ವಿಶ್ವದಾಖಲೆ ಬರೆದ ಐಪಿಎಲ್‌ನ ಅನ್‌ಸೋಲ್ಡ್ ಆಟಗಾರ.. ಎಲ್ಲಾ ಫ್ರಾಂಚೈಸಿ ಮಾಲಿಕರಿಗೂ ಶುರುವಾಯ್ತು ಪಶ್ಚಾತಾಪ..!
Urvil patel: ಮೆಗಾ ಹರಾಜಿನಲ್ಲಿ ಮಾರಾಟವಾಗದ ಗುಜರಾತ್ ಕ್ರಿಕೆಟಿಗ ಉರ್ವಿಲ್ ಪಟೇಲ್ ವಿಧ್ವಂಸಕ ಶತಕದೊಂದಿಗೆ ದಾಖಲೆ ಸೃಷ್ಟಿಸಿದ್ದಾರೆ. ಈ ಮೂಲಕ ತಮ್ಮನ್ನು ಖರೀದಿಸದೆ ಇರುವ ತಂಡಗಳು ಪಶ್ಚಾತಾಪ ಪಡುವಂತೆ ಮಾಡಿದ್ದಾರೆ.
ಮಂಗಳವಾರ ಇಂದೋರ್‌ನಲ್ಲಿ ನಡೆದ ಉತ್ತರಾಖಂಡ ತಂಡದ ವಿರುದ್ಧದ ಪಂದ್ಯದಲ್ಲಿಉರ್ವಿಲ್ ಪಟೇಲ್ 41 ಎಸೆತಗಳನ್ನಾಡಿ 115 ರನ್ ಕಲೆ ಹಾಕಿ ದಾಖಲೆ ಬರೆದಿದ್ದಾರೆ. ಆಡಿದ ಅಷ್ಟು ಬಾಲ್‌ಗಳಲ್ಲಿ 8 ಬೌಂಡರಿ ಹಾಗೂ 11 ಸಿಕ್ಸರ್ ಸಿಡಿಸಿ ಎದುರಾಳಿ ತಂಡದ ಬೌಲರ್‌ಗಳ ಬೆವರಿಳಿಸಿದ್ದಾರೆ.
ತ್ರಿಪುರಾ ವಿರುದ್ಧದ ಪಂದ್ಯದಲ್ಲಿ ಕೂಡ ಉರ್ವಿಲ್ ಪಾಟೆಲ್ ಕೇವಲ 28 ಬಾಲ್‌ಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಈ ಮೂಲಕ ಟಿ20ಯಲ್ಲಿ ಅತ್ಯಂತ ವೇಗವಾಗಿ ಶತಕ ಸಿಡಿಸಿದ ಭಾರತೀಯ ಆಟಗಾರ ಎಂಬ ಇತಿಹಾಸ ಬರೆದಿದ್ದರು.
ರಿಷಬ್ ಪಂತ್ ಈ ಹಿಂದೆ 32 ಎಸೆತಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು, ಇದೀಗ 28 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಊರ್ವಿಲ್ ಹೊಸ ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಗುಜರಾತ್ ತಂಡದ ಬೆನ್ನೆಲುಬಾಗಿ ನಿಂತಿದ್ದ ಊರ್ವಿಲ್ ಪಾಟೆಲ್ ಕೇವಲ 13.1 ಓವರ್‌ಗಳಲ್ಲಿ ಗುರಿ ಬೆನ್ನಟ್ಟುವಲ್ಲಿ ಯಶಸ್ವಿಯಾದರು. ಮೊದಲು ಬ್ಯಾಟ್ ಮಾಡಿದ ಉತ್ತರಾಖಂಡ ತಂಡ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತ್ತು.
ಈ ರೀತಿ ಎರಡು ಪಂದ್ಯಗಳಲ್ಲಿ ಅತೀ ಕಡಿಮೆ ಚೆಂಡುಗಳನ್ನು ಎದುರಿಸಿ ಊರ್ವಿಲ್ ಪಾಟೆಲ್ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಐಪಿಎಲ್ ತಂಡದಲ್ಲಿ ಇವರನ್ನು ಆಯ್ಕೆ ಮಾಡದಿರುವ ಫ್ರಾಂಚೈಸಿಗಳು ಈ ಮೂಲಕ ಪಶ್ಚಾತಾಪ ಪಡುವಂತೆ ಮಾಡಿದ್ದಾರೆ.