Upendra birthday:ಉಪೇಂದ್ರ-ಪ್ರಿಯಾಂಕ ಜೀವನದಲ್ಲಿ ಗಣಪನೇ ಹೀರೋ! ಈ ಜೋಡಿ ಪ್ರೇಮ್ ಕಹಾನಿ ಶುರುವಾಗಿದ್ದು ಎಲ್ಲಿ,ಹೇಗೆ ಗೊತ್ತಾ?
ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಇಂದು (ಸೆಪ್ಟೆಂಬರ್ 18) ಹುಟ್ಟುಹಬ್ಬದ ಸಂಭ್ರಮ, ಸ್ಯಾಂಡಲ್‌ವುಡ್‌ನ ಬೆಸ್ಟ್ ಡೈರೆಕ್ಟರ್ ಅಷ್ಟೆ ಅಲ್ಲದೆ ಆಕ್ಟರ್‌ಗಳಲ್ಲಿ ಉಪ್ಪಿ ಹೆಸರು ಮಾಡಿದ್ದಾರೆ. ಅವರ ಯೂನಿಕ್ ಸ್ಟೈಲ್‌ಗೆ ಫ್ಯಾನ್ಸ್ ಕನ್‌ಫ್ಯೂಸ್ ಆಗೋದು ಅಷ್ಟೆ ಅಲ್ಲದೆ ಅವರ ವಿಭಿನ್ನ ಶೈಲಿಯ ಕಥೆ ಹಾಗೂ ಆಕ್ಟಿಂಗ್‌ಗೆ ಫ್ಯಾನ್ಸ್ ಫಿದಾ ಆಗುತ್ತಾರೆ.
ಇತ್ತೀಚೆಗಷ್ಟೆ ಗಣೇಶ ಹಬ್ಬ ಮುಗಿದಿದೆ, ಇದರ ಬೆನ್ನಲ್ಲೆ ಉಪ್ಪಿ ಇಂದು (ಸೆಪ್ಟೆಂಬರ್ 18) ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಉಪ್ಪಿಯ ಸಿನಿಮಾ ಅಷ್ಟೆ ಅಲ್ಲದೆ ಅವರ ವೈಯಕ್ತಿಕ ಜೀವನದ ಕುರಿತ ಅಪ್ಡೇಟ್‌ಗಳಿಗಾಗಿಯೂ ಫ್ಯಾನ್ಸ್ ಸದಾ ಕಾಯುತ್ತಿರುತ್ತಾರೆ.
ಹೀಗಿರುವಾಗ ಉಪ್ಪಿ ಅವರ ಹಲವು ಅಭಿಮಾನಿಗಳಿಗೆ ತಿಳಿಯದ ಗುಟ್ಟೊಂದಿದೆ. ಅದೇನಪ್ಪಾ ಅಂತೀರಾ? ಉಪ್ಪಿ ಹಾಗೂ ಅವರ ಪ್ರೀತಿಯ ಮಡದಿ ಪ್ರೀಯಾಂಕ ಉಪೇಂದ್ರ ಅವರು ಒಂದಾಗುವುದಕ್ಕೆ ಗಣೇಶ ಮುಖ್ಯ ಪಾತ್ರ ವಹಿಸಿದ್ದನಂತೆ.
ಬಾಲ್ಯದಿಂದ ಹಿಡಿದು ಇಂದಿನವರೆಗೆ ಉಪ್ಪಿ ಲೈಫ್‌ನಲ್ಲಿ ಗಣೇಶ ಫುಲ್ ಸ್ಪೆಷಲ್, ಪ್ರಿಯಾಂಕ ಅವರ ಜೀವನದಲ್ಲಿ ಬರುವುದಕ್ಕೂ ಸಹ ಗಣೇಶನೇ ಕಾರಣ ಎಂದು ಉಪ್ಪಿ ಹಲವಾರು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ.
ಬಾಲ್ಯದಿಂದಲೂ ಹುಟ್ಟುಹಬ್ಬ ಆಚರಿಸುತ್ತಿದ್ದ ಉಪ್ಪಿ ತಮ್ಮ ಸ್ನೇಹಿತೆಯನ್ನು ಒಮ್ಮೆ ಮನೆಗೆ ಕರೆಯುತ್ತಾರೆ ಅಂದು ಗಣೇಶ ಹಬ್ಬ, ಉಪ್ಪಿ ಮಾತಿಗೆ ಒಪ್ಪಿದ ಗೆಳತಿ ಅವರ ಮನೆಗೆ ಗಣಪನ ದರ್ಶನ ಪಡೆಯಲು ಬರುತ್ತಾರೆ. ಅಂದನ ವರೆಗೆ ಕೇವಲ ಸ್ನೇಹಿತರಾಗಿದ್ದ ಈ ಜೋಡಿ ನಂತರ ಜೀವನ ಸಂಗಾತಿಗಳಾಗುತ್ತಾರೆ. ಅಷ್ಟಕ್ಕೂ ಆ ಸ್ನೇಹಿತೆ ಬೇರಾರು ಅಲ್ಲ ಪ್ರಿಯಾಂಕ ಉಪೇಂದ್ರ.
ಪ್ರತಿ ವರ್ಷ ಉಪೇಂದ್ರ ಅವರು ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ತಮ್ಮ ಕತ್ರಿಗುಪ್ಪೆ ಮನೆಯಲ್ಲಿ ಆಚರಿಸುತ್ತಿದ್ದರು, ಆದರೆ ಈ ಭಾರಿ ಸದಾಶಿವನಗರದಲ್ಲಿನ ತಮ್ಮ ಹೊಸ ಮನೆಯಲ್ಲಿ ನಟ ಗಣೇಶ ಹಬ್ಬವನ್ನು ಆಚರಿಸಿದ್ದು, ತಮ್ಮ ಹುಟ್ಟುಹಬ್ಬವನ್ನು ಸಹ ಈ ಮನೆಯಲ್ಲಿಯೇ ಆಚರಿಸಿಕೊಳ್ಳುತ್ತಿದ್ದಾರೆ.