ಆಶ್ರಯ ಕೊಟ್ಟ ಸ್ನೇಹಿತೆಯ ಗಂಡನಿಗೆ ಅಣ್ಣ ಎಂದು ರಾಖಿ ಕಟ್ಟಿದ್ಳು... ಆದ್ರೆ ಕೊನೆಗೆ ಆತನಿಂದಲೇ ಮದುವೆಗೂ ಮುಂಚೆ ಗರ್ಭಿಣಿಯಾದ್ಳು ಈ ಜನಪ್ರಿಯ ನಟಿ!
ತೆಲುಗು, ತಮಿಳು ಸೇರಿದಂತೆ ದಕ್ಷಿಣದಲ್ಲಿ ತಮ್ಮ ಅದ್ಭುತ ನಟನೆಯಿಂದ ಶ್ರೀದೇವಿ ‘ಹಿಮ್ಮತ್ ವಾಲಾ’ ಚಿತ್ರದ ಮೂಲಕ ಹಿಂದಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದರು. ಅದರ ನಂತರ, ಚಾಂದಿನಿ, ಮಿಸ್ಟರ್ ಇಂಡಿಯಾ, ನಾಗಿನ್, ಚಲ್ಬಾಜ್, ಜುದಾಯಿ, ಲಾಡ್ಲಾ, ಖುದಗಾವಾ ಮುಂತಾದ ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಭಾರೀ ಜನಮನ್ನಣೆ ಗಳಿಸಿದರು.
ಶ್ರೀದೇವಿ ಅವರ ವೃತ್ತಿಪರ ಜೀವನದೊಂದಿಗೆ ಅವರ ವೈಯಕ್ತಿಕ ಜೀವನವು ತುಂಬಾ ಆಸಕ್ತಿದಾಯಕವಾಗಿದೆ. ಕೆಲವು ವರ್ಷಗಳ ಕಾಲ ಖ್ಯಾತ ಬಾಲಿವುಡ್ ಹೀರೋ ಮಿಥುನ್ ಚಕ್ರವರ್ತಿ ಜೊತೆ ಡೇಟಿಂಗ್ ಮಾಡುತ್ತಿದ್ದ ಇವರು ಅದಾದ ಬಳಿಕ ಬ್ರೇಕಪ್ ಮಾಡಿಕೊಂಡಿದ್ದರು. ಆ ನಂತರ ಬೋನಿ ಕಪೂರ್ ಜೊತೆ ವಿವಾಹಬಂಧಕ್ಕೆ ಒಳಗಾದರು.
ಆ ದಿನಗಳಲ್ಲಿ ಶ್ರೀದೇವಿ ಮಿಥುನ್ ಚಕ್ರವರ್ತಿಯನ್ನು ಗಾಢವಾಗಿ ಪ್ರೀತಿಸುತ್ತಿದ್ದರು. ಬೋನಿ ಕಪೂರ್ ಕೂಡ ಮೋನಾ ಜೊತೆ ಸುಖ ಜೀವನ ನಡೆಸುತ್ತಿದ್ದರು. ಆದರೆ ಶ್ರೀದೇವಿ ಬೋನಿ ಕಪೂರ್ ಜೊತೆ ಹೆಚ್ಚಿನ ಒಡನಾಟ ಹೊಂದಿರುವುದನ್ನು ನೋಡಿ ಮಿಥುನ್ ಚಕ್ರವರ್ತಿಗೆ ಅನುಮಾನ ಬಂದಿತ್ತು. ಈ ಅನುಮಾನಗಳನ್ನು ನಿವಾರಿಸಲು, ಶ್ರೀದೇವಿ ಒಂದು ಸಂದರ್ಭದಲ್ಲಿ ಬೋನಿ ಕಪೂರ್ʼಗೆ ರಾಖಿ ಕೂಡ ಕಟ್ಟಿದರು.
ಆದರೆ ಅದರ ನಂತರ ಬೋನಿ ಕಪೂರ್ ನಿರ್ಮಾಣದಲ್ಲಿ ಅನಿಲ್ ಕಪೂರ್ ಅಭಿನಯದ ಶೇಖರ್ ಕಪೂರ್ ನಿರ್ದೇಶನದ 'ಮಿಸ್ಟರ್ ಇಂಡಿಯಾ' ಚಿತ್ರ ಬೋನಿ ಮತ್ತು ಶ್ರೀದೇವಿ ನಡುವೆ ಅನ್ಯೋನ್ಯತೆಯನ್ನು ಹೆಚ್ಚಿಸಿತು. ಆ ಸಮಯದಲ್ಲಿ ತಾಯಿಯನ್ನು ಕಳೆದುಕೊಂಡ ಶ್ರೀದೇವಿಗೆ ಬೋನಿ ಕಪೂರ್ ಜೊತೆಯಾಗಿ ನಿಂತಿದ್ದರು. ಎಲ್ಲ ರೀತಿಯ ನೆರವು ನೀಡಿದರು. ಅದರ ನಂತರ, ಶ್ರೀದೇವಿ ಬೋನಿ ಕಪೂರ್ ನಿರ್ಮಾಣದ ಅಡಿಯಲ್ಲಿ ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು.
ಇದಾದ ನಂತರ ಬೋನಿ ಕಪೂರ್ ಮತ್ತು ಶ್ರೀದೇವಿ ನಡುವೆ ಆತ್ಮೀಯತೆ ಹೆಚ್ಚಾಯಿತು. ಶ್ರೀದೇವಿ ಮತ್ತು ಮೋನಾ ಗೆಳತಿಯರಾಗಿದ್ದರು. ಆ ಸಂದರ್ಭದಲ್ಲಿ ತಮ್ಮ ಮನೆಯಲ್ಲೇ ಉಳಿದುಕೊಳ್ಳಲು ಶ್ರೀದೇವಿಗೆ ಮೋನಾ ಅವಕಾಶವನ್ನೂ ನೀಡಿದ್ದರು. ಆದರೆ ಬೋನಿ ಕಪೂರ್ ಮತ್ತು ಶ್ರೀದೇವಿ ಮಧ್ಯೆ ಪ್ರೇಮ ಮೂಡಿತ್ತು. ಅಷ್ಟೇ ಅಲ್ಲದೆ, ಮದುವೆಗೂ ಮುನ್ನವೇ ಶ್ರೀದೇವಿ ಗರ್ಭಿಣಿಯಾದರು.
ಈ ವಿಚಾರ ತಿಳಿದ ಮೋನಾ, ನೋವಿನಿಂದಲೇ ಪತಿಗೆ ವಿಚ್ಛೇದನ ನೀಡಿದರು. ಶ್ರೀದೇವಿ ವಿರುದ್ಧ ಸಾಕಷ್ಟು ಟೀಕೆಗಳು ಎದುರಾಗಿತ್ತು. ಮನೆ ಮುರಿದವಳು ಎಂಬೆಲ್ಲಾ ಮಾತು ಕೇಳಿ ಬಂದಿತ್ತು.