ಗೆಳೆಯ ಟ್ರಂಪ್‌ ಗೆಲುವಿಗೆ ಪ್ರಧಾನಿ ಮೋದಿ ಸಂತಸ..! ಯುಸ್‌-ಭಾರತದ ಸಂಬಂಧ.. ಚೀನಾಗೆ ಕಂಟಕವಾಗುತ್ತಾ..?

Wed, 06 Nov 2024-4:09 pm,

"ಐತಿಹಾಸಿಕ ಚುನಾವಣಾ ಗೆಲುವಿಗಾಗಿ ನನ್ನ ಸ್ನೇಹಿತ ಡೊನಾಲ್ಡ್‌ ಟ್ರಂಪ್‌ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಹಿಂದಿನ ಅವಧಿಯ ಯಶಸ್ಸಿನಂತೆ, ಭಾರತ-ಯುಎಸ್ ಸಮಗ್ರ ಜಾಗತಿಕ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ನಾನು ಎದುರು ನೋಡುತ್ತಿದ್ದೇನೆ. ಒಟ್ಟಾಗಿ, ನಮ್ಮ ಜನರ ಸುಧಾರಣೆಗಾಗಿ ಮತ್ತು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ಕೆಲಸ ಮಾಡೋಣ. " ಎಂದು ಪ್ರಧಾನಿ ಮೋದಿ ತಮ್ಮ X ಖಾತೆಯಲ್ಲಿ ಬರೆದುಕೊಂಡಿದ್ದಾರೆ..   

ಡೊನಾಲ್ಡ್ ಟ್ರಂಪ್ ಅವರು 2024 ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ 277 ಚುನಾವಣಾ ಮತಗಳನ್ನು ಗಳಿಸುವ ಮೂಲಕ ಭರ್ಜರಿ ಜಯ ಸಾಧಿಸಿದ್ದಾರೆ. ಬುಧವಾರ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿ, ಟ್ರಂಪ್ ಈಗ 47ನೇ ಅಧ್ಯಕ್ಷರಾಗಿ ಶ್ವೇತಭವನಕ್ಕೆ ಮರಳಲು ಸಿದ್ಧರಾಗಿದ್ದಾರೆ.  

ಮೋದಿಮತ್ತು ಟ್ರಂಪ್ ಬಾಂಧವ್ಯ ಹಲವು ವರ್ಷಗಳಷ್ಟು ಹಳೆಯದು. ಸೆಪ್ಟೆಂಬರ್ 2019 ರಲ್ಲಿ ಯುಎಸ್ ಅಧ್ಯಕ್ಷರಾಗಿದ್ದ ಟ್ರಂಪ್ ಅವರು ಟೆಕ್ಸಾಸ್‌ನಲ್ಲಿ ಅಂದಾಜು 50,000 ಜನರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮೋದಿಗೆ ಆತಿಥ್ಯ ವಹಿಸಿದ್ದರು. ಹೂಸ್ಟನ್‌ನಲ್ಲಿ ನಡೆದ 'ಹೌಡಿ, ಮೋದಿ..!' ಕಾರ್ಯಕ್ರಮವು ಬಹುದೊಡ್ಡ ಯಶಸ್ಸು ಕಂಡಿತ್ತು..  

ಇನ್ನು 2020ರಲ್ಲಿ ಗುಜರಾತ್‌ನಲ್ಲಿ "ನಮಸ್ತೆ ಟ್ರಂಪ್‌" ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 120,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಭಾರತ ಸಮೃದ್ಧ, ಸ್ವತಂತ್ರ ರಾಷ್ಟ್ರವಾಗಿ ಉದಯಿಸಿರುವುದು ಪ್ರಪಂಚದಾದ್ಯಂತದ ಪ್ರತಿಯೊಂದು ರಾಷ್ಟ್ರಕ್ಕೂ ಉದಾಹರಣೆ.. ಅಂತ ನಮ್ಮ ದೇಶವನ್ನು ಟ್ರಂಪ್ ಹೊಗಳಿದ್ದರು.  

ಟ್ರಂಪ್‌ ಗೆಲುವು.. ಉಭಯ ದೇಶಗಳ ರಕ್ಷಣಾ ಮತ್ತು ಕಾರ್ಯತಂತ್ರದ ಗುರಿಗಳನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಅಲ್ಲದೆ, ಚೀನಾದ ವಿರುದ್ಧ ದೃಢವಾದ ನಿಲುವು ತೆಗೆದುಕೊಳ್ಳಲು ಇದು ಸಹಾಯವಾಗುತ್ತದೆ. ಮೋದಿಯವರಿಗೆ, ಇದು ತನ್ನ ಪ್ರಾದೇಶಿಕ ಮಹತ್ವಾಕಾಂಕ್ಷೆಗಳಲ್ಲಿ ಭಾರತಕ್ಕೆ ಸಹಾಯ ಮಾಡುವ ಜಾಗತಿಕ ನಾಯಕನೊಂದಿಗೆ ಮುಂದುವರೆಯಲು ಹೆಚ್ಚು ಸಹಾಯಕವಾಗುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ..  

ಭಾರತ-ರಷ್ಯಾ ವ್ಯಾಪಾರ, ಚೀನಾದೊಂದಿಗಿನ ಭಾರತದ ಸಂಬಂಧ, ಉತ್ಪಾದನೆ, ವ್ಯಾಪಾರ ವಹಿವಾಟಿ ಅವಕಾಶದವರೆಗೆ ಟ್ರಂಪ್ 2.0 ಹಲವು ರೀತಿಯಲ್ಲಿ ಭಾರತಕ್ಕೆ ಅನುಕೂಲಕರವಾಗಲಿದೆ. ಅಲ್ಲದೆ, ಬಹುಮುಖ್ಯ ವಿಚಾರವಾಗಿ ಚೀನಾವನ್ನು ಹತೋಟಿಯಲ್ಲಿ ತರಲು ಟ್ರಂಪ್ ಅಧ್ಯಕ್ಷತೆ ಬಹಳ ಸಹಾಯಕ ಎನ್ನಲಾಗಿದೆ.  

ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಅವರ ಬಲವಾದ ವೈಯಕ್ತಿಕ ಬಾಂಧವ್ಯ ಹೊಂದಿದ್ದು, ಇದರ ಪರಿಣಾಮವಾಗಿ ಮತ್ತೊಮ್ಮೆ ಟ್ರಂಪ್ ಅಧ್ಯಕ್ಷತೆಯು ಭಾರತೀಯ ವಿದೇಶಾಂಗ ನೀತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಧನಾತ್ಮಕಪರಿಣಾಮ ಬೀರಬಹುದು ಎಂದು ನಂಬಲಾಗಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link