ಈ ಯೋಜನೆಯಲ್ಲಿ ಮಹಿಳೆಯರಿಗೆ ಸಿಗುತ್ತದೆ ಬಡ್ಡಿ ರಹಿತ ಸಾಲ ! ಮಹಿಳೆಯರಿಗಾಗಿ ಕೇಂದ್ರ ಸರ್ಕಾರದ ಸೂಪರ್ ಸ್ಕೀಮ್
ಭಾರತದಲ್ಲಿ ಮಹಿಳೆಯರಿಗಾಗಿ ವಿವಿಧ ವಿಶೇಷ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಯಾರ ಮೇಲೆಯೂ ಅವಲಂಬಿತರಾಗದೆ ಮಹಿಳೆಯರು ತಮ್ಮ ಕಾಲ ಮೇಲೆ ನಿಲ್ಲಲು ಈ ಯೋಜನೆಗಳು ಉಪಯುಕ್ತವಾಗಿವೆ.
ಮಹಿಳೆಯರಿಗಾಗಿ ಇರುವ ಅತ್ಯುತ್ತಮ ಯೋಜನೆಗಳಲ್ಲಿ ಉದ್ಯೋಗಿನಿ ಯೋಜನೆಯೂ ಒಂದು. ಕೇಂದ್ರ ಸರ್ಕಾರದ ಸೂಚನೆಯಂತೆ ಬ್ಯಾಂಕ್‌ಗಳು ಈ ಯೋಜನೆಯನ್ನು ಜಾರಿಗೆ ತರುತ್ತವೆ.ಈ ಯೋಜನೆಯಡಿಯಲ್ಲಿ ಸಣ್ಣ ವ್ಯಾಪಾರ ಸಾಲ ಮತ್ತು ಕೃಷಿ ಸಾಲವನ್ನು ಪಡೆಯಬಹುದು.
ಈ ಉದ್ಯೋಗಿನಿ ಯೋಜನೆಯಡಿ ಮಹಿಳೆಯರು 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಪಡೆಯಬಹುದು. ಇದರ ಮೂಲಕ 88 ಬಗೆಯ ಸಣ್ಣ ಉದ್ದಿಮೆಗಳನ್ನು ಮಾಡಬಹುದು.
ಉದ್ಯೋಗಿನಿ ಯೋಜನೆಯಡಿ ಮಹಿಳೆಯರು ಸಾಲ ಪಡೆಯಲು 18 ರಿಂದ 55 ವರ್ಷದೊಳಗಿನವರಾಗಿರಬೇಕು. ಈ ಯೋಜನೆಯಡಿ ಸ್ವಯಂ ಉದ್ಯೋಗಿ ಉದ್ಯಮಿಗಳಿಗೆ ಸಾಲ ನೀಡಲಾಗುತ್ತದೆ.
ಈಗಾಗಲೇ ವ್ಯಾಪಾರ ಮಾಡುತ್ತಿದ್ದರೂ ಸಾಲ ನೀಡಲಾಗುವುದು. ಅಂಗವಿಕಲರು, ವಿಧವೆಯರು ಮತ್ತು ದಲಿತ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡಲಾಗುವುದು. ಇತರ ವರ್ಗದ ಮಹಿಳೆಯರಿಗೆ ಶೇ.10 ರಿಂದ 12ರಷ್ಟು ಬಡ್ಡಿ ವಿಧಿಸಲಾಗುವುದು.