ರಷ್ಯಾ -ಉಕ್ರೇನ್ ಯುದ್ಧದಿಂದಾಗಿ ಪತಿಯಿಂದ ಬೇರ್ಪಟ್ಟ ಭಾರತದ ಸೊಸೆ, ರಕ್ಷಣೆಗಾಗಿ ಮೋದಿ ಸರ್ಕಾರದ ಮೊರೆ
ಪೋಲೆಂಡ್‌ನ ವಾರ್ಸಾದಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ಅನೇಕ ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ಇಲ್ಲಿರುವ ನಿರಾಶ್ರಿತ್ಯರಿಗೆ ಅನೇಕ ಮಂದಿ ಸಹಾಯ್ ಹಸ್ತ ಚಾಚುತ್ತಿದ್ದಾರೆ. ಆಹಾರ, ಔಷಧ ಪೂರೈಕೆ ಹೀಗೆ ನಾನಾ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಈ ನಿರಾಶ್ರಿತರ ಶಿಬಿರದಲ್ಲಿ, ಉಕ್ರೇನಿಯನ್ ಮಹಿಳೆಯೊಬ್ಬರು ಪತ್ತೆಯಾಗಿದ್ದಾರೆ. ಅವರ ಪತಿ ಭಾರತೀಯ ಮತ್ತು ದೆಹಲಿ ಮೂಲದವರು. ಈ ಮಹಿಳೆ ಗರ್ಭಿಣಿಯಾಗಿದ್ದು, ಜೀ ಮಾಧ್ಯಮದ ಮೂಲಕ, ದೆಹಲಿಯಲ್ಲಿರುವ ತನ್ನ ಪತಿಯ ಬಳಿ ತನ್ನನ್ನು ಸೇರಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಭಾರತೀಯ ಪ್ರಜೆಯೊಂದಿಗೆ ಉಕ್ರೇನಿಯನ್ ಮಹಿಳೆಯ ವಿವಾಹದ ಫೋಟೋಗಳು ಕೂಡ ಮುನ್ನೆಲೆಗೆ ಬಂದಿವೆ. ಇದರಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಮಹಿಳೆಗೆ ಮಾಂಗಲ್ಯ ಧಾರಣೆ ಮಾಡಿಸುತ್ತಿರುವುದನ್ನು ಕಾಣಬಹುದು.
ಉಕ್ರೇನಿಯನ್ ಮಹಿಳೆ ಹಿಂದೂ ಸಂಪ್ರದಾಯದ ಪ್ರಕಾರ ಭಾರತೀಯ ಪ್ರಜೆಯನ್ನು ವಿವಾಹವಾಗಿದ್ದಾರೆ.
ಮತ್ತೊಂದು ಫೋಟೋದಲ್ಲಿ, ಭಾರತೀಯ ಮೂಲದ ವ್ಯಕ್ತಿಯು ಈ ಮಹಿಲೆಯೊಂದಿಗೆ ಹಾರ ಬದಲಾಯಿಸಿಕೊಂದಿರುವುದನ್ನು ಕಾಣಬಹುದು.
ಉಕ್ರೇನಿಯನ್ ಮಹಿಳೆ ಮತ್ತು ಭಾರತೀಯ ಪ್ರಜೆಯೊಂದಿಗೆ ಅಗ್ನಿ ಸಾಕ್ಷಿಯಾಗಿ ಸಪ್ತ ಪದಿ ತುಳಿದಿದ್ದಾರೆ.