ಈ ಚಹಾ ಪುಡಿಯನ್ನೇ ಬಳಸಿ ನೋಡಿ ಬಿಳಿ ಕೂದಲಾಗುವುದು ಕಡು ಕಪ್ಪು ! ಅದು ಕೂಡಾ ಒಂದೇ ಬಳಕೆಯಲ್ಲಿ !
ಬ್ಲಾಕ್ ಟೀಯಲ್ಲಿ ಟ್ಯಾನಿಕ್ ಆಸಿಡ್ ಇರುತ್ತದೆ. ಇದು ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪು ಮಾಡಲು ಸಹಾಯ ಮಾಡುತ್ತದೆ.
5-6 ಚಮಚ ಬ್ಲಾಕ್ ಟೀ ಪುಡಿ ಅಥವಾ 7 ಟೀ ಬ್ಯಾಗ್‌ಗಳನ್ನು ತೆರೆದು ಒಂದು ಕಪ್ ನೀರಿನಲ್ಲಿ ಕುದಿಸಿ. ನೀರು ಕಪ್ಪು ಬಣ್ಣಕ್ಕೆ ತಿರುಗುವಾಗ ಗ್ಯಾಸ್ ಆಫ್ ಮಾಡಿ.
ಈ ನೀರು ತಣ್ಣಗಾದ ಮೇಲೆ ಬಿಳಿ ಕೂದಲಿನ ಮೇಲೆ ಸಂಪೂರ್ಣವಾಗಿ ಹಚ್ಚಿ 30 ನಿಮಿಷಗಳವರೆಗೆ ಬಿಡಿ.ನಂತರ,ಕೂದಲನ್ನು ಉಗುರು ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ.
ಇನ್ನು 2 ಟೀ ಚಮಚ ಚಹಾ ಎಲೆಗಳಲ್ಲಿ 3 ಚಮಚ ಕಾಫಿಯನ್ನು ಬೆರೆಸಿ 15 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ.ನಂತರ,ಈ ನೀರನ್ನು ಕೂದಲಿಗೆ ಹಚ್ಚಿ ಅರ್ಧ ಘಂಟೆಯವರೆಗೆ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತಲೆಯನ್ನು ತೊಳೆಯಿರಿ.
ಈ ಎರಡು ಮನೆಮದ್ದುಗಳನ್ನು ಅಳವಡಿಸಿಕೊಂಡ ತಕ್ಷಣ ಶಾಂಪೂ ಮಾಡಬಾರದು. ಇಲ್ಲದಿದ್ದರೆ ಕೂದಲಿನ ಕಪ್ಪು ಬಣ್ಣ ಮಂದವಾಗುತ್ತದೆ.
ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ. ಇದು ಮನೆಮದ್ದುಗಳನ್ನು ಆಧರಿಸಿದ್ದು ಚಿಕಿತ್ಸೆಗೆ ಪರ್ಯಾಯವಲ್ಲ. ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.