Aadhaar Number ಬಳಸಿಯೂ ಕೂಡ ನೀವು ಹಣ ವರ್ಗಾವಣೆ ಮಾಡಬಹುದು, ಇಲ್ಲಿದೆ ಸಂಪೂರ್ಣ ಪ್ರಕ್ರಿಯೆ

Wed, 06 Oct 2021-4:02 pm,

1. ಆಧಾರ್ ನಂಬರ್ ಬಳಸಿ ಹಣ ಕಳುಹಿಸಿ - ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ (UIDAI) ಅಧಿಕೃತ ವೆಬ್ ಸೈಟ್ ಪ್ರಕಾರ, ಆಧಾರ್ ಸಂಖ್ಯೆ ಬಳಸಿ ಹಣ ವರ್ಗಾಗಿಸುವ ಈ ಆಯ್ಕೆ ಲಾಭಾರ್ಥಿಗಳ BHIM ಅಡ್ರೆಸ್ಸ್ ನಲ್ಲಿ ಸ್ಪಷ್ಟರೂಪದಲ್ಲಿ ಕಾಣಲು ಸಿಗುತ್ತದೆ. ಭೀಮ್ ಆಪ್ ಮೂಲಕ ನೀವು ಯಾರಿಗಾದರು ಹಣ ಕಳುಹಿಸಲು ಬಯಸುತ್ತಿದ್ದರೆ ಈ ಆಧಾರ್ ಸಂಖ್ಯೆ ಆಯ್ಕೆಯನ್ನು ನೀವು ಬಳಸಬಹುದು.

2. BHIM ನಲ್ಲಿ ಆಧಾರ್ ಸಂಖ್ಯೆ ಬಳಸಿ ಹೇಗೆ ಹಣ ವರ್ಗಾಯಿಸಬೇಕು? - UIDAI ಅಧಿಕೃತ ವೆಬ್ಸಿತೆ ನಲ್ಲಿ ನೀಡಲಾಗಿರುವ ಮಾಹಿತಿಯ ಪ್ರಕಾರ BHIM Aap ನಲ್ಲಿ ಆಧಾರ್ ನಂಬರ್ ಅನ್ನು ಬಳಸಿ ಹಣವನ್ನು ವರ್ಗಾಗಿಸಲು ನೀವು ಲಾಭಾರ್ಥಿಯ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು ವೆರಿಫೈ ಅಥವಾ ಪರೀಶೀಲಿಸು ಗುಂಡಿಯನ್ನು ಒತ್ತಬೇಕು. ಇದಾದ ಬಳಿಕ ಸಿಸ್ಟಂ ಆ ಆಧಾರ್ ಸಂಖ್ಯೆಯ ಲಿಂಕಿಂಗ್ ಅನ್ನು ಖಚಿತಪಡಿಸುತ್ತದೆ ಹಾಗೂ ಲಾಭಾರ್ಥಿಗಳ ಖಾತೆಗೆ ನಿಮ್ಮ ಹಣವನ್ನು ವರ್ಗಾಯಿಸುತ್ತದೆ.

3. ಆಧಾರ್ ನಿಂದ ಹಣ ಕಳುಹಿಸಿದಾಗ ಲಾಭಾರ್ಥಿಗೆ ಹೇಗೆ ಹಣ ಸಿಗುತ್ತದೆ? - UIDAI ಪ್ರಕಾರ, BHIM ಆಪ್ ಮೇಲೆ ಅಧಾರ ಸಂಖ್ಯೆಯಿಂದ ಹಣ ಕಳುಹಿಸಿದಾಗ ಅದರ DBT/Aadhaar ಬೇಸ್ಡ್ ಕ್ರೆಡಿಟ್ ಪ್ರಾಪ್ತಿ ಮಾಡಲು ಆಯ್ಕೆ ಮಾಡಲಾಗಿರುವ ಬ್ಯಾಂಕ್ ಖಾತೆಗೆ ಹಣ ಟ್ರಾನ್ಸ್ಫರ್ ಆಗಲಿದೆ. ಇದಲ್ಲದೆ ನೀವು Aadhaar Pay POS ಬಳಕೆ ಮಾಡುವ ವ್ಯಾಪಾರಿಗಳಿಗೂ ಕೂಡ ಡಿಜಿಟಲ್ ಹಣ ಪಾವತಿ ಮಾಡಲು ಆಧಾರ್ ಸಂಖ್ಯೆ ಹಾಗೂ ಬೆರಳಚ್ಚು ಉಪಯೋಗಿಸಬಹುದು ಮತ್ತು ಹಣವನ್ನು ಪಾವತಿಸಬಹುದು. 

4 ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳು ಒಂದು ವೇಳೆ ಆಧಾರ್ ಸಂಖೆಗೆ ಜೋಡಣೆ ಯಾಗಿದ್ದಾರೆ? - ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವ ಮತ್ತು ಅವೆಲ್ಲವೂ ಒಂದೇ ಆಧಾರ್‌ನೊಂದಿಗೆ ಲಿಂಕ್ ಆಗಿರುವ ಪ್ರಕರಣಗಳೂ ಇವೆ. ಇಂತಹ ಪರಿಸ್ಥಿತಿಯಲ್ಲಿ, ಎಲ್ಲಾ ಖಾತೆಗಳನ್ನು ಡಿಜಿಟಲ್ ಪಾವತಿ ಮಾಡಲು ಬಳಸಬಹುದು. ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಪಾವತಿ ಮಾಡುವಾಗ, ನೀವು ಪಾವತಿ ಮಾಡಲು ಬಯಸುವ ಬ್ಯಾಂಕ್ ಅನ್ನು ಆಯ್ಕೆ ಮಾಡುವ ಆಯ್ಕೆಯನ್ನು ನಿಮಗೆ ನೀಡಲಾಗುತ್ತದೆ. ಆಧಾರ್ ಮೂಲಕ ಪಾವತಿ ಮಾಡಿದ ತಕ್ಷಣ ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link