ಹೆನ್ನಾ ಪುಡಿಯಲ್ಲಿ ಇವುಗಳನ್ನು ಬೆರೆಸಿ ಹೆಚ್ಚಿದ್ರೆ ಕಡು ಕಪ್ಪಾದ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತೆ
ನೀವು ಬಿಳಿ ಕೂದಲನ್ನು ಮರೆಮಾಚಲು ಮೆಹಂದಿ ಬಳಸುತ್ತೀರಾ? ಒಂದು ವಿಶೇಷ ನೀರಿನಲ್ಲಿ ಬೆರೆಸಿ ಹಚ್ಚುವುದು ಹೆಚ್ಚು ಲಾಭದಾಯಕವಾಗಿದೆ.
ಈ ಹೇರ್ ಡೈ ತಯಾರಿಸಲು ಮೊದಲಿಗೆ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಅದರಲ್ಲಿ ಅಕ್ಕಿ, ಮೆಂತ್ಯ ಕಾಳುಗಳು, ಟೀ ಪುಡಿ ಎಲ್ಲವನ್ನೂ ಎರಡೆರಡು ಸ್ಪೂನ್ ಹಾಕಿ ಚೆನ್ನಾಗಿ ಕುದಿಸಿ.
ತಯಾರಿಸಿಟ್ಟ ವಿಶೇಷ ನೀರಿನಲ್ಲಿ ನೀವು ಬಳಸುವ ಹೆನ್ನಾ ಪೌಡರ್ ಅಥವಾ ಮೆಹಂದಿ ಪುಡಿಯನ್ನು ಹಾಕಿ ಒಂದೂ ಗಂಟಿಲ್ಲದಂತೆ ಚೆನ್ನಾಗಿ ಮಿಕ್ಸ್ ಮಾಡಿ.
ಕೂದಲಿಗೆ ಹಚ್ಚಲು ತಯಾರಾಗಿರುವ ಮೆಹಂದಿ ಹೇರ್ ಡೈನಲ್ಲಿ ತಾಜಾ ಅಲೋವೆರಾ ಜೆಲ್ ಅನ್ನು ಹಾಕಿ ಚೆನ್ನಾಗಿ ಹೊಂದಿಕೊಳ್ಳುವಂತೆ ಬೆರೆಸಿ.
ಈ ಹೇರ್ ಮಾಸ್ಕ್ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ ಅದು ಪೂರ್ಣವಾಗಿ ಡ್ರೈ ಆದ ಬಳಿಕ ಸೌಮ್ಯ ಶಾಂಪೂವಿನಿಂದ ಹೇರ್ ವಾಶ್ ಮಾಡಿ.
ಈ ಹೇರ್ ಡೈ ಬಳಕೆಯಿಂದ ಒಂದೇ ಬಾರಿಗೆ ನಿಮ್ಮ ಕೂದಲು ಕಡು ಕಪ್ಪಾಗುತ್ತದೆ.
ಈ ಹೆನ್ನಾ ಹೇರ್ ಡೈ ಅನ್ನು ನಿಯಮಿತವಾಗಿ ಬಳಸುವುದರಿಂದ ಕಪ್ಪಾದ ಕಾಂತಿಯುತ ರೇಷ್ಮೆಯಂತಹ ಕೂದಲನ್ನು ಹೊಂದಲು ಸಹಕಾರಿ ಆಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.