Corona ರೋಗಿಗಳಲ್ಲಿ ಎದುರಾದ ಮತ್ತೊಂದು ಕಂಟಕ, Liverಗೆ ಸಂಬಂಧಿಸಿದ ಗಂಭೀರ ಕಾಯಿಲೆಯ ಅಪಾಯ

Thu, 22 Jul 2021-8:56 pm,

1. ಯಕೃತ್ತಿನ (Liver Ulcer) ಎರಡು ಭಾಗಗಳಲ್ಲಿ ಕೀವು - ಸರ್ ಗಂಗಾ ರಾಮ್ ಆಸ್ಪತ್ರೆಯ ಇನ್ಸ್ಟಿಟ್ಯೂಟ್ ಆಫ್ ಲಿವರ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಪ್ಯಾಂಕ್ರಿಯಾಟಿಕ್ ಬಿಲಾರಿ ಸೈನ್ಸಸ್ನ ಅಧ್ಯಕ್ಷ ಪ್ರೊಫೆಸರ್ ಅನಿಲ್ ಅರೋರಾ ಹೇಳುವ ಪ್ರಕಾರ, 'ಕೋವಿಡ್ನಿಂದ (Covid-19) ಚೇತರಿಸಿಕೊಂಡ ನಂತರ 22 ದಿನಗಳಲ್ಲಿಇಮ್ಯೂನೋ ಕಂಪಿಟೆಂಟ್ ಇರುವ  ರೋಗಿಗಳಲ್ಲಿ, ಅವರ ಯಕೃತ್ತಿನ ಎರಡೂ ಬದಿಗಳು ಕಿವಿನಿಂದ ತುಂಬಿರುವುದನ್ನು ನಾವು ಗಮನಿಸಿದ್ದೇವೆ ಮತ್ತು ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸುವ ಅವಶ್ಯಕತೆ ಇತ್ತು ಎಂದಿದ್ದಾರೆ. 

2. ಇವರಲ್ಲಿನ ಬಹುತೇಕರಿಗೆ ಸ್ಟೆರಾಯ್ಡ್ ನೀಡಲಾಗಿತ್ತು - ಈ ಎಲ್ಲಾ ರೋಗಿಗಳು 28-74 ವರ್ಷ ವಯಸ್ಸಿನವರಾಗಿದ್ದರು. ಅವರಲ್ಲಿ ಹತ್ತು ಪುರುಷರು ಮತ್ತು ನಾಲ್ವರು ಮಹಿಳೆಯರು ಶಾಮೀಲಾಗಿದ್ದರು. ಎಲ್ಲಾ ರೋಗಿಗಳಿಗೆ ಜ್ವರ ಮತ್ತು ಮೇಲ್ಭಾಗದ ಹೊಟ್ಟೆ ನೋವು ಇತ್ತು ಮತ್ತು 3 ರೋಗಿಗಳು ಕಪ್ಪು ಬಣ್ಣದ ಮಲ ಮತ್ತು ರಕ್ತಸ್ರಾವದ ಕುರಿತು ದೂರಿದ್ದರು. ಈ ಎಂಟು ರೋಗಿಗಳು ಕರೋನಾದಿಂದ ರಕ್ಷಣೆ ಪಡೆಯಲು ಸ್ಟೀರಾಯ್ಡ್ ಗಳನ್ನು ಪಡೆದಿದ್ದರು. ಆರು ರೋಗಿಗಳ ಯಕೃತ್ತಿನ ಎರಡೂ ಬದಿಗಳಲ್ಲಿ ಅನೇಕ ದೊಡ್ಡ ಹುಣ್ಣುಗಳನ್ನು ಹೊಂದಿದ್ದರು, ಅವರಲ್ಲಿ 5 ರೋಗಿಗಳಲ್ಲಿ ದೊಡ್ಡ ಹುಣ್ಣುಗಳ ಗಾತ್ರ 8 ಸೆಂ.ಮೀ.ನಷ್ಟಿತ್ತು.  ಅದರಲ್ಲೂ ವಿಶೇಷವಾಗಿ ಓರ್ವ ರೋಗಿಯಲ್ಲಿ ದೊಡ್ಡ ಗಾತ್ರದ ಹುಣ್ಣಿನ ಗಾತ್ರ 19 ಸೆಂ.ಮೀ. ನಷ್ಟಿತ್ತು.

3. ದೊಡ್ಡ ಕರುಳಿನಲ್ಲಿ ಅಲ್ಸರ್ - ಮಲದಲ್ಲಿನ ರಕ್ತ (Blood In Stool) ಹೊಂದಿರುವ ಮೂರು ರೋಗಿಗಳ ಕೊಲೊನೋಸ್ಕೋಪಿ (Colonoscopy)ಪರೀಕ್ಷೆಯಲ್ಲಿ  ಕರುಳಿನಲ್ಲಿ ಅಲ್ಸರ್ ಇರುವುದು ಪತ್ತೆಯಾಗಿತ್ತು.  COVID-19 ನ ಲಕ್ಷಣಗಳು ಮತ್ತು ಯಕೃತ್ತಿನ ಬಾವು ರೋಗ ನಿರ್ಣಯದ ನಡುವಿನ ಸರಾಸರಿ ಸಮಯ 22 ದಿನಗಳಾಗಿತ್ತು. 14 ರೋಗಿಗಳಲ್ಲಿ 13 ಜನರಿಗೆ ಪ್ರತಿಜೀವಕಗಳು, ಮೆಟ್ರೋನಿಡಜೋಲ್ ಔಷಧಗಳು ಮತ್ತು ಪಿತ್ತಜನಕಾಂಗದಿಂದ abdominal cavity ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಯಿತು, ಆದರೆ ದೊಡ್ಡ ಬಾವು ಹೊಂದಿರುವ ರೋಗಿಯೊಬ್ಬರು ಹೊಟ್ಟೆಯ ಕುಳಿಯಲ್ಲಿ ಕೀವು ಸಿಡಿದ ನಂತರ ಭಾರೀ ಹೊಟ್ಟೆಯ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಉಳಿದ ರೋಗಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

