Urvashi Rautela : ಪಾಕ್ ಬೌಲರ್ ಹೇಳಿಕೆ ನಂತರ ಸಖತ್ ಟ್ರೋಲ್‌ ಆದ ಊರ್ವಶಿ ರೌಟೇಲಾ

Sun, 11 Sep 2022-1:59 pm,

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ಏಷ್ಯಾ ಕಪ್ 2022 ರ ಭಾರತ ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ದುಬೈಗೆ ಬಂದಿದ್ದರು, ಈ ಪಂದ್ಯದ ನಂತರವೇ ಅವರು ಅಭಿಮಾನಿ ಮಾಡಿದ ಎಡಿಟ್ ವೀಡಿಯೊವನ್ನು Instagram ನಲ್ಲಿ ಹಂಚಿಕೊಂಡಿದ್ದರು. ಅವರು ಮತ್ತು ನಸೀಮ್ ಶಾ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ನಸೀಮ್ ಶಾ ಅವರನ್ನು ಊರ್ವಶಿ ರೌಟೇಲಾ ಬಗ್ಗೆ ಕೇಳಲಾಯಿತು, ಅದಕ್ಕೆ ಅವರು, 'ನನಗೆ ಊರ್ವಶಿ ಯಾರೆಂದು ಗೊತ್ತಿಲ್ಲ. ನನ್ನಗೆ ಸಧ್ಯ ಆ ರೀತಿಯ ಯಾವುದೇ ಪ್ಲಾನ್ ಇಲ್ಲ. ಸದ್ಯ ನನ್ನ ಗಮನ ಕ್ರಿಕೆಟ್‌ನತ್ತ ಮಾತ್ರ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಊರ್ವಶಿ ರೌಟೇಲಾ ಈಗ ಈ ವಿಷಯದ ಕುರಿತು ಇನ್‌ಸ್ಟಾ ಸ್ಟೋರಿಯಲ್ಲಿ, 'ಕೆಲವು ದಿನಗಳ ಹಿಂದೆ ನನ್ನ ತಂಡವು ನನಗೆ ಮತ್ತು ಅದಕ್ಕೆ ಸಂಬಂಧಿಸಿದ ಇತರರಿಗೆ ತಿಳಿಯದೆ ಕೆಲವು ಅಭಿಮಾನಿಗಳ ಎಡಿಟ್ ವೀಡಿಯೊಗಳನ್ನು (ಸುಮಾರು 11-12) ಹಂಚಿಕೊಂಡಿದೆ. ಈ ಬಗ್ಗೆ ಯಾವುದೇ ಸುದ್ದಿ ಮಾಡಬಾರದು ಎಂದು ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಪ್ರೀತಿಯಿಂದ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ನಸೀಮ್ ಶಾ 2022ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ತಂಡದಲ್ಲಿ ಭರ್ಜರಿ ಬೌಲಿಂಗ್ ಮಾಡಿ ಮಿಂಚಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್ ಬಾರಿಸಿ ತಂಡವನ್ನು ಗೆದ್ದುಕೊಂಡಿದ್ದರು, ಈ ಪಂದ್ಯದ ನಂತರ ಅವರ ಅಭಿಮಾನಿಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ.

ಈ ಹಿಂದೆ ಊರ್ವಶಿ ರೌಟೇಲಾ ಅವರ ಹೆಸರು ಭಾರತದ ಆಟಗಾರ ರಿಷಭ್ ಪಂತ್ ಜೊತೆಗೆ ಸಿಲುಕಿ ಸುದ್ದಿಯಾಗಿತ್ತು. ಏಷ್ಯಾಕಪ್‌ಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿತ್ತು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link