ಕಾಫಿ-ಟೀ ಪುಡಿಯಲ್ಲಿ ಈ ಎರಡು ಪದಾರ್ಥ ಬಳಸಿ ಬುಡದಿಂದಲೂ ಕಡು ಕಪ್ಪಾದ ಕೂದಲು ನಿಮ್ಮದಾಗಿಸಿ!
ಬಿಳಿ ಕೂದಲಿಗೆ ಪದೇ ಪದೇ ಹೇರ್ ಡೈ ಹಚ್ಚುತ್ತೀರಾ...? ಇದರಿಂದ ಆ ಕ್ಷಣಕ್ಕೆ ಕೂದಲು ಕಪ್ಪಗಾಗುತ್ತದೆ. ಆದರೆ, ಕೆಲ ದಿನಗಳ ಬಳಿಕ ಮತ್ತೆ ಕೂದಲಿಗೆ ಬಣ್ಣ ಹಚ್ಚಬೇಕಾಗುತ್ತದೆ.
ಆದರೆ, ನೀವು ನಿಮ್ಮ ಮನೆಯಲ್ಲಿರುವ ಟೀ ಪುಡಿ, ಕಾಫಿ ಪುಡಿ, ಕೊಬ್ಬರಿ ಎಣ್ಣೆ ಮತ್ತು ನಿಂಬೆ ಹಣ್ಣು ಬಳಸಿ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು.
ಒಂದೆರಡು ಸ್ಪೂನ್ ಕೊಬ್ಬರಿ ಎಣ್ಣೆಗೆ, ಅರ್ಧ ಚಮಚ ನಿಂಬೆ ಹಣ್ಣನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಎರಡೆರಡು ಚಮಚ ಕಾಫಿ-ಟೀ ಪುಡಿಯನ್ನು ಬೆರೆಸಿ ಸ್ವಲ್ಪ ಹೊತ್ತು ಹಾಗೆ ಇಡಿ. ಬಳಿಕ ಇದನ್ನು ಶೋಧಿಸಿಕೊಳ್ಳಿ.
ನಂತರ ಶೋಧಿಸಿಟ್ಟ ಡಿಕಾಕ್ಷನ್ ಅನ್ನು ಬಿಸಿ ಮಾಡಿ. ನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರಿಟ್ಟು ಅದು ಬಿಸಿಯಾದ ಬಳಿಕ ಆ ನೀರಿನಲ್ಲಿ ಶೋಧಿಸಿರುವ ಡಿಕಾಕ್ಷನ್ ಬಟ್ಟಲನ್ನು ಇಟ್ಟು ಸಣ್ಣ ಉರಿಯಲ್ಲಿ 5 ನಿಮಿಷ ಡಬಲ್ ಬಾಯ್ಲಿಂಗ್ ಮಾಡಿ.
ಈ ರೀತಿಯಾಗಿ ತಯಾರಿಸಿದ ಹೇರ್ ಡೈ ಅನ್ನು ಕೂದಲಿನ ಬುಡದಿಂದಲೂ ತುದಿಯವರೆಗೂ ಹಚ್ಚಿ ಲಘುವಾಗಿ ಮಸಾಜ್ ಮಾಡಿ.
ಇದರ ಉತ್ತಮ ಫಲಿತಾಂಶಕ್ಕಾಗಿ ರಾತ್ರಿ ವೇಳೆ ಈ ಹೇರ್ ಪ್ಯಾಕ್ ಹಾಕಿ ಮಸಾಜ್ ಮಾಡಿ, ಮರುದಿನ ಹೇರ್ ವಾಶ್ ಮಾಡುವುದು ತುಂಬಾ ಪ್ರಯೋಜನಕಾರಿ.
ಈ ಹೇರ್ ಪ್ಯಾಕ್ ಬಳಸಿದಾಗ ಶಾಂಪೂ ಬದಲಿಗೆ ಸೀಗೆಪುಡಿ ಅಥವಾ ಸೀಗೆಕಾಯಿ ಬಳಸುವುದರಿಂದ ಕೂದಲು ಕಡು ಕಪ್ಪಾಗುತ್ತದೆ.
ಈ ಹೇರ್ ಪ್ಯಾಕ್ ಅನ್ನು ಒಮ್ಮೆ ಹಚ್ಚಿದರೆ ಸಾಕು ಕೂದಲು ಕಪ್ಪಾಗುತ್ತದೆ. ಆದರೆ, ನಿಯಮಿತವಾಗಿ ಇದನ್ನು ಬಳಸುತ್ತಾ ಬಂದರೆ ಕೂದಲು ಒಳಗಿನಿಂದಲೂ ಕಪ್ಪಾಗುತ್ತದೆ.
ಮನೆಯಲ್ಲಿಯೇ ತಯಾರಿಸಿದ ಈ ಹೋಂ ಮೇಡ್ ಹೇರ್ ಡೈ ಬಿಳಿ ಕೂದಲನ್ನು ಕಪ್ಪಾಗಿಸುವುದಷ್ಟೇ ಅಲ್ಲ, ಬಿಳಿಕೂದಲು ಬಾರದಂತೆ ತಡೆಯುತ್ತದೆ. ಶಾಶ್ವತವಾದ ಕಪ್ಪು ಕೂದಲನ್ನು ನೀಡುವ ಈ ಹೇರ್ ಡೈ ಬಳಕೆಯಿಂದ ಯಾವುದೇ ಅಡ್ಡಪರಿಣಾಮಗಳೂ ಇರುವುದಿಲ್ಲ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.