ಆಗಿದ್ದು ಸಣ್ಣ ಗಾಯ ಅಷ್ಟಕ್ಕೆ ನಟಿ ಆಸ್ಪತ್ರೆಗೆ ಅಡ್ಮಿಟ್‌..1 ಲಕ್ಷ ಫ್ರೆಶ್‌ ಗುಲಾಬಿ ಮಧ್ಯೆ ಪೋಸ್‌..ಫುಲ್‌ ಹೈ ಡ್ರಾಮಾ

Sun, 25 Aug 2024-11:27 am,

ಊರ್ವಶಿ ರೌಟೇಲಾ ಯಾರಿಗೆ ತಾನೆ ಗೊತ್ತಿಲ್ಲ ಹೇಲಿ, ವಿಶ್ವ ಸುಂದರಿಯಾಗಿ ಹೊರಹೊಮ್ಮಿದ ಇವರು ಸದ್ಯ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇದೀಚೆಗೆ ನಟಿ ಬೆಎಲಿಗಾದ ಸಣ್ಣ ಗಾಯದಿಂದ ಆಸ್ಪತ್ರೆಗೆ ದಾಕಲಾಗುವ ಮೂಲಕ ಅಭಿಮಾನಿಗಳನ್ನು ಅಚ್ಚರಿ ಮೂಡಿಸಿದ್ದರು. ಇದೀಗ ಇದರ ಬೆನ್ನಲ್ಲೆ ನಟಿಗೆ ವೇಗವಾಗಿ ಚೇತರಿಸಿಕೊಳ್ಳುವಂತೆ ಹೇಲಿ ವಿಶೇಷ ವ್ಯಕ್ತಿಯೊಬ್ಬರು ಒಂದು ಲಕ್ಷ ಗುಲಾಬಿ ಹೂವುಗಳನ್ನು ನಟಿಗಾಗಿ ಕಳುಹಿಸಿ ಕೊಟ್ಟಿದ್ದಾರೆ.   

ಊರ್ವಶಿ ರೌಟೇಲಾ ಸುಕಾ ಸುಮ್ಮನೆ ಸದಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ನಟಿ ಲಕ್ಷುರಿ ಲೈಫ್‌ ಲೀಡ್‌ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.  

ಇತ್ತೀಚೆಗೆ ನಟಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಖ್ಯಾತ ಗಾಯಕ ಯೋ ಯೋ ಹನಿ ಸಿಂಗ್‌ ನಟಿ  ಊರ್ವಶಿ ಅವರಿಗೆ ರೂ. 3 ಕೋಟಿ ಬೆಲೆ ಬಾಳುವ ಚಿನ್ನದ ಕೇಕ್‌ ತಂದು ಕತ್ತರಿಸಿದರು.  

ಸದಾ ಏನಾದರೊಂದು ಸುದ್ದಿಯೊಂದಿಗೆ ಈ ನಟಿ ಸದ್ದು ಮಾಡುತ್ತಾ ಇರುತ್ತಾರೆ. ಕೆಲವೊಮ್ಮೆ ರಿಷಬ್‌ ಪಂತ್‌ ಅವರ ವಿಡಿಯೋ ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ನಟಿ ಸಂಚಲನ ಸೃಷ್ಟಿಸುತ್ತಿರುತ್ತಾರೆ.  

ಸಧ್ಯ ಈ ನಟಿ ಯಾವ ಡೇಟಿಂಗ್‌ ಅಥವಾ ಯಾವುದೇ ಅಫೇರ್‌ ಕುರಿತಾಗಿ ಸುದ್ದಿಯಲ್ಲಿಲ್ಲ ಹೊರತಾಗಿ ಅವರು ಸುದ್ದಿಯಾಗಿರುವುದು ಅವರ ಬೆರಳಿಗಾದ ಸಣ್ಣ ಗಾಯದ ಕಾರಣದಿಂದ.  

ಹೌದು, ನಟಿ ಊರ್ವಶಿ ರೌಟೇಲಾ ಇತ್ತಿಚೆಗಷ್ಟೆ ತಮ್ಮ ಬೆರಳಿಗಾದ ಸಣ್ಣ ಗಾಯದಿಂದ ಆಸ್ಪತ್ರೆಗೆ ಅಡ್ಮಿಟ್‌ ಆಗಿದ್ದರು. ಇದನ್ನು ನೋಡಿದ ನೆಟ್ಟಿಗರು, ಅರ್ರೇ ಒಂದು ಸಣ್ಣ ಗಾಯಕ್ಕೆ ಆಸ್ಪತ್ರೆಗೆ ಅಡ್ಮಿಟ್‌ ಆಗೋದ ಇದೆಲ್ಲಾ ತುಂಬಾ ಅಧಿಕ ಪ್ರಸಂಗತನ ಎಂದು ಹೇಳಿದ್ದರು.  

ಇನ್ನೇನು ಅಭಿಮಾನಿಗಳು ಈ ವಿಷಯದಿಂದ ಹೊರ ಬರಬೇಕು ಎಂದುಕೊಂಡಾಗಲೇ ನಟಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾರೆ.  

ಬೆರಳಿನ ಗಾಯಕ್ಕೆ ಆಸ್ಪತ್ರೆಗೆ ಅಡ್ಮಿಟ್‌ ಆಗಿದ್ದು ತಪ್ಪು ಎಂದು ಜನ ಹೇಳುವಾಗಲೇ ನಟಿ 1 ಲಕ್ಷ ಗುಲಾಬಿಗಳೊಂದಿಗೆ ಪೋಸ್‌ ಕೊಟ್ಟಿದ್ದಾರೆ.  

ನಟಿ ಸದ್ಯ ಈ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಲಕ್ಷ ಗುಲಾಬಿ ಮಧ್ಯೆ ಕೂತು ಪೋಸ್‌ ಕೊಟ್ಟಿದ್ದಾರೆ.  

ಅಷ್ಟಕ್ಕೂ ನಟಿ ಈ ವಿಡಿಯೋ ಪೋಸ್ಟ್‌ ಮಾಡಿದ್ದಾರೆ ಸರಿ, ಅದರೆ ಆ ಹೂವಗಳನ್ನು ಕಳುಹಿಸಿಕೊಟ್ಟವರು ಯಾರು ಎಂಬುದು ಅಭಿಮಾನಿಗಳಲ್ಲಿ ಸಧ್ಯಕ್ಕಿರುವ ಪ್ರಶ್ನೆ.  

ಇನ್ನೂ ಈ ವಿಡಿಯೋಗೆ ವಿಭಿನ್ನ ರೀತಿಯಲ್ಲಿ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.  

ಪಬ್ಲಿಸಿಟಗಾಗಿ ನಟಿಯೇ ಇಂತಹದ್ದೊಂದು ಪ್ಲಾನ್‌ ಮಾಡಿ ಫೇಕ್‌ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link