4. ಕೊರೊನಾ ರೋಗಿಗಳಲ್ಲಿ ಹಲವು ದೊಡ್ಡ ಗಾತ್ರದ ಹುಣ್ಣುಗಳು ದೊರೆತಿವೆ - ಈ ಕುರಿತು ಮಾಹಿತಿ ನೀಡಿರುವ ಪ್ರೊ. ಅನೀಲ್ ಆರೋರಾ, ' ನಾವು ನಮ್ಮ ರೋಗಿಗಳಲ್ಲಿ ಇನ್ನೂ ದೊಡ್ಡ ಗಾತ್ರದ ಹುಣ್ಣುಗಳನ್ನು ಗಮನಿಸಿದ್ದೇವೆ ಮತ್ತು ಇವು ಓರ್ವ  ದುರ್ಬಲ ರೋಗನಿರೋಧಕ ಸಾಮರ್ಥ್ಯ ಹೊಂದಿರುವ ವ್ಯಕ್ತಿಯಲ್ಲಿ ಅಸಾಮಾನ್ಯವಾಗಿವೆ. COVID-19 ಸೋಂಕಿನಿಂದ ರೋಗನಿರೋಧಕ ಶಕ್ತಿಯ ದಮನದ ಜೊತೆಗೆ COVID ಸೋಂಕಿಗೆ ಚಿಕಿತ್ಸೆಗಾಗಿ  ಸ್ಟೀರಾಯ್ಡ್‌ಗಳ (Steroid) ಬಳಕೆ ಮತ್ತು ಈ ಸಾಂಕ್ರಾಮಿಕ COVID-19 ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಯಕೃತ್ತಿನ ಹುಣ್ಣುಗಳ ಉಂಟಾಗಿರುವ ಅನುಮಾನ ದೃಢವಾಗಿದೆ. ಇದರ ಜೊತೆಗೆ ಚಿಕಿತ್ಸೆಯಲ್ಲಿ ವಿಳಂಬದಿಂದಾಗಿ ಈ ರೋಗಿಗಳಲ್ಲಿ ಹಲವಾರು ಹುಣ್ಣುಗಳು ಕಾಣಿಸಿಕೊಂಡಿರುವ ಸಾಧ್ಯತೆ ಇದೆ' ಎಂದಿದ್ದಾರೆ.

5. ಲೀವರ್ ನಲ್ಲಿ ಹುಣ್ಣುಗಳಾಗಲು ಕಾರಣವೇನು? - ಎಂಟಾಮೀಬಾ ಹಿಸ್ಟೊಲಿಟಿಕಾ ಬ್ಯಾಕ್ಟೀರಿಯಂ ಕಳಪೆ ಮಟ್ಟದ ನೈರ್ಮಲ್ಯ ವ್ಯವಸ್ಥೆ ಇರುವ ದೇಶಗಳಲ್ಲಿ ಕಾಣಿಸಿಕೊಳ್ಳುವ ಒಂದು ರೀತಿಯ ಬ್ಯಾಕ್ಟೀರಿಯಾ ಆಗಿದೆ. ಇದು ದೇಹದಲ್ಲಿ ಅಮೀಬಿಯಾಸಿಸ್ ಅನ್ನು ಉಂಟುಮಾಡುತ್ತದೆ. ಇದರಿಂದ ಕರುಳಿನಲ್ಲಿ ಉಂಟಾಗುವ ಸೋಂಕಿಗೆ ಅಮೀಬಿಕ್ ಭೇದಿ ಎಂದೂ ಕೂಡ ಕರೆಯುತ್ತಾರೆ. ಸೋಂಕಿಗೆ ಒಳಗಾದ ಬಳಿಕ Parasitic blood flow ಮೂಲಕ ಇದು ಕರುಳಿನಿಂದ ಯಕೃತ್ತಿಗೆ ತಲುಪುತ್ತದೆ ಮತ್ತು ಯಕೃತ್ತಿನ ಹುಣ್ಣುಗಳಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಈ ಹುಣ್ಣುಗಳು ಒಂಟಿಯಾಗಿರುತ್ತವೆ ಹಾಗೂ ಗಾತ್ರದಲ್ಲಿ ತುಂಬಾ ಚಿಕ್ಕದಾಗಿರುತ್ತವೆ. ಆದರೆ, ಲೀವರ್ ನಲ್ಲಿ ಇಷ್ಟೊಂದು ದೊಡ್ಡ ಗಾತ್ರದ ಹುಣ್ಣುಗಳು ಕಂಡುಬರುವಿಕೆ ಅಸಾಮಾನ್ಯವಾಗಿದ್ದು ಆತಂಕ ಹೆಚ್ಚಿಸುತ್ತವೆ ಎಂದು ಪ್ರೊಫೆಸ್ಸರ್ ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link