UPI new Rules: ಜನವರಿ 1ರಿಂದ ಜಾರಿಗೆ ಬರಲಿವೆ ಈ ಪ್ರಮುಖ UPI ಬದಲಾವಣೆಗಳು
ಜನವರಿ 1ರಿಂದ ಯುಪಿಐ ವಹಿವಾಟುಗಳಿಗೆ ಸಂಬಂಧಿಸಿದ ಹಲವಾರು ಮಹತ್ವದ ಕಾನೂನು ಮತ್ತು ನಿಬಂಧನೆಗಳನ್ನು ಅಂಗೀಕರಿಸಲಾಗಿದೆ. ಇವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ದೇಶದಾದ್ಯಂತ ಯುಪಿಐ ಎಟಿಎಂಗಳನ್ನು ಹೊರತರಲು RBI ಯೋಜಿಸಿದೆ. ಈ ಎಟಿಎಂಗಳು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣವನ್ನು ಹಿಂಪಡೆಯಲು ನಿಮಗೆ ಅನುಮತಿ ನೀಡುತ್ತವೆ.
ಹೆಚ್ಚುತ್ತಿರುವ ಆನ್‍ಲೈನ್ ಪಾವತಿ ವಂಚನೆಯ ಘಟನೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಈ ಹಿಂದೆ ಎಂದಿಗೂ ವಹಿವಾಟು ನಡೆಸದ ಗ್ರಾಹಕರ ನಡುವೆ ಮಾಡಿದ 2,000 ರೂ.ಗಿಂತ ಹೆಚ್ಚಿನ ಮೊದಲ ಪಾವತಿಗೆ 4 ಗಂಟೆಗಳ ಸಮಯ ನಿರ್ಬಂಧವಿರುತ್ತದೆ. ಯುಪಿಐ ಸದಸ್ಯರು ಶೀಘ್ರದಲ್ಲೇ ‘ಟ್ಯಾಪ್ ಅಂಡ್ ಪೇ’ ಕಾರ್ಯವನ್ನು ಬಳಸಲು ಸಾಧ್ಯವಾಗುತ್ತದೆ.
ಪ್ರಿಪೇಯ್ಡ್ ಪಾವತಿ ಸಾಧನಗಳನ್ನು (PPI) ಬಳಸಿಕೊಂಡು ಮಾಡಿದ 2,000 ರೂ.ಗಿಂತ ಹೆಚ್ಚಿನ ನಿರ್ದಿಷ್ಟ ವ್ಯಾಪಾರಿ ಯುಪಿಐ ವಹಿವಾಟುಗಳಿಗೆ ಶೇ.1.1ರಷ್ಟು ಇಂಟರ್ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ.
ಯುಪಿಐ ವಹಿವಾಟುಗಳಿಗೆ ಎನ್ಪಿಸಿಐ ಹೊಸ ಗರಿಷ್ಠ ದೈನಂದಿನ ಪಾವತಿ ಮಿತಿಯನ್ನು 1 ಲಕ್ಷ ರೂ.ಗೆ ನಿಗದಿಪಡಿಸಿದೆ. ಆದರೆ ಡಿಸೆಂಬರ್ 8ರಂದು RBI ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಯುಪಿಐ ವಹಿವಾಟಿನ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸಿತು. ಹಿಂದಿನ ವಹಿವಾಟಿನ ಮಿತಿ 1 ಲಕ್ಷ ರೂ.ಗಳಾಗಿತ್ತು.