Upcoming Smartphones In July: ಜುಲೈ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಿಡುಗಡೆಯಾಗುತ್ತಿವೆ 5 ಹೊಸ ಸ್ಮಾರ್ಟ್ ಫೋನ್ ಗಳು

Sat, 25 Jun 2022-6:36 pm,

1. ನಥಿಂಗ್ ಫೋನ್ (1)- ನಥಿಂಗ್ ಫೋನ್ ತನ್ನ ಈ ಮೊಟ್ಟಮೊದಲ ಫೋನ್ ಅನ್ನು ಜುಲೈ 12ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಫೋನ್ ಅನ್ನು ನೀವು ಫ್ಲಿಪ್ ಕಾರ್ಟ್ ಮೂಲಕ ಖರೀದಿಸಬಹುದು. ಪಾರದರ್ಶಕವಾಗಿ ಕಾಣಿಸಿಕೊಳ್ಳುವ ಈ ಫೋನ್ ಸ್ನಾಪ್ ಡ್ರ್ಯಾಗನ್ 778+ ಪ್ರೊಸೆಸರ್ ಒಳಗೊಂಡಿದೆ. ಇದು ಡ್ಯೂಯೆಲ್ ರಿಯರ್ ಕ್ಯಾಮ್ ಸೆಟಪ್ ನೊಂದಿಗೆ ಬಿಡುಗಡೆಯಾಗಲಿದೆ. ಆದರೆ, ಈ ಫೋನ್ ಬೆಲೆಯನ್ನು ಇದುವರೆಗೆ ಪ್ರಕಟಿಸಲಾಗಿಲ್ಲ.

2. ಶಾವೊಮಿ 12 ಅಲ್ಟ್ರಾ - ಶಾವೊಮಿ ಕಂಪನಿಯ ಈ ಲೇಟೆಸ್ಟ್ ಸ್ಮಾರ್ಟ್ ಫೋನ್ 120 W ವೇಗದ ಚಾರ್ಜಿಂಗ್ ಸಪೋರ್ಟ್ ಹಾಗೂ 5000mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಬಿಡುಗಡೆಯಾಗಲಿದೆ. ಈ ಫೋನ್ ಬಿಡುಗಡೆಯ ಅಧಿಕೃತ ದಿನಾಂಕ ಇನ್ನು ಪ್ರಕಟಿಸಲಾಗಿಲ್ಲ. ಆದರೆ, ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿನ ವರದಿಗಳ ಪ್ರಕಾರ ಈ ಫೋನ್ ಜುಲೈ 5ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸ್ಮಾರ್ಟ್ ಫೋನ್ Qualcomm Snapdragon 8+ Gen 1 ಆಧಾರಿತವಾಗಿರಲಿದೆ.

3. ಒನ್ ಪ್ಲಸ್ ನೋರ್ಡ್-2ಟಿ: Mediatek Dimensity 1300 ಚಿಪ್ ಸೆಟ್ ಮೊಲಕ ಚಾಲಿತ ಈ 5ಜಿ ಸ್ಮಾರ್ಟ್ ಫೋನ್ 6.43 ಇಂಚಿನ ಎಮೊಲೆಡ್ ಡಿಸ್ಪ್ಲೇ, 50ಎಂಪಿ ಪ್ರೈಮರಿ ಸೆನ್ಸರ್ ಹೊಂದಿರುವ ಟ್ರಿಪಲ್ ರಿಯರ್ ಕ್ಯಾಮ್ ಸೆಟಪ್ ಹಾಗೂ 4500 mAh ಬ್ಯಾಟರಿ ಮತ್ತು 80 W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಸ್ಮಾರ್ಟ್ ಫೋನ್ ಕುರಿತು ಸೋರಿಕೆಯಾದ ಮಾಹಿತಿ ಪ್ರಕಾರ, ಜುಲೈ 1 ರಂದು ಈ ಫೋನ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. 

4. ರಿಯಲ್ ಮೀ ಜಿಟಿ 2 ಮಾಸ್ತರ್ ಎಡಿಶನ್: 12ಜಿಬಿ RAM ಹೊಂದಿರುವ ಮತ್ತು 5000 ಎಂಎಹೆಚ್ ಬ್ಯಾಟರಿ ಸಾಮರ್ಥ್ಯದ ಈ ಸ್ಮಾರ್ಟ್ ಫೋನ್ 150W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. Qualcomm Snapdragon 8+ Gen 1 ಚಿಪ್ ಸೆಟ್ ಮೇಲೆ ಕಾರ್ಯನಿರ್ವಹಿಸುವ ಈ ಫೋನ್ ನಲ್ಲಿ  50ಎಂಪಿ ಮೇನ್ ಸೆನ್ಸರ್ ಹೊಂದಿರುವ ಟ್ರಿಪಲ್ ರಿಯರ್ ಕ್ಯಾಮರಾ ಸೆಟಪ್ ಇರುವ ಸಾಧ್ಯತೆ ಇದೆ. ಈ ಫೋನ್ ಲಾಂಚ್ ಡೇಟ್ ಕುರಿತು ಇದುವರೆಗೆ ಅಧಿಕೃತ ಮಾಹಿತಿ ಪ್ರಕಟಗೊಂಡಿಲ್ಲ. 

5. ಆಸೂಸ್ ರೆಗ್ ಫೋನ್ 6: Qualcomm Snapdragon 8+ Gen 1 ಆಧಾರದ ಮೇಲೆ ಕಾರ್ಯನಿರ್ವಹಿಸುವ ಈ ಸ್ಮಾರ್ಟ್ ಫೋನ್ ಡ್ಯುಯೆಲ್ ಚಾರ್ಜಿಂಗ್ ಸಪೋರ್ಟ್ ನೊಂದಿಗೆ ಬಿಡುಗಡೆಯಾಗಲಿದೆ. ಪವರ್ಫುಲ್ ಪ್ರೋಸೆಸರ್ ಹೊಂದಿರುವ ಈ ಅದ್ಭುತ ಫೋನ್ ಹಲವು ಗೇಮಿಂಗ್ ಎಕ್ಸಸರೀಸ್ ನೊಂದಿಗೆ ಮಾರುಕಟ್ಟೆಯೇ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ. ಜುಲೈ 5 ರಂದು ಇದು ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link