯೂಬ್ ಚಾನೆಲ್ ಫ್ರೈಡೆ ಟಾಕೀಸ್‌ನೊಂದಿಗೆ ಮಾತನಾಡಿದ ಸುನೀಲ್, ಅಕ್ಷಯ್ ಕುಮಾರ್ ಬರ್ಸಾತ್ ಚಿತ್ರ ಪ್ರಾರಂಭವಾಗುತ್ತಿದ್ದಂತೆ ಪ್ರಿಯಾಂಕಾ ಚೋಪ್ರಾ ಜೊತೆ ಡೇಟಿಂಗ್ ವದಂತಿ ಹಬ್ಬಿತು.
ಒಂದು ದಿನ ಅಕ್ಷಯ್ ಅವರು ನನ್ನನ್ನು ಭೇಟಿ ಮಾಡಿ ಚಿತ್ರದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಕಾರಣವಾದ 'ಪ್ರಮಾದ'ದ ಬಗ್ಗೆ ತಿಳಿಸಿದರು.
ಪ್ರಿಯಾಂಕಾ ಚೋಪ್ರಾ ಮತ್ತು ಅಕ್ಷಯ್ ಕುಮಾರ್ ಬಗ್ಗೆ ಕೆಲವು ವದಂತಿಗಳು ಹರಡಲು ಪ್ರಾರಂಭಿಸಿದವು. ಟ್ವಿಂಕಲ್ ಖನ್ನಾ ಇದರಿಂದ ಕೋಪಗೊಂಡಿದ್ದರು. ಇದೇ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದರಂತೆ.
ಇದಕ್ಕಾಗಿ ನಾನು ಪ್ರಿಯಾಂಕಾ ಚೋಪ್ರಾ ಅವರನ್ನು ದೂಷಿಸುವುದಿಲ್ಲ. ಅಕ್ಷಯ್ ಸಿನಿಮಾದಿಂದ ಹಿಂದೆ ಸರಿದರು. ಆ ಜಾಗಕ್ಕೆ ಬಾಬಿ ಡಿಯೋಲ್‌ಗೆ ಬಂದರು ಎಂದು ನಿರ್ದೇಶಕ ಸುನೀಲ್ ದರ್ಶನ್ ಹೇಳಿದರು.
ಬಾಬಿ ಡಿಯೋಲ್ ಬರ್ಸಾತ್ ನಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಬಿಪಾಶಾ ಬಸು ಜೊತೆ ತೆರೆ ಹಂಚಿಕೊಂಡಿದ್ದಾರೆ.