ಸ್ಯಾಂಡಲ್‌ವುಡ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್.. 30 ವರ್ಷ ದಾಟಿದ್ರೂ ಮದುವೆಯಾಗದ ನಟ ನಟಿಯರು ಇವರು.!
ರಮ್ಯಾ: ಸ್ಯಾಂಡಲ್‌ವುಡ್‌ನ ಮೋಹಕತಾರೆ ರಮ್ಯಾ. ನಟನೆಯ ಜೊತೆ ರಾಜಕೀಯದಲ್ಲೂ ಗುರುತಿಸಿಕೊಂಡವರು. 2003ರಲ್ಲಿ ಪುನೀತ್ ಅಭಿನಯದ ಅಭಿ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. 41 ವರ್ಷ ವಯಸ್ಸಾದರೂ ರಮ್ಯಾ ಇನ್ನೂ ಮದುವೆಯಾಗಿಲ್ಲ. ರಮ್ಯಾ ಇತ್ತೀಚೆಗೆ ಸಿಂಗಲ್ ಆಗಿರುವುದೇ ಬೆಸ್ಟ್ ಎಂದಿದ್ದರು.
ರಕ್ಷಿತ್ ಶೆಟ್ಟಿ : ಕನ್ನಡದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರಿಗೆ 39 ವರ್ಷ ವಯಸ್ಸು. 2017 ರಲ್ಲೇ ರಶ್ಮಿಕಾ ಅವರ ಜೊತೆ ಮದುವೆ ನಿಶ್ಚಯವಾಗಿತ್ತು. ಆದರೆ ಕೆಲದಿನಗಳ ಬಳಿಕ ಈ ಸಂಬಂಧ ಮುರಿದುಬಿತ್ತು. ರಕ್ಷಿತ್ ಶೆಟ್ಟಿ ಮದುವೆ ಬಗ್ಗೆ ಸಾಕಷ್ಟು ಕುತೂಹಲವಿದೆ.
ರಾಜ್ ಬಿ ಶೆಟ್ಟಿ: ವಿಭಿನ್ನ ಕಥಾಹಂದರದ ಸಿನಿಮಾಗಳ ಮೂಲಕ ಜನರ ಮನಗೆದ್ದ ರಾಜ್ ಬಿ ಶೆಟ್ಟಿ ಸಹ ಇನ್ನೂ ಮದುವೆಯಾಗಿಲ್ಲ. ಇವರ ವಯಸ್ಸು 36 ವರ್ಷ.
ರಚಿತಾ ರಾಮ್ : ಬ್ಯೂಟಿಫುಲ್ ಬೆಡಗಿ ರಚಿತಾ ರಾಮ್ ಕೂಡ 30 ವರ್ಷ ವಯಸ್ಸಾದರೂ ಇನ್ನೂ ಮದುವೆ ಆಗಿಲ್ಲ. ರಚಿತಾ ರಾಮ್ ಮದುವೆ ವಿಚಾರ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಈ ಹಿಂದೆ ನಿಖಿಲ್ ಕುಮಾರಸ್ವಾಮಿ ಮತ್ತು ಧನ್ವಿರ್ ಗೌಡ ಜೊತೆ ಡಿಂಪಲ್ ಕ್ವೀನ್ ಮದುವೆ ಎಂಬ ವದಂತಿಯೂ ಹರಡಿತ್ತು.
ಡಾಲಿ ಧನಂಜಯ್ : ಚಿತ್ರರಂಗದಲ್ಲಿ ವಿಶಿಷ್ಟವಾಗಿ ಛಾಪು ಮೂಡಿಸಿದ ಡಾಲಿ ಧನಂಜಯ್ ಅವರಿಗೆ ಈಗ 36 ವರ್ಷ ವಯಸ್ಸು. ಇವರು ಸಹ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿದ್ದಾರೆ. ಸದ್ಯಕ್ಕೆ ಮದುವೆಯಾಗಲ್ಲ ಎನ್ನುತ್ತಿದ್ದಾರೆ ಡಾಲಿ.
ಚಿಕ್ಕಣ್ಣ : ಕಾಮಿಡಿ ಶೋ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಚಿಕ್ಕಣ್ಣ ಹಾಸ್ಯ ನಟನಾಗಿ ಖ್ಯಾತಿ ಪಡೆದಿದ್ದಾರೆ. 36 ವರ್ಷ ವಯಸ್ಸಿನ ಚಿಕ್ಕಣ್ನ ಮದುವೆ ವಿಚಾರವಾಗಿ ಹಲವು ಗಾಸಿಪ್ ಹರಡಿದ್ದವು. ಆದರೆ ಚಿಕ್ಕಣ್ಣ ಇನ್ನೂ ಮದುವೆ ಆಗಿಲ್ಲ.