ಈರುಳ್ಳಿ, ಅಕ್ಕಿಯನ್ನು ಈ ರೀತಿ ಬಳಸಿ ಕಡು ಕಪ್ಪಾದ ಉದ್ದವಾದ ಕಾಂತಿಯುತ ಕೂದಲು ನಿಮ್ಮದಾಗುತ್ತೆ!
ಕೂದಲು ಉದುರುವಿಕೆ, ಡ್ಯಾಂಡ್ರಫ್, ಬಿಳಿ ಕೂದಲಿನ ಸಮಸ್ಯೆಗಳನ್ನು ಹೋಗಲಾಡಿಸಿ ಉದ್ದವಾದ ಕಪ್ಪು ಕಾಂತಿಯುತ ಕೂದಲಿಗಾಗಿ ಈರುಳ್ಳಿ ತುಂಬಾ ಲಾಭದಾಯಕವಾಗಿದೆ.
ನಿಮ್ಮ ಬಿಳಿ ಕೂದಲಿನ ಸಮಸ್ಯೆ ನಿವಾರಿಸಲು ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ತುಂಬಾ ಪ್ರಯೋಜನಕಾರಿ ಆಗಿವೆ.
ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಕೂದಲು ಉದುರುವಿಕೆ, ಡ್ಯಾಂಡ್ರಫ್, ಬೂದು ಕೂದಲಿನ ಸಮಸ್ಯೆಗಳನ್ನು ನಿವಾರಿಸಬಹುದು. ಇದಕ್ಕಾಗಿ ಬೇಕಾಗುವ ಸಾಮಾಗ್ರಿಗಳೆಂದರೆ... * ಈರುಳ್ಳಿ- 2 * ಅಕ್ಕಿ - 1 ಚಮಚ * ಸಾಸಿವೆ ಎಣ್ಣೆ- 1 ಕಪ್ * ಮೆಂತ್ಯ ಕಾಳು- 1 ಸ್ಪೂನ್ * ಕಪ್ಪು ಎಳ್ಳು- 1 ಸ್ಪೂನ್ * ಲವಂಗ- 4-5
ಮೊದಲಿಗೆ ಎರಡು ಈರುಳ್ಳಿಯಲ್ಲಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿ, ಇದರಲ್ಲಿ ಒಂದು ಚಮಚ ಅಕ್ಕಿ ಹಾಕಿ ಜೊತೆಗೆ ಒಂದು ಕಪ್ ಸಾಸಿವೆ ಎಣ್ಣೆ ಬೆರೆಸಿ ಸಣ್ಣ ಉರಿಯಲ್ಲಿ ಕಾಯಿಸಿ. ಎಣ್ಣೆ ಸಣ್ಣ ಸಣ್ಣ ಕುದಿ ಬರುತ್ತಿದ್ದಂತೆ ಇದರಲ್ಲಿ 1 ಸ್ಪೂನ್ ಮೆಂತ್ಯ ಕಾಳು, 1 ಸ್ಪೂನ್ ಕಪ್ಪೆಳ್ಳು ಜೊತೆಗೆ 4-5 ಲವಂಗ ಹಾಕಿ ಈರುಳ್ಳಿ ಬಣ್ಣ ಬದಲಾಗುವವರೆಗೂ ಕುದಿಸಿ.
ಎಣ್ಣೆ ತಣ್ಣಗಾದ ಬಳಿಕ ಅದನ್ನು ಶೋಧಿಸಿ ಕೂದಲಿಗೆ ಬಳಸಬಹುದು.
ನೀವು ಮನೆಯಲ್ಲಿ ತಯಾರಿಸಿದ ಈ ಎಣ್ಣೆಯನ್ನು ಸ್ನಾನ ಮಾಡುವ 2 ಗಂಟೆಗಳ ಮೊದಲು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ ಮಸಾಜ್ ಮಾಡಿ. ಬಳಿಕ ಸೌಮ್ಯವಾದ ಶಾಂಪೂವಿನಿಂದ ಹೇರ್ ವಾಶ್ ಮಾಡಿ.
ವಾರಕ್ಕೆರಡು ಬಾರಿ ಮನೆಯಲ್ಲಿ ತಯಾರಿಸಿದ ಈ ಎಣ್ಣೆ ಬಳಸುವುದರಿಂದ ಕೇವಲ ಬಿಳಿ ಕೂದಲನ್ನು ಕಪ್ಪಾಗಿಸುವುದು ಮಾತ್ರವಲ್ಲ, ಕೂದಲುದುರುವಿಕೆ ಸಮಸ್ಯೆ ಹಾಗೂ ತಲೆಹೊಟ್ಟಿನ ಸಮಸ್ಯೆಯಿಂದಲೂ ಪರಿಹಾರ ಪಡೆಯಬಹುದು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.