ರಷ್ಯಾದ ಕ್ಷಿಪಣಿ ದಾಳಿಗೆ ತತ್ತರಿಸಿದ ಉಕ್ರೇನ್, ದಾಳಿಯ ಫೋಟೋಗಳು ಇಲ್ಲಿವೆ
ಯುದ್ಧ ಘೋಷಣೆಯ ನಂತರ ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ಸ್ಫೋಟದ ಸದ್ದು ಕೇಳಿಸಿದೆ. ಉಕ್ರೇನ್ ಮೇಲೆ ರಷ್ಯಾದ ದಾಳಿಯ ನಂತರ ಕಚ್ಚಾ ತೈಲ ಬೆಲೆ ಬ್ಯಾರೆಲ್ ಗೆ $ 100 ದಾಟಿದೆ.
ಎಎಫ್‌ಪಿ ವರದಿಯ ಪ್ರಕಾರ, ಈಗ ರಷ್ಯಾದ ಸೈನ್ಯವು ಉಕ್ರೇನ್‌ನ ಮಿಲಿಟರಿ ಮತ್ತು ವಾಯುನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಮತ್ತೊಂದೆಡೆ, ಉಕ್ರೇನ್ ಕೂಡಾ ಯುದ್ದದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದೆ.
ರಷ್ಯಾದ 5 ಯುದ್ಧ ವಿಮಾನಗಳು ಮತ್ತು 1 ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ರಕ್ಷಣಾ ಸಚಿವಾಲಯವು ಹೇಳಿಕೊಂಡಿದೆ.
ಉಕ್ರೇನಿಯನ್ ರಾಜಧಾನಿ ಕೀವ್ ಮತ್ತು ರಷ್ಯಾದ ಗಡಿಯಲ್ಲಿರುವ ನಗರಗಳ ಮೇಲೆ ಮುಂಜಾನೆಯೇ ರಷ್ಯಾ ವಾಯುದಾಳಿ ನಡೆಸಿದೆ.
ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ಹಲವಾರು ರಷ್ಯಾದ ಯುದ್ಧ ವಿಮಾನಗಳು ಕಾಣಿಸಿಕೊಂಡಿವೆ. ಇದಾದ ನಂತರ ರಷ್ಯಾ ಕೀವ್‌ನಲ್ಲಿ ಕ್ಷಿಪಣಿ ದಾಳಿ ನಡೆಸಿದೆ ಎಂಬ ಬಗ್ಗೆ ವರದಿಯಾಗಿವೆ.
ಉಕ್ರೇನ್‌ನಲ್ಲಿ ಯುದ್ಧದ ಪರಿಸ್ಥಿತಿಯ ನಂತರ, ಅಲ್ಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ದೇಶವನ್ನು ತೊರೆಯಲು ಪ್ರಯತ್ನಿಸುತ್ತಿದ್ದಾರೆ. ಉಕ್ರೇನ್‌ನ ಬೀದಿಗಳಲ್ಲಿ ವಾಹನಗಳ ಉದ್ದನೆಯ ಸಾಲುಗಳು ಕಂಡುಬರುತ್ತಿವೆ.