Photos: ಪ್ರಸಿದ್ದ ಮಾಡೆಲ್ Aishwarya Sheoranಗೆ ಯುಪಿಎಸ್‌ಸಿಯಲ್ಲಿ 93ನೇ ರ್ಯಾಂಕ್
ಮಂಗಳವಾರ ಯುಪಿಎಸ್‌ಸಿ ಫಲಿತಾಂಶದಲ್ಲಿ ಐಶ್ವರ್ಯಾ 93ನೇ ರ್ಯಾಂಕ್ ಗಳಿಸಿದ್ದಾರೆ.
ಯುಪಿಎಸ್‌ಸಿ ಎಂದರೆ ಕೇಂದ್ರ ನಾಗರಿಕ ಸೇವಾ ಆಯೋಗವು 2019 ರ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶವನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಐಶ್ವರ್ಯಾ ವಿಜ್ಞಾನದಂತಹ ಕಠಿಣ ವಿಷಯದೊಂದಿಗೆ ಶಾಲಾ ಶಿಕ್ಷಣವನ್ನು ಮುಗಿಸಿದ್ದಾರೆ. ನಂತರ ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ಪ್ರವೇಶ ಪಡೆದರು.
ಐಶ್ವರ್ಯಾ ಅವರ ತಂದೆ ಕರ್ನಲ್ ಅಜಯ್ ಕುಮಾರ್ ಎನ್‌ಸಿಸಿ ತೆಲಂಗಾಣ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್.
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಹೆಸರನ್ನೇ ನನ್ನ ತಾಯಿ ನನಗೆ ನಾಮಕರಣ ಮಾಡಿದ್ದಾರೆ ಎಂದು ಐಶ್ವರ್ಯಾ ತಮ್ಮ ಸಂದರ್ಶನಗಳಲ್ಲಿ ಹಲವು ಬಾರಿ ಹೇಳಿದ್ದಾರೆ.
ಮಿಸ್ ಇಂಡಿಯಾ 2017 ರ 21 ಫೈನಲಿಸ್ಟ್‌ಗಳಲ್ಲಿ ಐಶ್ವರ್ಯಾ ಆಯ್ಕೆಯಾಗಿದ್ದಾರೆ.
ಆಕೆಗೆ ಬ್ಯೂಟಿ ವಿಥ್ ಪರ್ಪಸ್ ಎಂಬ ಬಿರುದು ನೀಡಲಾಯಿತು.
ಐಶ್ವರ್ಯಾ ಅವರು ಅಧ್ಯಯನದಿಂದಾಗಿ ಸಾಮಾಜಿಕ ಮಾಧ್ಯಮ ಮತ್ತು ಮಾಧ್ಯಮದಿಂದ ದೂರ ಉಳಿದಿದ್ದಾರೆ.
ಈಗ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಉತ್ಸಾಹವನ್ನು ಶ್ಲಾಘಿಸುತ್ತಿದ್ದಾರೆ.
ಎಲ್ಲಾ ಫೋಟೋಗಳ ಕೃಪೆ: Instagram@AishwaryasheoranIAS