ಸೋಂಪಿನ ನೀರಿಗೆ ಈ ಪುಡಿ ಬೆರಸಿ ಸೇವಿಸಿದರೆ ಹೈ ಬ್ಲಡ್ ಶುಗರ್ ಕೂಡಾ ನಾರ್ಮಲ್ ಆಗುವುದು !
ಆಹಾರ ಮತ್ತು ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವ ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.ಇದಲ್ಲದೆ,ಕೆಲವು ಮನೆಮದ್ದುಗಳು ಕೂಡಾ ಈ ಸಮಸ್ಯೆಯಿಂದ ಹೊರ ಬರಲು ಸಹಾಯ ಮಾಡುತ್ತದೆ.
ಸೋಂಪನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.ಸೋಂಪಿನಲ್ಲಿರುವ ಫೈಟೊಕೆಮಿಕಲ್‌ಗಳು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತವೆ.ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಸೋಂಪನ್ನು ಅನ್ನು ಹಸಿಯಾಗಿಯೇ ತಿನ್ನಬಹುದು.ಅಥವಾ ಮಸಾಲೆ ರೀತಿಯಲ್ಲಿಯೂ ಸೇವಿಸಬಹುದು. ಸೋಂಪಿನ ಎಣ್ಣೆ ಮತ್ತು ಅದರ ಬೀಜಗಳು ಎರಡೂ ಪ್ರಯೋಜನಕಾರಿಯಾಗಿದೆ.
ಮಧುಮೇಹ ರೋಗಿಗಳು ಸೋಂಪಿನ ಟೀ ತಯಾರಿಸಿ ಕುಡಿಯಬಹುದು. ಇದಕ್ಕಾಗಿ, ಬಾಣಲೆಯಲ್ಲಿ 1 ಕಪ್ ನೀರು ಹಾಕಿ ಬಿಸಿ ಮಾಡಿ. ಸ್ವಲ್ಪ ಸಮಯದ ನಂತರ ಅದಕ್ಕೆ ಸ್ವಲ್ಪ ಸೋಂಪು ಮತ್ತು ಶುಂಠಿ ಸೇರಿಸಿ ಕಡಿಮೆ ಉರಿಯಲ್ಲಿ ಬೇಯಲು ಬಿಡಿ.ಇದು ಮಧುಮೇಹಿಗಳಿಗೆ ಸಾಕಷ್ಟು ಪ್ರಯೋಜನ ನೀಡಲಿದೆ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE KANNADA NEWS ಇದನ್ನು ಖಚಿತಪಡಿಸುವುದಿಲ್ಲ.)