ಪಾಕಿಸ್ತಾನ ತಂಡದ ಪರ ಕ್ರಿಕೆಟ್ ಆಡಿದ ಇಬ್ಬರು ಹಿಂದೂ ಕ್ರಿಕೆಟಿಗರು ಯಾರು ಗೊತ್ತಾ?

Mon, 16 Dec 2024-7:12 pm,

ಭಾರತದಲ್ಲಿ, ಇತರ ಕ್ರೀಡೆಗಳಿಗಿಂತ ಹೆಚ್ಚು ಕ್ರಿಕೆಟ್ ಅನ್ನು ಇಷ್ಟಪಡುತ್ತಾರೆ ಎಂಬುದು ತಿಳಿದ ಸಂಗತಿ. ಭಾರತೀಯ ಕ್ರಿಕೆಟಿಗರು ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

ಅಂತೆಯೇ ಇತರ ದೇಶದ ಕ್ರಿಕೆಟಿಗರ ಬಗ್ಗೆಯೂ ತಿಳಿಯುವ ಉತ್ಸಾಹ ಭಾರತದ ಒಂದಷ್ಟು ಅಭಿಮಾನಿಗಳಲ್ಲಿದೆ. ಈ ಹಿನ್ನೆಲೆಯಲ್ಲಿ ನಾವಿಂದು ಈ ವರದಿಯಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಪಾಕಿಸ್ತಾನಿ ಕ್ರಿಕೆಟಿಗರ ಬಗ್ಗೆ ಮಾಹಿತಿ ನೀಡಲಿದ್ದೇವೆ.

 

ಅನಿಲ್ ದಲ್ಪತ್: ಅನಿಲ್ ದಲ್ಪತ್ ಪಾಕಿಸ್ತಾನದ ಪರ ಆಡಿದ ಮೊದಲ ಹಿಂದೂ ಕ್ರಿಕೆಟಿಗ. ಸಿಂಧ್ ಪ್ರಾಂತ್ಯದ ನಿವಾಸಿಯಾಗಿರುವ ಅನಿಲ್ ಉತ್ತಮ ವಿಕೆಟ್ ಕೀಪರ್ ಆಗಿದ್ದರು. ಆದರೆ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಸ್ವಲ್ಪ ಕಾಲ ಮಾತ್ರ ಆಡಿದ್ದರು.

 

ಅನಿಲ್ ದಲ್ಪತ್ 1976-77 ಋತುವಿನಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು. ಇದರ ನಂತರ, ಮಾರ್ಚ್ 1984 ರಲ್ಲಿ ಪಾಕಿಸ್ತಾನಕ್ಕಾಗಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು. ತಮ್ಮ ಕೊನೆಯ ಪಂದ್ಯವನ್ನು 17 ಅಕ್ಟೋಬರ್ 1986 ರಂದು ವೆಸ್ಟ್ ಇಂಡೀಸ್ ವಿರುದ್ಧ ಪೇಶಾವರದಲ್ಲಿ ಆಡಿದರು. 1986ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಅನಿಲ್ ಪಾಕಿಸ್ತಾನದಿಂದ ಕೆನಡಾಕ್ಕೆ ತೆರಳಿ ಅಲ್ಲಿಯೇ ನೆಲೆಸಿದ್ದಾರೆ.

 

ಡ್ಯಾನಿಶ್‌ ಕನೇರಿಯಾ: ಡ್ಯಾನಿಶ್‌ ಕನೇರಿಯಾ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಆಡಿದ ಎರಡನೇ ಹಿಂದೂ ಕ್ರಿಕೆಟಿಗ. ಡ್ಯಾನಿಶ್‌ ಅವರ ಚಿಕ್ಕಪ್ಪನೇ ಅನಿಲ್‌ ದಲ್ಪತ್. ಡ್ಯಾನಿಶ್ ಗುಜರಾತಿ ಆದರೆ ಅವರ ಪೂರ್ವಜರು ಹಲವಾರು ದಶಕಗಳ ಹಿಂದೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದ್ದರು.

 

ಡ್ಯಾನಿಶ್ ಅವರ ನಿಜವಾದ ಹೆಸರು ದಿನೇಶ್ ಎಂದು ಹೇಳಲಾಗುತ್ತದೆ. ಆದರೆ ಪಾಕಿಸ್ತಾನದಲ್ಲಿ ಅವನ ಸಹ ಆಟಗಾರರು ಅವನನ್ನು ಡ್ಯಾನಿಶ್ ಎಂದು ಕರೆಯುತ್ತಿದ್ದರು, ಇದರಿಂದಾಗಿ ನಂತರ ಡ್ಯಾನಿಶ್ ಕನೇರಿಯಾ ಎಂದೇ ಆಯಿತು ಎನ್ನಲಾಗುತ್ತದೆ. ಪಾಕಿಸ್ತಾನಿ ಕ್ರಿಕೆಟ್ ಇತಿಹಾಸದಲ್ಲಿ ಡ್ಯಾನಿಶ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್. 2000 ರಲ್ಲಿ ಪಾಕಿಸ್ತಾನಕ್ಕೆ ಪಾದಾರ್ಪಣೆ ಮಾಡಿದ ಅವರು 2010 ರಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link