ಕೊತ್ತಂಬರಿ ಬೀಜವನ್ನು ರಾತ್ರಿ ಮಲಗುವ ಮುನ್ನ ಹೀಗೆ ಬಳಸಿ! ಬೆಳಗಾಗುವಷ್ಟರಲ್ಲಿ ಹರಳುಗಟ್ಟಿದ ಯೂರಿಕ್ ಆಸಿಡ್ ಕರಗುವುದು!
ಕೊತ್ತಂಬರಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿ ಕಂಡು ಬರುತ್ತದೆ.ಕೊತ್ತಂಬರಿ ಬೀಜಗಳ ಸೇವನೆಯಿಂದ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಅದರಲ್ಲಿ ಯೂರಿಕ್ ಆಸಿಡ್ ಕೂಡಾ ಒಂದು.
ಕೊತ್ತಂಬರಿ ನೀರನ್ನು ಸೇವಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿರುವ ಯುರಿಕ್ ಆಸಿಡ್ ಅನ್ನು ದೇಹದಿಂದ ಹೊರ ಹಾಕಬಹುದು.ಇದು ದೇಹವನ್ನು ನಿರ್ವಿಷಗೊಳಿಸುವಲ್ಲಿ ಸಹಾಯ ಮಾಡುತ್ತದೆ.
ಕೊತ್ತಂಬರಿ ಬೀಜಗಳು ಮೂತ್ರವರ್ಧಕ ಗುಣಗಳನ್ನು ಹೊಂದಿದೆ. ಹಾಗಾಗಿ ಇದು ಮೂತ್ರದೊಂದಿಗೆ ದೇಹದಿಂದ ಯೂರಿಕ್ ಆಸಿಡ್ ಅನ್ನು ತೆಗೆದುಹಾಕುತ್ತದೆ. ಯೂರಿಕ್ ಆಸಿಡ್ ನಿಂದ ಬಳಲುತ್ತಿರುವವರು ಕೊತ್ತಂಬರಿ ನೀರು ಅಥವಾ ಕೊತ್ತಂಬರಿ ಕಷಾಯವನ್ನು ಸೇವಿಸಬಹುದು.
ಈ ನೀರನ್ನು ರಾತ್ರಿ ಮಲಗುವ ಮುನ್ನ ಕುಡಿದರೆ ಬೆಳಗಾಗುವಷ್ಟರಲ್ಲಿ ಹರಳುಗತ್ತಿರುವ ಯೂರಿಕ್ ಆಸಿಡ್ ಕರಗಲು ಆರಂಭವಾಗುತ್ತದೆ. ಬೆಳಗ್ಗೆ ಮೂತ್ರದ ಮೂಲಕ ದೇಹದಿಂದ ಹೊಇರ ಹೋಗುತ್ತದೆ. ಇದು ಕೀಲು ನೋವನ್ನು ಕೂಡಾ ಕಡಿಮೆ ಮಾಡುತ್ತದೆ.
ಕೊತ್ತಂಬರಿ ನೀರನ್ನು ತಯಾರಿಸಲು, ಒಂದು ಚಮಚ ಕೊತ್ತಂಬರಿ ಬೀಜಗಳನ್ನು ತೆಗೆದುಕೊಂಡು ಅವುಗಳನ್ನು ಎರಡು ಲೋಟ ನೀರಿನಲ್ಲಿ ಹಾಕಿ ಕುದಿಸಬೇಕು. ನೀರು ಚೆನ್ನಾಗಿ ಕುದಿದು ಅರ್ಧದಷ್ಟಾಗುವಾಗ ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ.
ಇನ್ನು ಯಾವುದೇ ರೀತಿಯ ಪಲ್ಯ ಅಥವಾ ಸಲಾಡ್ ಮಾಡುವಾಗಲೂ ಕೊತ್ತ್ಮಬರಿ ಬೀಜವನ್ನು ಪುಡಿ ಮಾಡಿ ಬಳಸಬಹುದು. (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE KANNADA NEWS ಇದನ್ನು ಖಚಿತಪಡಿಸುವುದಿಲ್ಲ.)