UIDAI: ಆಧಾರ್ ನವೀಕರಣ ಪೂರ್ಣಗೊಳ್ಳಲು ಎಷ್ಟು ದಿನ ಕಾಯಬೇಕು? ನಿಯಮ ಏನು ಹೇಳುತ್ತೆ?
ಆಧಾರ್ ನವೀಕರಣಕ್ಕೆ ಒಂದು ಸ್ಥಿರ ಪ್ರಕ್ರಿಯೆ ಇದೆ ಎಂದು ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಯುಐಡಿಎಐ (UIDAI) ಹೇಳಿದೆ. ಆಧಾರ್ ಕಾರ್ಡ್‌ನಲ್ಲಿ ನೀವು ಯಾವುದೇ ನವೀಕರಣಕ್ಕೆ ವಿನಂತಿಯನ್ನು ಮಾಡಿದ ನಂತರ ಇದು ಪೂರ್ಣಗೊಳ್ಳಲು ಕನಿಷ್ಠ 5 ದಿನಗಳು ಮತ್ತು ಗರಿಷ್ಠ 90 ದಿನಗಳನ್ನು ತೆಗೆದುಕೊಳ್ಳುತ್ತದೆ. ಇದರರ್ಥ ನೀವು ಆಧಾರ್‌ನಲ್ಲಿ ಯಾವುದೇ ರೀತಿಯ ನವೀಕರಣವನ್ನು ಮಾಡಿದ್ದರೆ, ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸುಮಾರು ಮೂರು ತಿಂಗಳುಗಳು ತೆಗೆದುಕೊಳ್ಳಬಹುದು. ಆಧಾರ್ ನವೀಕರಣವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.
ಮೊದಲಿಗೆ https://ssup.uidai.gov.in/checkSSUPSstatus/checkupdatestatus ಕ್ಲಿಕ್ ಮಾಡಿ. ಇಲ್ಲಿ ನೀವು ನಿಮ್ಮ 12 ಅಂಕೆ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಅದರ ನಂತರ ಕ್ಯಾಪ್ಚಾ ಪರಿಶೀಲನೆ ಮಾಡಬೇಕಾಗಿದೆ. ಇದು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ 6 ಅಂಕಿಯ ಒಟಿಪಿಯನ್ನು ತರುತ್ತದೆ. ಒಟಿಪಿಯನ್ನು ನಮೂದಿಸಿದ ನಂತರ, ನಿಮ್ಮ ನವೀಕರಣದ ಸ್ಥಿತಿ ನಿಮಗೆ ತಿಳಿಯುತ್ತದೆ.
ಇದನ್ನೂ ಓದಿ- Aadhaar Card Correction: ಆಧಾರ್‌ನಲ್ಲಿ ಹೆಸರು, ವಿಳಾಸ, ಜನ್ಮದಿನವನ್ನು ನವೀಕರಿಸಬೇಕೇ? ಈ ಡಾಕ್ಯುಮೆಂಟ್ ಅನ್ನು ಸಿದ್ಧವಾಗಿಡಿ
ಆಧಾರ್ ಕಾರ್ಡ್‌ನಲ್ಲಿ (Aadhaar Card) ನಿಮ್ಮ ಹೆಸರು, ಲಿಂಗ, ಹುಟ್ಟಿದ ದಿನಾಂಕ, ವಿಳಾಸವನ್ನು ಬದಲಾಯಿಸಲು ನೀವು ಬಯಸಿದರೆ, ನಂತರ ನೀವು 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಹೆಸರು, ವಿಳಾಸ ಮತ್ತು ಹುಟ್ಟಿದ ದಿನಾಂಕವನ್ನು ನವೀಕರಿಸಲು ನೀವು ಸಂಬಂಧಿತ ದಾಖಲೆಗಳನ್ನು ಒದಗಿಸಬೇಕಾಗುತ್ತದೆ ಎಂಬುದನ್ನು ಇಲ್ಲಿ ನೆನಪಿನಲ್ಲಿಡಿ.
ಇದನ್ನೂ ಓದಿ- MSMEs: ಕೇವಲ ಪ್ಯಾನ್-ಆಧಾರ್‌ನಲ್ಲಿ ಹೊಸ ಕಂಪನಿ ರಿಜಿಸ್ಟರ್ ಮಾಡಬಹುದು
ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿದ್ದರೆ ಮಾತ್ರ ನೀವು ಆನ್‌ಲೈನ್‌ನಲ್ಲಿ ಯಾವುದೇ ನವೀಕರಣವನ್ನು ಮಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ, ನೀವು ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಅಂತಹ ಬದಲಾವಣೆಗಳಿಗಾಗಿ, ನೀವು ಅಧಿಕೃತ ವೆಬ್‌ಸೈಟ್ https://ssup.uidai.gov.in ಗೆ ಭೇಟಿ ನೀಡಬೇಕು.