White Hair Remedy: ಬಿಳಿ ಕೂದಲನ್ನು ಕಡು ಕಪ್ಪಾಗಿಸಲು ಕೊಬ್ಬರಿ ಎಣ್ಣೆ, ಹರಳೆಣ್ಣೆಯನ್ನು ಈ ರೀತಿ ಬಳಸಿ
ಇತ್ತೀಚಿನ ದಿನಗಳಲ್ಲಿ ತುಂಬಾ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುತ್ತದೆ. ಆದರೆ, ಕೊಬ್ಬರಿ ಎಣ್ಣೆಯನ್ನು ಸರಿಯಾದ ವಿಧಾನದಲ್ಲಿ ಬಳಸುವುದರಿಂದ ಈ ಸಮಸ್ಯೆಯನ್ನು ನಿವಾರಿಸಬಹುದು.
ಬಿಳಿ ಕೂದಲನ್ನು ಕಪ್ಪಾಗಿಸಲು ಬೇಕಾಗುವ ಪದಾರ್ಥಗಳು: ಸಮ ಪ್ರಮಾಣದ ಕೊಬ್ಬರಿ ಎಣ್ಣೆ, ಹರಳೆಣ್ಣೆ, ಕರಿಬೇವಿನ ಸೊಪ್ಪಿನ ಪುಡಿ, ಮೆಂತ್ಯ ಪುಡಿ
ಮೊದಲಿಗೆ ಒಂದು ಬಟ್ಟಲಿನಲ್ಲಿ ಕೊಬ್ಬರಿ ಎಣ್ಣೆ ಮತ್ತು ಹರಳೆಣ್ಣೆಯನ್ನು ಸರಿಯಾದ ಪ್ರಮಾಣದಲ್ಲಿ ಹಾಕಿ. ಇದರಲ್ಲಿ ಒಣಗಿಸಿ ಪುಡಿ ಮಾಡಿದ 2 ಸ್ಪೂನ್ ಕರಿಬೇವಿನ ಸೊಪ್ಪಿನ ಪುಡಿ, 2 ಚಮಚ ಮೆಂತ್ಯ ಪುಡಿಯನ್ನು ಬೆರೆಯಿಸಿಡಿ. ಎರಡು ಗಂಟೆಕಾಲ ಹಾಗೆ ಬಿಡಿ.
ನೀವು ತಯಾರಿಸಿಟ್ಟ ಹೇರ್ ಮಾಸ್ಕ್ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ. ನೆತ್ತಿಯ ಮೇಲೆ ಸಂಪೂರ್ಣವಾಗಿ ಹಚ್ಚಿ. ಬಳಿಕ ಒಂದೆರಡು ಗಂಟೆ ಹೇರ್ ಮಾಸ್ಕ್ ಡ್ರೈ ಆಗಲು ಬಿಡಿ.
ಹೇರ್ ಮಾಸ್ಕ್ ಹಚ್ಚಿ ಎರಡು ಗಂಟೆಗಳ ಬಳಿಕ ಸೌಮ್ಯವಾದ ಶಾಂಪೂವಿನಿಂದ ಹೇರ್ ವಾಶ್ ಮಾಡಿ.
ವಾರದಲ್ಲಿ ಒಂದೆರಡು ಬಾರಿ ಈ ಹೇರ್ ಮಾಸ್ಕ್ ಬಳಸುವುದರಿಂದ ನಿಮ್ಮ ಬಿಳಿ ಕೂದಲು ಕಡು ಕಪ್ಪಾಗುತ್ತದೆ. ಅಷ್ಟೇ ಅಲ್ಲ, ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.