ಪೇರಳೆ ಅಲ್ಲ ಈ ಹಣ್ಣಿನ ಎಲೆಯನ್ನು ಒಮ್ಮೆ ಬಳಸಿದರೆ ಬಿಳಿ ಕೂದಲು ಗಾಢ ಕಪ್ಪು ಬಣ್ಣಕ್ಕೆ ತಿರುವುದು ಗ್ಯಾರಂಟಿ !ಬಳಸುವ ವಿಧಾನ ಹೀಗೆಯೇ ಇದ್ದರೆ ಮಾತ್ರ !
ಮೆಲನಿನ್ ಕೊರತೆಯಾದಾಗ ಕೂದಲು ಬೆಳ್ಳಗಾಗುತ್ತದೆ. ಕಡಿಮೆ ಪೋಷಕಾಂಶದ ಆಹಾರವನ್ನು ಸೇವಿಸುವುದರಿಂದ ಕೂಡಾ ಯುವಕರು ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.ಅತಿಯಾದ ಒತ್ತಡ ತೆಗೆದುಕೊಳ್ಳುವವರ ಕೂದಲು ಕೂಡಾ ಬೇಗನೆ ಬಿಳಿಯಾಗುತ್ತದೆ.
ಬಿಳಿ ಕೂದಲನ್ನು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿಸಬೇಕಾದರೆ ಮಾವಿನ ಎಲೆಗಳನ್ನು ಬಳಸಿ.ಈ ಎಲೆಗಳು ಬಿಳಿ ಕೂದಲಿಗೆ ನೈಸರ್ಗಿಕವಾಗಿ ಕಪ್ಪು ಬಣ್ಣ ನೀಡುತ್ತದೆ.ಆದರೆ,ಈ ಎಲೆಗಳನ್ನು ಬಳಸುವ ಸರಿಯಾದ ವಿಧಾನ ತಿಳಿದಿರಬೇಕು.
ಮಾವಿನ ಎಲೆಗಳಲ್ಲಿ ಕಂಡುಬರುವ ಪೋಷಕಾಂಶಗಳು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ವಿಟಮಿನ್ ಎ,ವಿಟಮಿನ್ ಬಿ,ವಿಟಮಿನ್ ಸಿ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ತಾಮ್ರ ಇದರಲ್ಲಿ ಕಂಡುಬರುತ್ತದೆ. ಇದಲ್ಲದೇ ಮಾವಿನ ಎಲೆಗಳಲ್ಲಿ ಫಿನಾಲ್ ಎಂಬ ಆ್ಯಂಟಿ ಆಕ್ಸಿಡೆಂಟ್ ಇದ್ದು ನಮ್ಮ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ, ಮಾತ್ರವಲ್ಲ ಕೂದಲು ಮತ್ತೆ ಕಪ್ಪಾಗುವಂತೆ ಮಾಡುತ್ತದೆ.
ಮೊದಲು ಮಾವಿನ ಎಲೆಗಳನ್ನು ಅರೆದು ಪೇಸ್ಟ್ ತಯಾರಿಸಿ. ಈಗ ಅದನ್ನು ಕೂದಲಿಗೆ ಹಚ್ಚಿ ಮತ್ತು ಸುಮಾರು ಅರ್ಧ ಘಂಟೆಯವರೆಗೆ ಬಿಡಿ.ನಂತರ ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ. ನಿಯಮಿತವಾಗಿ ಈ ವಿಧಾನವನ್ನು ಅನುಸರಿಸಿದರೆ ಕೆಲವೇ ವಾರಗಳಲ್ಲಿ ನಿಮ್ಮ ಕೂದಲು ಕಡು ಕಪ್ಪಾಗುವುದು.
ಮಾವಿನ ಎಲೆಗಳನ್ನು ಕೆಲವು ಪೇರಲ ಎಲೆಗಳೊಂದಿಗೆ ತೆಗೆದುಕೊಂಡು ಅವುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ನೀರಿನೊಂದಿಗೆ ಕುದಿಸಿ.ನೀರಿನ ಬಣ್ಣ ಬದಲಾದ ತಕ್ಷಣ,ಗ್ಯಾಸ್ ಆಫ್ ಮಾಡಿ. ಈಗ ಈ ನೀರನ್ನು ಕೂದಲಿನ ಬುಡಕ್ಕೆ ಹಚ್ಚಿ. ಹೀಗೆ ನಿಯಮಿತವಾಗಿ ಮಾಡುವುದರಿಂದ ಕೂದಲು ಶೀಘ್ರವೇ ಕಪ್ಪಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ZEE NEWS ಇದನ್ನು ಖಚಿತಪಡಿಸುವುದಿಲ್ಲ.