UPI News- ಇನ್ಮುಂದೆ ATM ಗಳಿಂದ ಟಚ್ ಲೆಸ್ ಕ್ಯಾಶ್ ಪಡೆಯಬಹುದು, ಏನಿದು ಹೊಸ ವ್ಯವಸ್ಥೆ ?

Sat, 03 Apr 2021-11:01 am,

1. 1500ಕ್ಕೂ ಹೆಚ್ಚು ATM ಗಳು ಅಪ್ಡೇಟ್ (Over 1500 ATM upgrades): ನಮ್ಮ ಅಂಗಸಂಸ್ಥೆ ವೆಬ್ ಸೈಟ್ ಆಗಿರುವ ಝೀ ನ್ಯೂಸ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಇಂಟರ್ ಆಪರೆಬಲ್ ಕಾರ್ಡ್ ಲೆಸ್ ಕ್ಯಾಶ್ ವಿಥ್ ಡ್ರಾವಲ್ (ICCW) ಸೊಲ್ಯುಶನ್ ನಿಂದ ತಯಾರಾದ ಈ ವಿಶೇಷ ATM ಗಳನ್ನು ವಿವಿಧ ಪ್ರದೇಶಗಳಲ್ಲಿ ಇನ್ಸ್ಟಾಲ್ ಮಾಡಲು ಸಿಟಿ ಯುನಿಯನ್ ಬ್ಯಾಂಕ್ NCR ಕಾರ್ಪೋರೇಶನ್ (NCR Corporation) ಜೊತೆಗೆ ಕೈಜೋಡಿಸಿದೆ. ಇದುವರೆಗೆ 1500ಕ್ಕು ಅಧಿಕ ಪ್ರದೇಶಗಳ ATM ಗಳನ್ನು ಅಪ್ಗ್ರೇಡ್ ಮಾಡಲಾಗಿದ್ದು, ಹಲವು ಪ್ರದೇಶಗಳಲ್ಲಿ ಅಪ್ಗ್ರೇಡ್ ಕಾರ್ಯ ಮುಂದುವರೆದಿದೆ. 

2. ಈ ರೀತಿ ಹಣ ಹಿಂಪಡೆಯಬಹುದು (This way you can withdraw cash): ಈ ನೂತನ ATM ಗಳಿಂದ ಹಣ ಹಿಂಪಡೆಯಲು ಎಲ್ಲಕ್ಕಿಂತ ಮೊದಲು ನೀವು ನಿಮ್ಮ ಸ್ಮಾರ್ಟ್ಫೋನ್ ನಲ್ಲಿ ಯಾವುದಾದರೊಂದು UPI ಆಪ್ (GPay, BHIM, Paytm, Phonepe, Amazon) ಓಪನ್ ಮಾಡಬೇಕು. ಇದಾದ ಬಳಿಕ ATM ಸ್ಕ್ರೀನ್ ನಲ್ಲಿ ಕಾಣಿಸುವ QR code  ಸ್ಕ್ಯಾನ ಮಾಡಬೇಕು. ಸ್ಕ್ಯಾನಿಂಗ್ ಪೂರ್ಣಗೊಂಡ ಬಳಿಕ, ನಿಮಗೆ ಎಷ್ಟು ಹಣ ಹಿಂಪಡೆಯಬೇಕು ಅದನ್ನು ನಿಮ್ಮ ಫೋನ್ ನಲ್ಲಿ ಎಂಟರ್ ಮಾಡಬೇಕು. ಇದಾದ ಬಳಿಕ ಪ್ರೋಸೀಡ್ ಗುಂಡಿಯನ್ನು ಒತ್ತಬೇಕು. ಇದಾದ ಬಳಿಕ ನಿಮಗೆ 4 ರಿಂದ 6 ಅಂಕಗಳ UPI PIN ನಮೂದಿಸಲು ಕೇಳಲಾಗುವುದು. ಅದನ್ನು ಎಂಟರ್ ಮಾಡಿದ ಬಳಿಕ ATM ಯಂತ್ರದಿಂದ ಹಣ ಹೊರಬರಲಿದೆ. ಈ ಪ್ರಕ್ರಿಯೆಯನ್ನು ಬಳಸಿ ಆರಂಭದಲ್ಲಿ ನೀವು ಐದು ಸಾವಿರ ರೂಪಾಯಿ ಮಾತ್ರ ವಿಥ್ ಡ್ರಾ ಮಾಡಬಹುದು.

3. UPI ಹೇಗೆ ಕಾರ್ಯನಿರ್ವಹಿಸುತ್ತದೆ?:  ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್ (Unified Payments Interface) ಒಂದು ರಿಯಲ್ ಟೈಮ್ ಪೇಮೆಂಟ್ ಸಿಸ್ಟಂ ಆಗಿದೆ. ಇದು ಮೊಬೈಲ್ ಆಪ್ ಮೂಲಕ ಬ್ಯಾಂಕ್ ನ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣವನ್ನು ತಕ್ಷಣ ವರ್ಗಾಯಿಸಲು ಅನುಕೂಲ ಕಲ್ಪಿಸುತ್ತದೆ. ಇದಕ್ಕಾಗಿ ನೀವು ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು UPI ಗೆ ಲಿಂಕ್ ಮಾಡಬೇಕು. ಹಲವು ಬ್ಯಾಂಕ್ ಅಕೌಂಟ್ ಗಳನ್ನು ನೀವು ಕೇವಲ ಒಂದೇ UPI ಆಪ್ ಮೂಲಕ ನಿರ್ವಹಿಸಬಹುದು ಹಾಗೂ ಫಂಡ್ ಟ್ರಾನ್ಸ್ ಫರ್ ಮಾಡಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link