Urvashi Rautela: ರೆಡ್‌ ಗೌನ್‌ನಲ್ಲಿ ಅಪ್ಸರೆಯಂತೆ ನಟ್ಟಿಗರ ಕಣ್ಮನ ಸೆಳೆದ ಐರಾವತ ಬೆಡಗಿ!

Fri, 17 May 2024-4:35 pm,

ಬಹುಭಾಷಾ ನಟಿ  ಊರ್ವಶಿ ರೌಟೇಲಾ ಕೇನ್ಸ್ ಚಲನಚಿತ್ರೋತ್ಸವದ ಮೊದಲ ದಿನದಂದು ಆಕರ್ಷಕವಾದ ರೆಡ್‌ ಗೌನ್‌ನಲ್ಲಿ ಕಾಣಿಸಿಕೊಂಡಿದ್ದು, ಹಾಗೆಯೆ ಕ್ಯಾಮೆರಾಗೆ ಬಿನ್ನ ವಿಭಿನ್ನವಾಗಿ ಪೋಸ್‌ಗಳನ್ನು ಕೊಟ್ಟಿದ್ದಾರೆ.

ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಸುಂದರವಾದ ಆಫ್ ಶೋಲ್ಡರ್ ರೆಡ್‌ ಗೌನ್‌ ಧರಿಸಿ ಮತ್ತು ಯಾವುದೇ ಆಭರಣ, ಇಯರಿಂಗ್ಸ್ ಅಥವಾ ನೆಕ್ಲೆಸ್  ಹಾಕಿಕೊಳ್ಳದೆ ನಿರಾಭರಣ ಚೆಲುವೆಯಾಗಿ ಕಾಣಿಸಿಕೊಂಡಿದ್ದಾರೆ.

ಬಿ-ಟೌನ್‌ ಬೆಡಗಿ ಊರ್ವಶಿ ರೌಟೇಲಾ ಕೂದಲಿಗೆ ಹೇರ್ ಕಲರಿಂಗ್ ಮಾಡಿಕೊಂಡಿದ್ದು ಹೈಲೈಟ್ ಆಗಿತ್ತು. ಹಾಗೆಯೇ ಕಣ್ಣಿಗೆ ಗಾಢ ಕೆಂಪು ಬಣ್ಣದ ಐ ಶ್ಯಾಡೋ ಮತ್ತು ಮುಖವನ್ನೇ ಹೈಲೈಟ್ ಆಗಿ ಕಾಣುವಂತೆ ಮೇಕಪ್‌ ಮಾಡಿಕೊಂಡಿದ್ದರು.

ನಟಿ ಊರ್ವಶಿ ರೌಟೇಲಾ ಕೇನ್ಸ್ ಚಲನಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ಎಂಟ್ರಿ  ನೀಡಿದಾಗ, ಈಕೆಯ ಲುಕ್ ವಾಹ್ ಎನಿಸುವಂತೆ  ಕಣ್ಣಗೆ ಬಿದ್ದಿದ್ದರು. ಈ ಫೋಟೋಗಳನ್ನು ನಟಿ ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

ಊರ್ವಶಿ ರೌಟೇಲಾ ಪೋಟೋಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈ ನಟಿಯ ಪೋಸ್ಟ್‌ಗೆ ಐವತ್ತೇಳೆ ಸಾವಿರಕ್ಕೂ ಹೆಚ್ಚು ಲೈಕ್ಸ್‌ ಹಾಗೂ ಕಾಮೆಂಟ್‌ಗಳ ಸುರಿ ಮಳೆಯೇ ಸುರಿದಿದೆ.

ಐರಾವತ ಸುಂದರಿ ಊರ್ವಶಿ ರೌಟೇಲಾ ಫೋಟೋಸ್‌ ನೋಡಿದ ನೆಟ್ಟಿಗರು ಈಕೆಯನ್ನು ರೆಡ್ ಚಿಲ್ಲೀ ಎಂದು ಮೆಣಸಿನ ಕಾಯಿಗೆ ಹೋಲಿಸಿದ್ದಾರೆ. ಮತ್ತೆ ಇನ್ನೂ ಕೆಲವರು ರೆಡ್ ರೋಸ್ ಎಂದು ಕರೆದಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link