Heart Blockage Symptoms In Men: ಪುರುಷರಲ್ಲಿ ಹೃದಯಾಘಾತದ ಅಸಾಮಾನ್ಯ ಲಕ್ಷಣಗಳು

Tue, 11 Jun 2024-8:49 am,

ಹೃದಯಾಘಾತವು ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದೆ. ರಕ್ತನಾಳಗಳಲ್ಲಿನ ಅಡಚಣೆಯಿಂದಾಗಿ ಅಥವಾ ಕಿರಿದಾಗುವಿಕೆಯಿಂದಾಗಿ ಹೃದಯಕ್ಕೆ ಆಮ್ಲಜನಕ, ಪೋಷಕಾಂಶಗಳು ಸರಿಯಾಗಿ ಸಾಗಣೆಯಾಗದೆ ಹೃದಯಾಘಾತ ಸಂಭವಿಸಬಹುದು.  ಈ ಮಾರಣಾಂತಿಕ ಸ್ಥಿತಿಗೆ ಅತ್ಯಂತ ಅಪಾಯಕಾರಿ ಅಂಶ ಕೊಲೆಸ್ಟ್ರಾಲ್ ಹೆಚ್ಚಳ. 

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಧಿಕವಾಗಿ ಸಂಗ್ರಹವಾಗುವುದು ರಕ್ತದ ಹರಿವಿನ ಚಾನಲ್ ಕಿರಿದಾಗುವಿಕೆಗೆ ಕಾರಣವಾಗಬಹುದು.  ಇದು ಹೃದಯಕ್ಕೆ ರಕ್ತದ ಸುಗಮ ಹರಿವನ್ನು ತಡೆಯುತ್ತದೆ. ಈ ಫೋಟೋಗ್ಯಾಲರಿಯಲ್ಲಿ ರಾತ್ರಿ ವೇಳೆ ಪುರುಷರ ಕಾಲುಗಳು ಮತ್ತು ಪಾದಗಳಲ್ಲಿ ಕಂಡು ಬರುವ ಹೆಚ್ಚಿನ ಕೊಲೆಸ್ಟ್ರಾಲ್ -ಪ್ರೇರಿತ ಹೃದಯದ ಅಡಚಣೆಯ ಕೆಲವು ಚಿಹ್ನೆಗಳ ಬಗ್ಗೆ ತಿಳಿಯೋಣ... 

ಪುರುಷರಿಗೆ ರಾತ್ರಿ ವೇಳೆ ಪಾದಗಳು ಮತ್ತು ಕಾಲುಗಳಲ್ಲಿ ಹಠಾತ್ ಊತ ಕಂಡು ಬಂದರೆ ಇದು ಕಳಪೆ ರಕ್ತಚಲನೆಯ ಲಕ್ಷಣವಾಗಿರಬಹುದು.   

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿದ್ದರೆ ಅಂತಹ ಸಂದರ್ಭದಲ್ಲಿ ಕಾಲುಗಳು ಅಥವಾ ಪಾದಗಳ ಕೆಳಗೆ ಜುಮ್ಮೆನಿಸುವಿಕೆ ಸಂವೇದನೆ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ರಾತ್ರಿ ವೇಳೆ ಇದು ಹೆಚ್ಚಾಗಿ ಸಂಭವಿಸುತ್ತದೆ. 

ರಾತ್ರಿ ವೇಳೆ ಕಾಲುಗಳು ಮತ್ತು ಪಾದಗಳಲ್ಲಿ ಭಾರದ ಭಾವನೆ ಉಂಟಾಗುವುದು ಅಥವಾ ಬಿಗಿಯಾದ ಸಂವೇದನೆಯು ಹೃದಯಕ್ಕೆ ರಕ್ತ ಪೂರೈಕೆ ಸರಿಯಾಗಿ ಆಗುತ್ತಿಲ್ಲ ಎಂಬುದರ ಎಚ್ಚರಿಕೆಯ ಗಂಟೆಯಾಗಿದೆ. 

ಕಾಲುಗಳು ಮತ್ತು ಪಾದಗಳಲ್ಲಿ ಕಂಡುಬರುವ ಹೃದಯದ ಅಡಚಣೆಯ ಸಾಮಾನ್ಯ ಲಕ್ಷಣ ಎಂದರೆ ಚರ್ಮದ ಬಣ್ಣದಲ್ಲಿ ಬದಲಾವಣೆ. ಪುರುಷರ  ಕಾಲುಗಳು ಅಥವಾ ಪಾದಗಳು ನೀಲಿ ಅಥವಾ ನೇರಳೆ ಬಣ್ಣಕ್ಕೆ ತಿರುಗುತ್ತಿದ್ದರೆ, ಹೃದಯದ ಅಡಚಣೆಯಿಂದ ಉಂಟಾಗುವ ಕಳಪೆ ರಕ್ತಪರಿಚಲನೆಯೇ ಇದಕ್ಕೆ ಪ್ರಮುಖ ಕಾರಣ ಎಂಬುದನ್ನು ಅರ್ಥ ಮಾಡಿಕೊಳ್ಳಿ. 

ಪುರುಷರಿಗೆ ಕಾಳುಗಳು ಮತ್ತು ಪಾದಗಳಲ್ಲಿ ಕಂಡು ಬರುವ ಹಠಾತ್ ನಾಡಿ ನಷ್ಟ, ದುರ್ಬಲತೆಯೂಸ್ ಸಹ ದೇಹದಲ್ಲಿ ಕಡಿಮೆಯಾದ ರಕ್ತದ ಹರಿವಿನ ಮೂಕ ಸಂದೇಶವಾಗಿರಬಹುದು.   

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link