UPI Transaction Limit: ಒಂದು ದಿನದಲ್ಲಿ ಯುಪಿಐ ಮೂಲಕ ಎಷ್ಟು ಹಣ ಪಾವತಿಸಬಹುದು?
ಯುಪಿಐ ಎಂದರೆ ಏಕೀಕೃತ ಪಾವತಿ ಇಂಟರ್ಫೇಸ್. ಇದನ್ನು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿ ಪಡಿಸಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ.
ತಂತ್ರಜ್ಞಾನ ಯುಗದಲ್ಲಿ ಡಿಜಿಟಲ್ ಪಾವತಿಗಳಲ್ಲಿ ಭಾರತದಲ್ಲಿ ಆನ್‌ಲೈನ್ ಪಾವತಿಯ ಸುಲಭ ವಿಧಾನಗಳಲ್ಲಿ ಯುಪಿಐ ಒಂದಾಗಿದೆ.
ಯುಪಿಐ ಪಾವತಿಯು ಬಳಕೆದಾರರು ತಮ್ಮ ಮೊಬೈಲ್ ಅಪ್ಲಿಕೇಶನ್ ಮೂಲಕ ತ್ವರಿತವಾಗಿ ಹಣವನ್ನು ವರ್ಗಾಯಿಸಲು ಅನುವು ಮಾಡಿಕೊಡುತ್ತದೆ.
ಆರ್‌ಬಿಐ ಜನವರಿ 1, 2024ರಿಂದ ಯುಪಿಐ ಪಾವತಿಗೆ ಸಂಬಂಧಿಸಿದ ತನ್ನ ನಿಯಮಗಳು ಮತ್ತು ನಿಬಂಧನೆಗಳನ್ನು ಬದಲಾಯಿಸಿದೆ. ಇದು ಯುಪಿಐ ವಹಿವಾಟು ಮಿತಿಗೆ ಸಂಬಂಧಿಸಿದ್ದಾಗಿದೆ.
ಆರ್‌ಬಿಐ ನಿಯಮಗಳನ್ನು ಎನ್‌ಸಿಪಿಐ ಅನುಸರಿಸಬೇಕಿದ್ದು, ಆರ್‌ಬಿಐ ಸೂಚನೆಯಂತೆ ಯುಪಿಐ ದೈನಂದಿನ ಮಿತಿಯನ್ನು ನಿಗದಿಗೊಳಿಸಲಾಗಿದೆ.
ಎನ್‌ಸಿಪಿಐ ಪ್ರಕಾರ, ಯುಪಿಐ ದೈನಂದಿನ ವಹಿವಾಟಿನ ಮಿತಿ 1 ಲಕ್ಷ ರೂ. ಆಗಿದೆ. ಆದರೆ, ಶಿಕ್ಷಣ ಸಂಸ್ಥೆಗಳು ಮತ್ತು ಆರೋಗ್ಯ ಸೇವೆಗೆ ಪಾವತಿ ಮಾಡಬೇಕಾದರೆ, ಈ ಮಿತಿ 5 ಲಕ್ಷ ರೂ.ಗಳವರೆಗೆ ಇರುತ್ತದೆ.
ಹೊಸ ಮಾರ್ಗಸೂಚಿಗಳ ಪ್ರಕಾರ, ಎನ್‌ಸಿಪಿಐ ಯುಪಿಐ ವಹಿವಾಟುಗಳಿಗೆ ಗರಿಷ್ಠ ಮಿತಿಯನ್ನು ಹೊಂದಿಸಿದ್ದು, ನಿತ್ಯ 20 ಯುಪಿಐ ವಹಿವಾಟುಗಳನ್ನು ಅನುಮತಿಸುತ್ತದೆ.