ಇದೇ ತಿಂಗಳಲ್ಲಿ ಸರ್ಕಾರಿ ನೌಕರರಿಗೆ ಡಬಲ್ ಜಾಕ್ ಪಾಟ್ ! ಎಲ್ಲಾ ತಯಾರಿ ಪೂರ್ಣಗೊಳಿಸಿರುವ ಸರ್ಕಾರ

Thu, 04 Jul 2024-9:49 am,

ಇನ್ನು ಕೆಲವೇ ದಿನಗಳಲ್ಲಿ 2024-25ನೇ ಹಣಕಾಸು ವರ್ಷದ ಸಂಪೂರ್ಣ ಬಜೆಟ್ ಮಂಡನೆಯಾಗಲಿದೆ.ಜುಲೈನಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ 2 ಒಳ್ಳೆಯ ಸುದ್ದಿ ಸಿಗುವ ನಿರೀಕ್ಷೆ ಇದೆ.ಜುಲೈ ತಿಂಗಳಲ್ಲಿ ಕೇಂದ್ರ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಭತ್ಯೆ ಮತ್ತು ವೇತನ ಹೆಚ್ಚಳವಾಗಲಿದೆ.ಇದಲ್ಲದೇ 18 ತಿಂಗಳ ಡಿಎ ಬಾಕಿ ಮೊತ್ತವೂ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. 

ಕರೋನಾ ಅವಧಿಯಲ್ಲಿ ತಡೆಹಿಡಿಯಲಾಗಿರುವ 18 ತಿಂಗಳ ಬಾಕಿಯನ್ನು ಬಿಡುಗಡೆ ಮಾಡುವಂತೆ ಕೋರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕೇಂದ್ರೀಯ ನೌಕರರ ರಾಷ್ಟ್ರೀಯ ಮಂಡಳಿಯ ಜಂಟಿ ಸಮಾಲೋಚನಾ ಮಂಡಳಿಯ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಪತ್ರ ಬರೆದಿದ್ದಾರೆ. 

ಜನವರಿ 2024ರಲ್ಲಿ,ಕೇಂದ್ರ ಸರ್ಕಾರವು ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಿತು.ಆ ನಂತರ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.50ಕ್ಕೆ ಹೆಚ್ಚಿಸಲಾಗಿದೆ.ಜುಲೈನಲ್ಲೂ ಸರ್ಕಾರ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಿಸಲಿದೆ ಎಂದು ಹೇಳಲಾಗುತ್ತಿದೆ.

ತುಟ್ಟಿಭತ್ಯೆಯಲ್ಲಿ ಆಗುವ  4% ಹೆಚ್ಚಳವು ಉದ್ಯೋಗಿಗಳ ವೇತನದಲ್ಲಿ ಭಾರೀ ಏರಿಕೆ ಮಾಡಲಿದೆ.ಜುಲೈನಲ್ಲಿ ಡಿಎ ಮತ್ತು ವೇತನ ಹೆಚ್ಚಳದ ನಂತರ,  ಹಣದುಬ್ಬರದಿಂದ ದೊಡ್ಡ ಪರಿಹಾರ ಸಿಗುತ್ತದೆ. 

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಜುಲೈ 2024ರ ಡಿಎ ಹೆಚ್ಚಳದ ಅಧಿಸೂಚನೆಯು ಆಗಸ್ಟ್ ಮತ್ತು ಅಕ್ಟೋಬರ್ ನಡುವೆ ಯಾವುದೇ ಸಮಯದಲ್ಲಿ ಬೇಕಾದರೂ ಬರಲಿದೆ ಎಂದು ಹೇಳಲಾಗುತ್ತದೆ.ಆದರೆ ಇದು ಜುಲೈನಿಂದಲೇ ಅನ್ವಯವಾಗಲಿದೆ.  

ಮತ್ತೊಂದು ಒಳ್ಳೆಯ ಸುದ್ದಿಯಲ್ಲಿ,ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಖಾತೆಗಳಿಗೆ ಸರ್ಕಾರವು ಬಾಕಿ ಇರುವ 18 ತಿಂಗಳ ಡಿಎ ಬಾಕಿಯನ್ನು ಕೂಡಾ ಜಮಾ ಮಾಡಬಹುದು ಎಂದು ಹೇಳಲಾಗಿದೆ.ಆದರೆ,ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ.  

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಅಂದರೆ ಜನವರಿ ಮತ್ತು ಜುಲೈ ತಿಂಗಳಲ್ಲಿ ಹೆಚ್ಚಿಸಲಾಗುತ್ತದೆ.ಜನವರಿಯಲ್ಲಿ ಡಿಎಯನ್ನು ಶೇ 4ರಷ್ಟು ಹೆಚ್ಚಿಸಲಾಗಿತ್ತು.  

ಎಐಸಿಪಿಐ ಸೂಚ್ಯಂಕವನ್ನು ಆಧರಿಸಿ ತುಟ್ಟಿಭತ್ಯೆಯನ್ನು ಪರಿಷ್ಕರಿಸಲಾಗುತ್ತದೆ. ಜನವರಿಯ ಹಣದುಬ್ಬರ ದರವನ್ನು ಹಿಂದಿನ ವರ್ಷದ ಜುಲೈನಿಂದ ಡಿಸೆಂಬರ್‌ವರೆಗಿನ AICPI ಸೂಚ್ಯಂಕ ಸಂಖ್ಯೆಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಮತ್ತು ಜುಲೈ ತಿಂಗಳ ಹಣದುಬ್ಬರ ದರವನ್ನು ಜನವರಿಯಿಂದ ಜೂನ್‌ವರೆಗಿನ AICPI ಸೂಚ್ಯಂಕ ಸಂಖ್ಯೆಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.   

ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಪ್ರೀಮಿಯಂನಲ್ಲಿ ಯಾವುದೇ ಹೆಚ್ಚಳ ಅಥವಾ ವೇತನ ಹೆಚ್ಚಳದ ಯಾವುದೇ ಗ್ಯಾರಂಟಿ ಇಲ್ಲ.ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link