ಅಂದು ಕಸ ಹೆಕ್ಕಿ ಜೀವನ ನಡೆಸುತ್ತಿದ್ದಾತ.. ಇಂದು ಕ್ರಿಕೆಟ್ ಲೋಕಕ್ಕೇ ‘ಬಾಸ್’! ಈತ RCBಯ ಸ್ಟಾರ್ ಬ್ಯಾಟ್ಸ್’ಮನ್ ಕೂಡ ಹೌದು
ಯಶಸ್ವಿಯಾಗಲು ಅತ್ಯಂತ ಮುಖ್ಯವಾಗಿ ಬೇಕಾಗಿರುವುದು ಸಮರ್ಪಣೆ. ಅದರ ಆಧಾರದ ಮೇಲೆ ಬಡ ಕುಟುಂಬದಲ್ಲಿ ಜನಿಸಿದ ಮಗುವೂ ಸಹ ಕೋಟ್ಯಾಧಿಪತಿಯಾಗಿ ಬದಲಾಗಬಹುದು. ಅಷ್ಟಕ್ಕೂ ಈ ಪೀಠಿಕೆ ಹಾಕಲು ಕಾರಣ ಓರ್ವ ಕ್ರಿಕೆಟಿಗ. ಈತ ಒಂದೊಮ್ಮೆ ಕಸ ಹೆಕ್ಕಿ ಜೀವನ ನಡೆಸುತ್ತಿದ್ದ, ಇದೀಗ ಕ್ರಿಕೆಟ್ ಲೋಕಕ್ಕೇ ಬಾಸ್ ಆಗಿ ಮೆರೆಯುತ್ತಿದ್ದಾರೆ.
ಅಷ್ಟಕ್ಕೂ ಆ ಆಟಗಾರ ಯಾರೆಂದು ಬಲ್ಲಿರಾ..!! ವೆಸ್ಟ್ ಇಂಡೀಸ್ ಸ್ಟಾರ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಬಗ್ಗೆ ನಾವಿಂದು ಮಾತನಾಡುತ್ತಿದ್ದೇವೆ.
ಕ್ರಿಸ್ ಗೇಲ್ ಕ್ರಿಕೆಟ್ ಮೈದಾನದಲ್ಲಿ ಅದ್ಭುತ ಸಿಕ್ಸರ್ ಬಾರಿಸುವುದನ್ನು ಎಲ್ಲರೂ ನೋಡಿರಬೇಕು. ಆದರೆ ತಮ್ಮ ಕುಟುಂಬವನ್ನು ಪೋಷಿಸಲು ಒಂದು ಕಾಲದಲ್ಲಿ ಕಸ ಆಯುತ್ತಿದ್ದರು ಎಂಬುದು ನಿಮಗೆ ತಿಳಿದಿದೆಯೇ?
ಸೆಪ್ಟೆಂಬರ್ 21, 1979 ರಂದು ಜಮೈಕಾದ ಕಿಂಗ್‌ಸ್ಟನ್’ನಲ್ಲಿ ಜನಿಸಿದ ಕ್ರಿಸ್ ಗೇಲ್, ಕ್ರಿಕೆಟ್ ಲೋಕದಲ್ಲಿ ಅಸಾಧ್ಯ ದಾಖಲೆಗಳನ್ನು ಸೃಷ್ಟಿಸಿದ್ದಾರೆ.
T-20 ಕ್ರಿಕೆಟ್’ನಲ್ಲಿ ಅಪಾರ ಸಾಧನೆ ಮಾಡಿರುವ ಕ್ರಿಸ್ ಗೇಲ್, ಆರ್ಸಿಬಿ ತಂಡದ ಮಾಜಿ ಆಟಗಾರ ಕೂಡ ಹೌದು. ಇತ್ತೀಚೆಗೆ ಐಪಿಎಲ್ 2024ರಲ್ಲಿ ಬೆಂಗಳೂರು ತಂಡ ಪ್ಲೇಆಫ್ ಪ್ರವೇಶಿಸಿಸುತ್ತಿದ್ದಂತೆ ಎದ್ದುನಿಂತು ಚಪ್ಪಾಳೆ ತಟ್ಟಿದ್ದಲ್ಲದೆ, ಅಭಿನಂದನೆ ಕೂಡ ಸಲ್ಲಿಸಿದ್ದರು.
ಟಿ-20 ವಿಶ್ವಕಪ್ ಆರಂಭವಾದಾಗ ಅಂದರೆ 2007 ರ ಮೊದಲ ಋತುವಿನಲ್ಲಿ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿದವರು ಕ್ರಿಸ್ ಗೇಲ್. ಟಿ-20 ವಿಶ್ವಕಪ್’ನ ಮೊದಲ ಶತಕ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಮೊದಲ ಟಿ20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಆಗಿದ್ದರೂ, ಗೇಲ್ ಇತಿಹಾಸದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.
ಇದರೊಂದಿಗೆ ಟಿ-20 ಕ್ರಿಕೆಟ್’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯೂ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಈ ಸ್ವರೂಪದಲ್ಲಿ, ಕ್ರಿಸ್ ಗೇಲ್ 463 ಪಂದ್ಯಗಳಲ್ಲಿ 22 ಶತಕಗಳನ್ನು ಗಳಿಸಿದ್ದು, ಇದು T-20 ಕ್ರಿಕೆಟ್’ನಲ್ಲಿ ಗರಿಷ್ಠವಾಗಿದೆ.
ಕ್ರಿಸ್ ಗೇಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದು, ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ODI ನಲ್ಲಿ ದ್ವಿಶತಕ, T-20 ನಲ್ಲಿ ಅತಿ ಹೆಚ್ಚು ರನ್, ಶತಕ ಮತ್ತು ಸಿಕ್ಸರ್ ಬಾರಿಸಿದ ವಿಷಯದಲ್ಲಿ ಗೇಲ್’ಗೆ ಸರಿಸಾಟಿ ಯಾರೂ ಇಲ್ಲ.
ಕ್ರಿಕೆಟ್ ಜಗತ್ತಿನಲ್ಲಿ ಯಶಸ್ವಿಯಾಗುವ ಮೊದಲು, ಕ್ರಿಸ್ ಗೇಲ್ ತಮ್ಮ ಬಾಲ್ಯದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದವರು. ಬಡ ಕುಟುಂಬದಲ್ಲಿ ಜನಿಸಿದ ಗೇಲ್, ಬೀದಿ ಬದಿಯ ಕಸ ಆಯ್ದು ಅವುಗಳನ್ನು ಮಾರಾಟ ಮಾಡಿ, ಜೊತೆಗೆ ಸಣ್ಣಪುಟ್ಟ ಕೆಲಸ ಮಾಡುತ್ತಾ ತಮ್ಮ ಕುಟುಂಬವನ್ನು ಪೋಷಿಸುತ್ತಿದ್ದರು. ಇದನ್ನು ಸ್ವತಃ ಕ್ರಿಸ್ ಗೇಲ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಆದರೆ ಇಂದು ಗೇಲ್ ಐಷಾರಾಮಿ ಜೀವನ ನಡೆಸುತ್ತಿದ್ದು, ಸದ್ಯ ಇವರು ವಾಸಿಸುವ ಮನೆ 20 ಕೋಟಿ ರೂಪಾಯಿ ಮೌಲ್ಯದ್ದು ಎಂದು ಹೇಳಲಾಗುತ್ತದೆ.