ತ್ವಚೆಯ ಸೌಂದರ್ಯ ಹೆಚ್ಚಿಸಲು ಸೌತೆಕಾಯಿಯನ್ನು ಈ ರೀತಿ ಬಳಸಿ
ಪ್ರತಿ ಋತುಮಾನದಲ್ಲೂ ಚರ್ಮದ ಆರೋಗ್ಯದ ಬಗ್ಗೆ ಕಾಳಜಿ ಅತ್ಯಗತ್ಯವಾಗಿದೆ. ನೀವು ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಸೌತೆಕಾಯಿಯ ಸಹಾಯದಿಂದಲೂ ನಿಮ್ಮ ಚರ್ಮವನ್ನು ಪುನರ್ಯೌವನಗೊಳಿಸಬಹುದು. ಇದಕ್ಕಾಗಿ ಸೌತೆಕಾಯಿಯಿಂದ ಮಾಡಿದ ಫೇಸ್ ಪ್ಯಾಕ್‌ಗಳು ತುಂಬಾ ಪ್ರಯೋಜನಕಾರಿ ಆಗಿವೆ. ಅವುಗಳೆಂದರೆ...
ಓಟ್ಸ್, ಮೊಸರು ಮತ್ತು ಜೇನುತುಪ್ಪದೊಂದಿಗೆ ಸೌತೆಕಾಯಿ: ಅರ್ಧ ಸೌತೆಕಾಯಿಯನ್ನು ತೆಗೆದುಕೊಂಡು ಚೆನ್ನಾಗಿ ರುಬ್ಬಿ ಅದಕ್ಕೆ ಒಂದು ಚಮಚ ಓಟ್ಸ್, ಮೊಸರು ಮತ್ತು ಜೇನುತುಪ್ಪವನ್ನು ಬೆರೆಸಿ ಅದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ. 15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ಇದರಿಂದ ತ್ವಚೆ ಸಾಫ್ಟ್ ಆಗುತ್ತದೆ.
ನಿಂಬೆ ರಸ ಮೊತ್ತೆಯೊಂದಿಗೆ ಸೌತೆಕಾಯಿ: ಮೇಲೆ ತಿಳಿಸಿದಂತೆ ಸೌತೆಕಾಯಿಯನ್ನು ರುಬ್ಬಿಕೊಂಡು ಅದರಲ್ಲಿ ನಿಂಬೆ ರಸ ಮತ್ತು ಮೊಟ್ಟೆಯ ಬಿಳಿಭಾಗವನ್ನು ಹಾಕಿ ಬೆರೆಸಿ. ಇದನ್ನು ಮುಖಕ್ಕೆ ಹಚ್ಚಿ 10-15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ಇದರಿಂದ ಒಣ ತ್ವಚೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಜೇನುತುಪ್ಪ, ನಿಂಬೆ ಮತ್ತು ಪುದೀನದೊಂದಿಗೆ ಸೌತೆಕಾಯಿ: ನಿಂಬೆ, ಜೇನುತುಪ್ಪ ಮತ್ತು ಪುದೀನ ಎಲೆಗಳನ್ನು ಒಟ್ಟಿಗೆ ಮಿಶ್ರಣ ಮಾಡಿ, ನಂತರ ಅದಕ್ಕೆ 4-5 ಚಮಚ ಸೌತೆಕಾಯಿ ರಸವನ್ನು ಸೇರಿಸಿ, ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ಸಾಮಾನ್ಯ ನೀರಿನಿಂದ ಮುಖ ತೊಳೆಯಿರಿ. ಈ ಫೇಸ್ ಪ್ಯಾಕ್ ಒಳಗಿನಿಂದ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ.
ರೋಸ್ ವಾಟರ್ ಮತ್ತು ಮುಲ್ತಾನಿ ಮಿಟ್ಟಿಯೊಂದಿಗೆ ಸೌತೆಕಾಯಿ: 3 ಚಮಚ ಸೌತೆಕಾಯಿ ರಸ ಮತ್ತು 12 ಹನಿ ರೋಸ್ ವಾಟರ್ ತೆಗೆದುಕೊಂಡು, ಅದಕ್ಕೆ ಸ್ವಲ್ಪ ಮುಲ್ತಾನಿ ಮಿಟ್ಟಿ ಸೇರಿಸಿ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಅನ್ವಯಿಸಿ. 10-15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ಇದು ಮುಖದಲ್ಲಿ ಮೊಡವೆಗಳನ್ನು ಹೋಗಲಾಡಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.